Site icon Vistara News

Road Accident: ಬೇಲೂರಿನಲ್ಲಿ ಟಿಪ್ಪರ್‌ ಹರಿದು ಬೈಕ್‌ ಸವಾರ ಮೃತ್ಯು

Road Accident news Bike rider dies after tipper runs over him in Belur

ಹಾಸನ: ಜಿಲ್ಲೆಯ ಬೇಲೂರು (Belur) ಹೊರವಲಯದ ಬಿಕ್ಕೋಡು ರಸ್ತೆಯಲ್ಲಿ ಬೈಕ್‌ಗೆ ಟ್ಯಾಂಕರ್‌ ತಾಗಿದ್ದರಿಂದ (Road Accident) ನಿಯಂತ್ರಣ ತಪ್ಪಿದ ಬೈಕ್‌ ಸವಾರ ಕೆಳಗೆ ಬಿದ್ದಿದ್ದು, ಹಿಂದಿನಿಂದ ಬಂದ ಟಿಪ್ಪರ್‌ ಲಾರಿ (Tipper Lorry) ಹರಿದಿದೆ. ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಟಿಪ್ಪರ್‌ ಚಕ್ರಗಳು ಸವಾರನ ತಲೆ ಮೇಲೆಯೇ ಹರಿದಿದ್ದರಿಂದ ತಲೆ ಹೋಳಾಗಿದೆ.

ಬೇಲೂರು ತಾಲೂಕಿನ ಆಲೂರು ಗ್ರಾಮದ ಕಿರಣ್ (26) ಮೃತ ದುರ್ದೈವಿ. ಬುಧವಾರ ಬೆಳಗ್ಗೆ ಬೈಕ್‌ನಲ್ಲಿ ಕೆಲಸಕ್ಕೆಂದು ಕಿರಣ್‌ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಕಂಟೇನರ್‌ಗೆ ಬೈಕ್ ತಾಗಿದ್ದರಿಂದ ನಿಯಂತ್ರಣ ತಪ್ಪಿದ ಕಿರಣ್‌ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಟಿಪ್ಪರ್‌ ಲಾರಿಯು ಕಿರಣ್‌ ತಲೆ ಮೇಲೆ ಹತ್ತಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಿರಣ್‌ಗೆ ಎರಡು ವರ್ಷದ ಹಿಂದೆ ವಿವಾಹವಾಗಿತ್ತು.

ಇದನ್ನೂ ಓದಿ: Shivarajkumar: ಅಪ್ಪು ನೆನೆದು ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ: ಸಮಾಧಾನ ಮಾಡಿದ ಬಾಲಯ್ಯ

ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಬೈಕ್‌ಗಳ ಮುಖಾಮುಖಿ ಡಿಕ್ಕಿ

ಕಾರವಾರ: ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರರಿಬ್ಬರು ಗಾಯಗೊಂಡು, ಬೈಕ್ ಒಂದು ಹೊತ್ತಿ ಉರಿದ ಘಟನೆ ಹೊನ್ನಾವರ ತಾಲೂಕಿನ ಹಳದೀಪುರದ ಅಗ್ರಹಾರ ಬಳಿ ತಡರಾತ್ರಿ ಸಂಭವಿಸಿದೆ. ವಿದೇಶಿ ಪ್ರವಾಸಿಗರು ಅತಿವೇಗ ಹಾಗೂ ಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ಬೈಕ್ ಚಲಾಯಿಸಿಕೊಂಡು ಬಂದು ಸ್ಥಳೀಯರು ಸಂಚರಿಸುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಬೈಕ್‌ನಲ್ಲಿದ್ದ ಸ್ಥಳೀಯರಾದ ಇಬ್ಬರಿಗೂ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇದಲ್ಲದೇ ಬೈಕ್ ಅಪಘಾತದ ತೀವ್ರತೆಗೆ ಬೈಕ್‌ ಒಂದಕ್ಕೆ ಬೆಂಕಿ ಹೊತ್ತಿಕೊಂಡಿದೆ. ರೊಚ್ಚಿಗೆದ್ದ ಸ್ಥಳೀಯರು ವಿದೇಶಿ ಬೈಕ್ ಸವಾರರ ಮೇಲೆ ಹಲ್ಲೆ ನಡೆಸಿದ್ದಾರೆ. ಸ್ಥಳಕ್ಕೆ ಹೊನ್ನಾವರ ಪೊಲೀಸರು ಆಗಮಿಸಿ ಪರಿಸ್ಥಿತಿ ಸಹಜ ಸ್ಥಿತಿಗೆ ತಂದಿದ್ದಾರೆ. ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Forest officer suicide : ನಿವೃತ್ತ ಅರಣ್ಯಾಧಿಕಾರಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ, ನಿದ್ರಾಹೀನತೆ ಕಾರಣ?

ಹುಬ್ಬಳ್ಳಿ ಬಳಿಕ ಅಪಘಾತ: ಮೂವರು ಗೆಳೆಯರು ಮೃತ್ಯು

ಹುಬ್ಬಳ್ಳಿ: ಧಾರವಾಡ ಜಿಲ್ಲೆ ಕಲಘಟಗಿಯ ಸಂಗಟಿಕೊಪ್ಪ ಗ್ರಾಮದ ಬಳಿ ನಡೆದ ಭೀಕರ ಅಪಘಾತದಲ್ಲಿ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ. ಆಯಿಲ್ ಟ್ಯಾಂಕರ್ ಮತ್ತು ಕಾರಿನ ನಡುವೆ ಸಂಭವಿಸಿರುವ ಅಪಘಾತದಲ್ಲಿ ಮೃತಪಟ್ಟವರನ್ನು ದಿಶಾನ್ ಬಿಡಿವಾಲೆ (19), ತೈಫ್ ಚವ್ಹಾಣ (22), ಇಸ್ಮಾಯಿಲ್ ಬಿಜಾಪೂರ್ (19) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯವಾಗಿದ್ದು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರು ಜನ ಸ್ನೇಹಿತರು ಜತೆಯಾಗಿ ಪ್ರವಾಸಕ್ಕೆ ತೆರಳಿದ ವೇಳೆ ಈ ದುರಂತ ಸಂಭವಿಸಿದೆ. ಆಯಿಲ್‌ ಟ್ಯಾಂಕರ್‌ ಅವರ ಪಾಲಿಗೆ ಮೃತ್ಯುವಾಗಿ ಬಂದು ಎರಗಿದೆ. ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version