Site icon Vistara News

Road Accident: ಖಾಸಗಿ ಬಸ್, ಬೈಕ್ ಡಿಕ್ಕಿಯಾಗಿ ತಂದೆ, ಮಗಳ ದಾರುಣ ಸಾವು

Two killed as two bikes collide head on

ತುಮಕೂರು: ತಾಲೂಕಿನ ಹೆಬ್ಬೂರು ಬಳಿಯ ಬನ್ನಿಮರದಕಟ್ಟೆ ಬಳಿ ಖಾಸಗಿ ಬಸ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ ತಂದೆ, ಮಗಳು ಮೃತಪಟ್ಟಿರುವ ಘಟನೆ (Road Accident) ಭಾನುವಾರ ರಾತ್ರಿ ನಡೆದಿದೆ.

ಗುಬ್ಬಿ ತಾಲೂಕಿನ ನೆಟ್ಟಿಗೆರೆಯ ತಿರುಮಲೇಗೌಡ(50), ಪುತ್ರಿ ಚಂದನಾ (20) ಮೃತರು. ಇವರು ನೆಟ್ಟಿಗೆರೆಯಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದ ವೇಳೆ ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಬರುತ್ತಿದ್ದ ಖಾಸಗಿ ಬಸ್‌ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.

ಅಪಘಾತದ ತೀವ್ರತೆಗೆ ತಿರುಮಲೇಗೌಡ ಸ್ಥಳದಲ್ಲೇ ಮೃತಪಟ್ಟಿದ್ದು, ಪುತ್ರಿ ಚಂದನಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಕೊನೆಯುಸಿರೆಳೆದಿದ್ದಾರೆ. ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

ಇದನ್ನೂ ಓದಿ | Girls rescued : ಒಮ್ಮೆಗೇ ಬಸ್ಸು ನಿಲ್ಲಿಸಿ ಕೆರೆಗೆ ಧುಮುಕಿದ ಡ್ರೈವರ್‌; ನೀರಲ್ಲಿ ಮುಳುಗುತ್ತಿದ್ದ ಇಬ್ಬರು ಹೆಣ್ಣು ಮಕ್ಕಳ ರಕ್ಷಣೆ

Exit mobile version