Site icon Vistara News

Road Accident : ಗೊಲ್ಲರದೊಡ್ಡಿ ಅಪಘಾತ ಪ್ರಕರಣ; ಚಿಕಿತ್ಸೆ ಫಲಿಸದೆ ಮತ್ತೊಂದು ಮಗು ಸಾವು

jaganvika baby dead in Road Accident

ರಾಮನಗರ: ಇಲ್ಲಿನ ಮಾಗಡಿ ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದಲ್ಲಿ (Gollaradoddi Accident) ಆಗಸ್ಟ್‌ 9ರಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಕ್ಕಳಿಗೆ ವಾಹನವೊಂಡು (Road Accident) ಡಿಕ್ಕಿ ಹೊಡೆದಿತ್ತು. ಪರಿಣಾಮ ಸ್ಥಳದಲ್ಲೆ ರೋಹಿತ್(5), ಶಾಲಿನಿ(8) ಎಂಬುವವರು ಮೃತಪಟ್ಟಿದ್ದರು. ಕಳೆದ ಮೂರು ದಿನಗಳ ಹಿಂದೆ ಒಂದು ಮಗು ಸಾವನ್ನಪ್ಪಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮತ್ತೊಂದು ಮಗು ಜ್ಞಾನೇಶ್ವರಿ (6) ಮೃತಪಟ್ಟಿದೆ.

ಏನಿದು ಘಟನೆ?

ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದಲ್ಲಿ (Gollaradoddi Accident) ಮನೆ ಪಾಠ (ಟ್ಯೂಶನ್‌) ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ, ಐವರು ಮಕ್ಕಳ ಮೇಲೆ ವಾಹನವೊಂದು ಡಿಕ್ಕಿ ಹೊಡೆದಿತ್ತು. (Road accident) ಸ್ಥಳದಲ್ಲೇ ಇಬ್ಬರು ಮಕ್ಕಳು (Accident kills two children) ಮೃತಪಟ್ಟಿದ್ದರೆ ಉಳಿದವರ ಸ್ಥಿತಿ ಚಿಂತಾಜನಕವಾಗಿತ್ತು. ರೋಹಿತ್ (5), ಶಾಲಿನಿ (8) ಸ್ಥಳದಲ್ಲೇ ಮೃತಪಟ್ಟಿದ್ದರೆ, ಉಳಿದ ಮಕ್ಕಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಅಪಘಾತ ಮಾಡಿದ ವಾಹನ ನಿಲ್ಲಿಸದೆ ಪರಾರಿಯಾಗಿತ್ತು. ವಾಹನ ಯಾವುದು ಎನ್ನುವ ಬಗ್ಗೆ ಬೇರೆ ಬೇರೆಯವರು ಬೇರೆ ಬೇರೆ ಮಾತು ಆಡಿದ್ದರು. ಒಬ್ಬ ಗ್ರಾಮಸ್ಥ ಮಾತ್ರ ಅದು ಟಾಟಾ ಏಸ್‌ ವಾಹನ, ಅದರಲ್ಲಿ ವಾಯುಪುತ್ರ ಅಂತ ಹೆಸರಿತ್ತು ಎಂದು ಹೇಳಿದ್ದ.

ಇದನ್ನೂ ಓದಿ: Road Accident : ಅಪಘಾತದಲ್ಲಿ ಯುವಕ ಸಾವು; ಸುದ್ದಿ ತಿಳಿದು ಸ್ನೇಹಿತನಿಗೆ ಹೃದಯಾಘಾತ!

ಜತೆಯಲ್ಲೆ ಇದ್ದು ನಾಟಕವಾಡಿದ್ದ ಚಾಲಕ

ಅಪಘಾತ ಮಾಡಿ ವಾಹನದೊಂದಿಗೆ ಪರಾರಿಯಾಗಿದ್ದ ಚಾಲಕ ವರದರಾಜು ವಾಹನವನ್ನು ದೂರದಲ್ಲಿ ಇಟ್ಟು ಬಂದು ತನಗೇನೂ ಗೊತ್ತಿಲ್ಲ ಎಂಬಂತೆ ನಾಟಕವಾಡಿದ್ದ. ಯಾರು ಅಪಘಾತ ಮಾಡಿದ್ದು ಎಂದು ಗ್ರಾಮಸ್ಥರನ್ನೇ ಕೇಳಿದ್ದ. ಆದರೆ, ಅಪಘಾತ ಮಾಡಿದ್ದು ಟಾಟಾ ಏಸ್‌, ಅದರ ಹೆಸರು ವಾಯುಪುತ್ರ ಎಂದು ಗ್ರಾಮಸ್ಥರೊಬ್ಬರು ಹೇಳಿದ್ದರು. ಇದರ ಆಧಾರ ಮತ್ತು ಸಿಸಿ ಟಿವಿ ಫೂಟೇಜ್‌ಗಳ ಆಧಾರದಲ್ಲಿ ತನಿಖೆ ಮಾಡಿದಾಗ ಇದು ವಾಯುಪುತ್ರನದೇ ಕೃತ್ಯ ಎನ್ನುವುದು ಬಯಲಾಗಿತ್ತು. ಬಳಿಕ ಗುರುವಾರ ಬೆಳಗ್ಗೆ ವಾಯುಪುತ್ರ ಎಂಬ ಹೆಸರಿನ ಟಾಟಾ ವಾಹನದ ಚಾಲಕ ವರದರಾಜು ವಾಹನದೊಂದಿಗೆ ಠಾಣೆಗೆ ಹೋಗಿ ತಪ್ಪೊಪ್ಪಿಕೊಂಡಿದ್ದ.

ಅಪಘಾತದಲ್ಲಿ ಐವರು ಮಕ್ಕಳು ಗಾಯಗೊಂಡು ಇಬ್ಬರು ಮೃತಪಟ್ಟಿದ್ದರು. ಉಳಿದ ಮೂರು ಮಕ್ಕಳು ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಐಸಿಯುನಲ್ಲಿದ್ದ ಮತ್ತೊಂದು ಮಗು ಮೃತಪಟ್ಟಿದ್ದು, ಮತ್ತೊಂದು ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version