Site icon Vistara News

Road accident : ಸ್ಕಿಡ್‌ ಆಗಿ ಘಟಪ್ರಭಾ ನದಿಗೆ ಬಿದ್ದ ಬೈಕ್‌; ನೀರಿನಲ್ಲಿ ಕೊಚ್ಚಿಹೋದ ಸವಾರರು

Two dead after bike falls into river.

ಬೆಳಗಾವಿ: ಬೈಕೊಂದು ಸ್ಕಿಡ್‌ ಆಗಿ ನದಿಗೆ ಉರುಳಿ ಬಿದ್ದು (Bike falls into river), ಇಬ್ಬರು ಸವಾರರು ನೀರಿನಲ್ಲಿ ಕೊಚ್ಚಿ ಹೋದ (two riders swept away)ಭಯಾನಕ ಘಟನೆ ಬೆಳಗಾವಿ ಜಿಲ್ಲೆಯಲ್ಲಿ (Road accident) ನಡೆದಿದೆ.

ಬೆಳಗಾವಿ ಜಿಲ್ಲೆಯ (Belagavi News) ಮೂಡಲಗಿ ತಾಲೂಕಿನ ಔರಾದಿ ಗ್ರಾಮದ ಹೊರವಲಯದಲ್ಲಿ ‌ಹರಿಯುತ್ತಿರುವ ಘಟಪ್ರಭಾ ನದಿಯ (Ghataprabha River) ಸಮೀಪ ದುರ್ಘಟನೆ ನಡೆದಿದ್ದು, ಬೈಕ್‌ ಸವಾರರಾದ ಔರಾದಿ ಗ್ರಾಮದ ಚೆನ್ನಪ್ಪ ಹರಿಜನ (38), ದುರ್ಗಾಣಿ ಹರಿಜನ (35) ನದಿ ಪಾಲಾಗಿದ್ದಾರೆ.

ಘಟಪ್ರಭಾ ನದಿಯಲ್ಲಿ ಮುಳುಗಿದವರಿಗಾಗಿ ಹುಡುಕಾಟ

ಚೆನ್ನಪ್ಪ ಹರಿಜನ ಮತ್ತು ದುರ್ಗಾಣಿ ಹರಿಜನ ಅವರು ವೈಯಕ್ತಿಕ ಕೆಲಸದ ನಿಮಿತ್ತ ಮಹಾಲಿಂಗಪುರಕ್ಕೆ ತೆರಳುತ್ತಿದ್ದರು. ಅವರು ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿದ್ದ ತಡೆಗೋಡೆ ಇಲ್ಲದ ಸೇತುವೆ ಮೇಲೆ ಬೈಕ್‌ನಲ್ಲಿ ಸಾಗುತ್ತಿದ್ದರು. ಆಗ ಒಮ್ಮೆಗೇ ಬೈಕ್‌ ಸ್ಕಿಡ್‌ ಆಗಿ ಬೈಕ್‌ ಸಹಿತ ಅವರಿಬ್ಬರೂ ನೇರವಾಗಿ ನದಿಗೆ ಬಿದ್ದಿದ್ದಾರೆ.

ನದಿ ಪರಿಸರದಲ್ಲಿ ಹುಡುಕಾಟ

ಅವರಿಬ್ಬರು ನದಿಗೆ ಬಿದ್ದು ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿದ ಕೆಲವರು ಅವರ ರಕ್ಷಣೆಗೆ ಮುಂದಾದರೂ ಆಗಲೇ ಅವರು ತುಂಬ ದೂರ ಹೋಗಿ ಆಗಿತ್ತು. ಅವರ ರಕ್ಷಣೆ ಮಾಡಲು ಸಾಧ್ಯವಾಗಲೇ ಇಲ್ಲ. ಆದರೆ, ಅವರು ಸಾಗುತ್ತಿದ್ದ ಬೈಕ್‌ ಮಾತ್ರ ನೀರಿನಲ್ಲಿ ಪತ್ತೆಯಾಗಿದೆ. ಅದನ್ನು ಮೇಲೆ ತೆಗೆಯಲಾಗಿದೆ.

ಅಗ್ನಿಶಾಮಕ‌ ಸಿಬ್ಬಂದಿ ಹಾಗೂ ಪೊಲೀಸರು ಆಗಮಿಸಿದ್ದು ನೀರುಪಾಲಾದವರಿಗೆ ಶೋಧಕಾರ್ಯ ನಡೆಸುತಿದ್ದಾರೆ. ಸ್ಥಳಕ್ಕೆ ಮೂಡಲಗಿ ತಾಲೂಕಿನ ಕುಲಗೋಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Road Accident : ಸವಾರನ ಎದೆಗೆ ಅಪ್ಪಳಿಸಿತ್ತು ಮತ್ತೊಂದು ಬೈಕ್‌!

ಬೈಕ್‌ಗೆ ಡಿಕ್ಕಿ ಹೊಡೆದು ಟೊಮ್ಯಾಟೊ ತೋಟಕ್ಕೆ ನುಗ್ಗಿದ ಕಾರು, ಇಬ್ಬರು ಸಾವು

ಕೋಲಾರ: ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದು (Road accident) ಟೊಮ್ಯಾಟೊ ತೋಟಕ್ಕೆ ನುಗ್ಗಿದ ಘಟನೆ ಕೋಲಾರ ಜಿಲ್ಲೆಯ (Kolara News) ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೋಳ್ ಕ್ರಾಸ್‌ನಲ್ಲಿ ನಡೆದಿದೆ. ಈ ಘಟನೆಯಲ್ಲಿ ಬೈಕ್‌ನಲ್ಲಿದ್ದ ಇಬ್ಬರು ಸವಾರರು (two bike riders dead) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತಪಟ್ಟವರನ್ನು ತಾಡಿಗೋಳ್ ಗ್ರಾಮದ ಶಂಕರಪ್ಪ ಹಾಗೂ ಮ್ಯಾಕಲಗಡ್ಡ ಗ್ರಾಮದ ಮುನಿಸ್ವಾಮಿ ಎಂದು ಗುರುತಿಸಲಾಗಿದೆ. AP13AC6570 ನಂಬರಿನ ಮಹಿಂದ್ರಾ XUV ಕಾರು ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.

ಕಾರು ಮದನಪಲ್ಲಿ ರಸ್ತೆಯಿಂದ ಬೆಂಗಳೂರಿನ ಕಡೆ ಹೋಗುತ್ತಿದ್ದು, ನಿಯಂತ್ರಣ ತಪ್ಪಿ ಬೈಕ್‌ಗೆ ಡಿಕ್ಕಿ ಹೊಡೆದಿದೆ‌. ಕಾರು ಡಿಕ್ಕಿ ಹೊಡದ ರಭಸಕ್ಕೆ ಬೈಕ್ ನಜ್ಜುಗುಜ್ಜಾಗಿದ್ದು, ಬಳಿಕ ಕಾರು ಪಕ್ಕದಲ್ಲಿದ್ದ ಟೊಮ್ಯಾಟೊ ತೋಟಕ್ಕೆ ನುಗ್ಗಿದೆ‌. ಚಾಲಕ ಕಾರು ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಗೌನಿಪಲ್ಲಿ ಪೋಲಿಸರು ಬಂದು ಪರಿಶೀಲನೆ ನಡೆಸಿದರು.

ಈ ನಡುವೆ, ಕಾರು ಟೊಮ್ಯಾಟೊ ತೋಟಕ್ಕೆ ನುಗ್ಗಿ ಹಾನಿ ಮಾಡಿದ್ದರಿಂದ ರೈತರು ಸಿಟ್ಟಿಗೆದ್ದಿದ್ದಾರೆ.

Exit mobile version