Site icon Vistara News

Road Accident: ಕಾರು-ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸಾವು

Road Accident

ರಾಯಚೂರು: ಕಾರು-ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದುಗಲ್ ಬಳಿ ನಡೆದಿದೆ. ಬೈಕ್ ಸವಾರ ಭೀಮಣ್ಣ (55) ಮೃತರು. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ನುಜ್ಜುಗುಜ್ಜಾಗಿದೆ.

ಕಾಲುವೆಗೆ ಈಜಲು ಹೋಗಿದ್ದ ಬಾಲಕ ನೀರು ಪಾಲು

ರಾಯಚೂರು: ಕಾಲುವೆಗೆ ಈಜಲು ಹೋಗಿದ್ದ ಬಾಲಕ ನೀರು ಪಾಲಾಗಿರುವ ಘಟನೆ ಜಿಲ್ಲೆಯ ಲಿಂಗಸುಗೂರಿನ‌ ಕೊಠಾ ಗ್ರಾಮದ ಬಳಿ ನಡೆದಿದೆ. ಅಯ್ಯನ್ ಶಫಿ (17) ನೀರು ಪಾಲಾದ ಬಾಲಕ. ಮೂವರು ಸ್ನೇಹಿತರೊಂದಿಗೆ ಕಾಲುವೆಗೆ ಈಜಲು ಹೋಗಿದ್ದಾಗ ದುರ್ಘಟನೆ ನಡೆದಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಲಿಂಗಸುಗೂರು ಅಗ್ನಿ ಶಾಮಕ ದಳದ ಸಿಬ್ಬಂದಿ ತೆರಳಿ, ಶೋಧಕಾರ್ಯ ನಡೆಸಿ ಯುವಕನ ಮೃತದೇಹವನ್ನು ನೀರಿನಿಂದ ಹೊರತೆಗೆದಿದ್ದಾರೆ. ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Prajwal Revanna Case: ನನ್ನ ಸಾಯಿಸ್ತಾರೆ; ಪ್ರಜ್ವಲ್‌ ವಿದೇಶದಲ್ಲಿದ್ದರೂ ಸಂತ್ರಸ್ತೆಗೆ ಭಯ, ಪೊಲೀಸರಿಗೂ ಮಾಹಿತಿ ನೀಡಲು ಹಿಂಜರಿಕೆ!

ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಕುರಿಗಾಹಿ ಯುವಕ ಸಾವು

ವಿಜಯನಗರ: ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ ಕುರಿಗಾಹಿ ಯುವಕ ಮೃತಪಟ್ಟಿರುವ ಘಟನೆ ಹಗರಿಬೊಮ್ಮನಹಳ್ಳಿ ತಾಲೂಕು ಬಸರಕೋಡು ಗ್ರಾಮದ ಬಳಿ ನಡೆದಿದೆ.

ಕೊಟ್ಟೂರು ತಾಲೂಕು ಹರಾಳು ಗ್ರಾಮದ ಅಂಜಿನಪ್ಪ (26) ಮೃತಪಟ್ಟ ಕುರಿಗಾಹಿ. ತುಂಗಭದ್ರಾ ನದಿ ದಂಡೆಯಲ್ಲಿ ಕುರಿ ಮೇಯಿಸಲು ಹೋಗಿದ್ದ ಕುರಿಗಾಹಿ ಈಜಲು ನದಿಗೆ ಇಳಿದಿದ್ದ. ಈ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version