Site icon Vistara News

Road Accident : ಅತಿ ವೇಗ ತಂದ ಆಪತ್ತು; ಕ್ಯಾಂಟರ್‌ ಡಿಕ್ಕಿಯಾಗಿ ಹೋಂ ಗಾರ್ಡ್‌ ಸೇರಿ ಇಬ್ಬರ ದುರ್ಮರಣ

Road Accident

ಗದಗ/ ಕೊಪ್ಪಳ: ಅತಿವೇಗದಿಂದ ಬಂದ ಕ್ಯಾಂಟರ್‌ ಎದುರಿಗೆ ಹೋಗುತ್ತಿದ್ದ ಕಟ್ಟಿಗೆ ತುಂಬಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕ್ಯಾಂಟರ್‌ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ (Road accident) ಗದಗ ತಾಲೂಕಿನ ಹುಲಕೋಟಿ ಬಳಿ ಸಂಭವಿಸಿದೆ.

ಮೃತ ಚಾಲಕ ಬಳ್ಳಾರಿ ‌ಮೂಲದ ವ್ಯಕ್ತಿ ಎನ್ನಲಾಗುತ್ತಿದ್ದು, ಗುರುತು ಪತ್ತೆ ಆಗಿಲ್ಲ. ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಗಸ್ತಿನಲ್ಲಿದ್ದ ಹೋಂ ಗಾರ್ಡ್‌ಗೆ ಡಿಕ್ಕಿ ಹೊಡೆದ ಕ್ಯಾಂಟರ್‌

ಗಸ್ತು ತಿರುಗುತ್ತಿದ್ದ ಗೃಹರಕ್ಷಕ ದಳ ಸಿಬ್ಬಂದಿಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದ ಕ್ಯಾಂಟರ್‌ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಹೋಗಾರ್ಡ್‌ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕೊಪ್ಪಳ ತಾಲೂಕಿನ ಚಿಕ್ಕಸೂಳಿಕೇರಿ ತಾಂಡಾ ಬಳಿ ನಡೆದಿದೆ.

ಗೃಹರಕ್ಷಕ ದಳ ಸಿಬ್ಬಂದಿ ರಾಘವೇಂದ್ರ ಕಮ್ಮಾರ ಮೃತಪಟ್ಟವರು. ಚಿಕ್ಕಸೂಳಿಕೇರಿ ತಾಂಡಾ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಈ ದುರ್ಘಟನೆ ನಡೆದಿದೆ.

ಕ್ಯಾಂಟರ್‌ ಡಿಕ್ಕಿಯಾಗಿ ಹೋಂ ಗಾರ್ಡ್‌ ಮೃತ್ಯು

ಕೊಪ್ಪಳ ನಿವಾಸಿಯಾಗಿರುವ ಹೋಂ ಗಾರ್ಡ್ ರಾಘವೇಂದ್ರ ಕಮ್ಮಾರ, ಕೊಪ್ಪಳ ಗ್ರಾಮೀಣ ಠಾಣೆ ಎಎಸ್ಐಯೊಂದಿಗೆ ಹೆದ್ದಾರಿ ಗಸ್ತಿನಲ್ಲಿದ್ದರು. ಈ ವೇಳೆ ಹಿಂಬದಿಯಿಂದ ಕ್ಯಾಂಟರ್ ಡಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡು ರಾಘವೇಂದ್ರ ಪ್ರಾಣ ಬಿಟ್ಟಿದ್ದಾರೆ. ಬಳಿಕ ಕ್ಯಾಂಟರ್ ವಾಹನವು ಎರಡು ಲಾರಿಗಳಿಗೂ ಡಿಕ್ಕಿ ಹೊಡೆದಿದೆ. ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಎರಡು ಅಪಘಾತಗಳಿಗೆ ಅತಿ ವೇಗ ಚಾಲನೆಯೇ ಕಾರಣ ಎನ್ನಲಾಗಿದೆ.

ಇದನ್ನೂ ಓದಿ: Murder Case: ವರದಕ್ಷಿಣೆಗಾಗಿ ಪತ್ನಿಯ ಕತ್ತು ಸೀಳಿದ ಪಾಪಿ; ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು!

ಅಕ್ರಮವಾಗಿ ಜಾನುವಾರು ಸಾಗುಸುತ್ತಿದ್ದ ಕಾರು ಅಪಘಾತ

ತುಮಕೂರಿನ ಕುಣಿಗಲ್ ತಾಲೂಕಿನ ಮಾಗಡಿಪಾಳ್ಯದ ಬಳಿ ಅಕ್ರಮವಾಗಿ ಜಾನುವಾರು ಸಾಗುಸುತ್ತಿದ್ದ ಸ್ಕಾರ್ಪಿಯೋ ಕಾರು ಅಪಘಾತಕ್ಕೀಡಾಗಿದೆ. ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ಅಕ್ರಮವಾಗಿ ಜಾನುವಾರು ಸಾಗುಸುತ್ತಿದ್ದ ಕಾರು ಅಪಘಾತಕ್ಕೀಡಾಗಿರುವುದು.

ಅಪಘಾತದ ಬಳಿಕ ಕಾರಿನಲ್ಲಿ ಜಾನುವಾರು ಸಾಗಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕರುಗಳನ್ನು ಹತ್ತಿರದ ಗೋಶಾಲೆಗೆ ಬಿಟ್ಟಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version