Site icon Vistara News

Road accident : ಭೀಕರ ಸರಣಿ ಅಪಘಾತ: ಬೈಕ್‌ನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವು, 14 ತಿಂಗಳ ಮಗು ಗಂಭೀರ

Chikkamagaluru accident

ಚಿಕ್ಕಮಗಳೂರು: ಚಿಕ್ಕಮಗಳೂರು (Chikkamagaluru News) ತಾಲೂಕಿನ ಹಿರೇಗೌಜ ಸಮೀಪ ಭೀಕರ ಸರಣಿ ಅಪಘಾತ (Road accident) ಸಂಭವಿಸಿದ್ದು ದಂಪತಿ ಸ್ಥಳದಲ್ಲೇ (Couple dead on spot) ಸಾವನ್ನಪಿದ್ದರೆ, ಅವರ 14 ತಿಂಗಳ ಮಗು ಗಂಭೀರವಾಗಿ (14 month child injured) ಗಾಯಗೊಂಡಿದೆ.

ಕಾರು, ಟಿಪ್ಪರ್ ಲಾರಿ, ಬೈಕ್ ನಡುವೆ ಅಪಘಾತ ನಡೆದಿದ್ದು, ಬೈಕ್‌ನಲ್ಲಿದ್ದ ದಂಪತಿ ಶಿವಮೊಗ್ಗ ಮೂಲದ ಸಯ್ಯದ್ ಆಸೀಫ್ (38), ಮಾಜಿನಾ (33) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಜತೆಗಿದ್ದ 14 ತಿಂಗಳ ಮಗುವಿಗೆ ಗಂಭೀರ ಗಾಯಗಳಾಗಿವೆ.

ಸಂಪೂರ್ಣ ನಜ್ಜುಗುಜ್ಜಾಗಿರುವ ಕಾರು

ದಂಪತಿ ಚಿಕ್ಕಮಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ವೇಳೆ ಕಾರು, ಬೈಕ್‌ ಮತ್ತು ಲಾರಿ ಮಧ್ಯೆ ಈ ಅವಘಡ ಸಂಭವಿಸಿದೆ. ಟಿಪ್ಪರ್ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಕಳೆದ ರಾತ್ರಿ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Road Accident : ಹಾಸನದಲ್ಲಿ ಭೀಕರ ಅಪಘಾತ; ಬೆಂಗಳೂರಿನ ವ್ಯಕ್ತಿ ಸಾವು, 6 ಮಂದಿ ಗಂಭೀರ

ಲವು ದಿನಗಳ ಹಿಂದಷ್ಟೇ ತಾಯಿ ಮತ್ತು ಮಗ ಮೃತ್ಯು

ಚಿಕ್ಕಮಗಳೂರು (Chikkamagaluru news) ತಾಲೂಕಿನ ಕಣಿವೆ ಕ್ರಾಸ್ ಬಳಿ ಕೆಲವು ದಿನಗಳ ಹಿಂದಷ್ಟೇ ನಡೆದ ಅಪಘಾತದಲ್ಲಿ ತಾಯಿ ಮತ್ತು ಮಗ ಮೃತಪಟ್ಟಿದ್ದರು. ಕಾರೊಂದು ನಿಯಂತ್ರಣ ತಪ್ಪಿ ಸೇತುವೆಗೆ ಬಡಿದು ಈ ದುಂತ ಸಂಭವಿಸಿತ್ತು. ಮೃತಪಟ್ಟವರನ್ನು ಚೆನ್ನಮ್ಮ (67) ಮತ್ತು ಅವರ ಮಗ ನಿರಂಜನ್‌ (42) ಎಂದು ಗುರುತಿಸಲಾಗಿದೆ.

ಚಿಕ್ಕಮಗಳೂರು ನಗರದ ವಿಜಯಪುರ ಬಡಾವಣೆ ನಿವಾಸಿಯಾಗಿರುವ ನಿರಂಜನ್‌ ಅವರು ತಮ್ಮ ತಾಯಿಯನ್ನು ಕರೆದುಕೊಂಡು ಚಿಕ್ಕಮಗಳೂರಿನಿಂದ ಕಡೂರಿಗೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ. ಕಾರು ಸೇತುವೆಗೆ ಡಿಕ್ಕಿ ಹೊಡೆದು ಅಲ್ಲೇ ಸಿಕ್ಕಿಹಾಕಿಕೊಂಡಿದೆ. ಡಿಕ್ಕಿಯ ಹೊಡೆತಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ತಾಯಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡರು.

ಕಾರಿನಲ್ಲಿ ಕಾರಿನಲ್ಲಿ ಸಿಲುಕಿದ್ದ ನಿರಂಜನ್ ಅವರನ್ನು ರಕ್ಷಿಸಲು ಸ್ಥಳೀಯರು ಹರಸಾಹಸ ಮಾಡಿದರು. ಹಾಗೆ ಹೊರತೆಗೆದ ಬಳಿಕ ಆಸ್ಪತ್ರೆಗೆ ಸಾಗಿಸಿದರು. ಆದರೆ, ಸ್ವಲ್ಪ ದೂರ ಹೋಗುವಷ್ಟರಲ್ಲೇ ಪ್ರಾಣಪಕ್ಷಿ ಹಾರಿಹೋಗಿದೆ. ನಿರಂಜನ್‌ ಅವರು ಖಾಸಗಿ ಆಸ್ಪತ್ರೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.

ಪ್ರೇಮ ವೈಫಲ್ಯದಿಂದ ಮನನೊಂದು ಯುವಕ ಆತ್ಮಹತ್ಯೆ

ಚಿಕ್ಕಬಳ್ಳಾಪುರ: ಚಲಿಸುತ್ತಿರುವ ರೈಲಿಗೆ ತಲೆಯೊಡ್ಡಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿಂತಾಮಣಿ ನಗರದ ತಿಮ್ಮಸಂದ್ರ ರೈಲ್ವೇ ಟ್ರ್ಯಾಕ್ ಮೇಲೆ ಘಟನೆ ನಡೆದಿದ್ದು, ಪ್ರೇಮ ವೈಪಲ್ಯದಿಂದ ಮನನೊಂದು ಆತ್ಮಹತ್ಯಗೆ ಶರಣಾಗಿರೋ ಶಂಕೆ‌ ವ್ಯಕ್ತವಾಗಿದೆ.

ಪ್ರೇಮ ವೈಫಲ್ಯ ಬಗ್ಗೆ ಕೈ ಮೇಲೆ ಕೊಯ್ದುಕೊಂಡಿರುವುದರಿಂದ ಆತನ ಸಾವಿನ ಕಾರಣ ಬಯಲಾಗಿದೆ. ರೈಲಿಗೆ ತಲೆ ಒಡ್ಡಿದ ಪರಿಣಾಮ ತಲೆ ಛಿದ್ರ ಛಿದ್ರವಾಗಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡಸಿದ್ದಾರೆ. ಚಿಂತಾಮಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Road Accident : ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದ ಕಾರು; ತಾಯಿ- ಮಗ ಸ್ಥಳದಲ್ಲೇ ಮೃತ್ಯು

Exit mobile version