Site icon Vistara News

Road Accident : ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ; ಕಲಬುರಗಿಯ 7 ಮಂದಿ ಮೃತ್ಯು

Kalaburagi accident

ಕಲಬುರಗಿ: ಮಹಾರಾಷ್ಟ್ರದ ಶಿರವಾಡಿ ಸಮೀಪ ಸಂಭವಿಸಿದ ಭೀಕರ ರಸ್ತೆ ದುರಂತದಲ್ಲಿ (Road accident) ಕಲಬುರಗಿಯ ಆರು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕ್ರೂಸರ್ ವಾಹನ ಮತ್ತು ಟ್ಯಾಂಕರ್ (Cruser and Tanker accident) ನಡುವೆ ಈ ಅಪಘಾತ ಸಂಭವಿಸಿದೆ. ಮೃತರು ಕಲಬುರಗಿಯಿಂದ ಮಹಾರಾಷ್ಟ್ರದ (Kalaburagi to Maharashtra trip) ತೀರ್ಥ ಕ್ಷೇತ್ರಗಳಿಗೆ ಪ್ರವಾಸ ತೆರಳಿ ವಾಪಸ್ ಬರುವ ಅವಘಡ ಸಂಭವಿಸಿದೆ.

ಮೃತಪಟ್ಟ ಏಳು ಮಂದಿ ಇವರು

ಸಂಗೀತಾ ಗದನ್ ಮಾನೇ(35), ಉಮರ್ಗಾ ತಾಲೂಕು ನಿವಾಸಿ
ಲಲಿತಾ ಮಹಾದೇವ್ ಬುಗ್ಗೆ(50) ಅಳಂದ ತಾಲೂಕಿನ ಅಣೂರ ಗ್ರಾಮದ ನಿವಾಸಿ..
ಛಾಯಾಹನುಮನವರೆ(46), ಪುಣೆಯ ಇಂದಾಪುರ ನಿವಾಸಿ..
ರೋಹಿಣಿ ಪೂಜಾರಿ(40), ಅಳಂದ ತಾಲೂಕಿನ ಅಣೂರ ಗ್ರಾಮದ ನಿವಾಸಿ..
ಸಾಯಿನಾಥ್ ಗೋವಿಂದ ಪೂಜಾರಿ(10), ಅಳಂದ ತಾಲೂಕಿನ ಅಣೂರ ಗ್ರಾಮದ ನಿವಾಸಿ..
ಸಂದೂಶಾ ಬಾಯಿ(45) ಅಳಂದ ತಾಲೂಕಿನ ಅಣೂರ ಗ್ರಾಮದ ನಿವಾಸಿ
ಇನ್ನೊಬ್ಬ ಹೆಸರು ತಿಳಿದುಬೇಕಾಗಿದೆ.

ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಅಣೂರ ಗ್ರಾಮದ ನಿವಾಸಿಗಳು ಕ್ರೂಸರ್‌ ಮಾಡಿಕೊಂಡು ಗುರುವಾರ ಆಷಾಡ ಏಕಾದಶಿ ನಿಮಿತ್ಯ ಪಂಡರಾಪುರಕ್ಕೆ ಹೋಗಿದ್ದರು. ಮಹಾರಾಷ್ಟ್ರದ ಕೆಲವು ಬಂಧುಗಳು ಕೂಡಾ ಅವರ ಜತೆ ಸೇರಿಕೊಂಡಿದ್ದರು. ಶುಕ್ರವಾರ ಪಂಡರಾಪುರದ ವಿಠಲನ ದರ್ಶನ ಮುಗಿಸಿ ವಾಪಸ್ ಆಗುತ್ತಿದ್ದರು. ಆಗ ಟ್ಯಾಂಕರ್‌ ಒಂದರ ಮಧ್ಯೆ ಅಪಘಾತ ಸಂಭವಿಸಿದೆ.

ಹೊಸಪೇಟೆ ಬಳಿ ಆಟೋ- ಲಾರಿ ಡಿಕ್ಕಿ: ಆರು ಮಂದಿ ದಾರುಣ ಸಾವು

ವಿಜಯನಗರ: ಹೊಸಪೇಟೆ (Vijaya Nagara News) ತಾಲೂಕಿನ ವಡ್ಡರಹಳ್ಳಿ ಬ್ರಿಡ್ಜ್ ಬಳಿ ಸಂಭವಿಸಿರುವ ಭೀಕರ ಅಪಘಾತದಲ್ಲಿ (Road accidnet) ಆರು ಮಂದಿ ಮೃತಪಟ್ಟಿದ್ದಾರೆ. ಎರಡು ಆಟೊಗಳು ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದೆ. ಮೃತರು ಬಳ್ಳಾರಿಯ ಕೌಲ್ ಬಜಾರ್‌ನ ಗೌತಮ್ ನಗರದವರು ಎಂದು ಹೇಳಲಾಗುತ್ತಿದೆ. ಗಾಯಾಳುಗಳಾದ ಇಬ್ಬರು ಮಹಿಳೆಯರು ಮತ್ತು ಮಕ್ಕಳನ್ನು ಬಳ್ಳಾರಿಯ ವಿಮ್ಸ್‌ಗೆ ದಾಖಲಿಸಲಾಗಿದೆ. ಹೊಸಪೇಟೆಯಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.

ಅಪಘಾತದ ತೀವ್ರತೆಗೆ ಆಟೋ ಆಳ ಕಂದಕಕ್ಕೆ ಬಿದ್ದಿರುವುದು.

ಒಂದು ಗೂಡ್ಸ್‌ ಮತ್ತು ಒಂದು ಪ್ಯಾಸೆಂಜರ್‌ ಆಟೊಗಳು ರಸ್ತೆಯಲ್ಲಿ ಸಾಗುತ್ತಿದ್ದು, ಲಾರಿಯೊಂದು ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ದುರಂತದ ತೀವ್ರತೆ ಎಷ್ಟಿದೆಯೆಂದರೆ, ಅಪಘಾತಕ್ಕೆ ಒಳಗಾದ ಒಂದು ಆಟೊಗಳ ಪೈಕಿ ಒಂದು ಆಳ ಕಂದಕಕ್ಕೆ ಉರುಳಿದೆ. ಹಾಗೆ ಉರುಳಿಕೊಂಡು ಹೋಗುವ ದಾರಿಯಲ್ಲಿ ಅದರಲ್ಲಿದ್ದ ಪ್ರಯಾಣಿಕರೂ ಶವಗಳಾಗಿ ಕೆಳಗೆ ಉರುಳಿ ಬಿದ್ದಿದ್ದಾರೆ. ಇಳಿಜಾರಿನಲ್ಲಿ ಶವಗಳ ರಾಶಿಯೇ ಬಿದ್ದಂತೆ ಕಾಣಿಸುತ್ತಿದೆ.

ಅಪಘಾತ ಎಷ್ಟು ಭಯಾನಕವಾಗಿದೆ ಎಂದರೆ ಒಬ್ಬ ಮಹಿಳೆಯ ತಲೆಯ ಮೇಲೆಯೇ ಲಾರಿಯ ಚಕ್ರ ಸಾಗಿ ಹೋಗಿದೆ. ಎರಡು ಶವಗಳು ರಸ್ತೆ ಬದಿಯಲ್ಲಿ ಬಿದ್ದಿವೆ. ಮೇಲ್ನೋಟಕ್ಕೆ ನಾಲ್ವರು ಮಹಿಳೆಯರು, ಇಬ್ಬರು ಪುರುಷರು ಸಾವನ್ನಪ್ಪಿರುವಂತೆ ಕಾಣಿಸುತ್ತಿದೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ಒಯ್ಯಲಾಗಿದೆ.

ವಡ್ಡರಹಳ್ಳಿಯಲ್ಲಿ ನಡೆದ ಅಪಘಾತ ಪ್ರಕರಣದಲ್ಲಿ ಮೃತಪಟ್ಟ ಆರು ಮಂದಿಯ ಪೈಕಿ ಐವರ ಹೆಸರು ಗೊತ್ತಾಗಿದೆ. ಖಾಸಿಂ, ಯಾಸ್ಮೀನ್, ಉಮೇಶ್, ಜಹೀರಾ ಮತ್ತು ಶ್ಯಾಮ್ ಮೃತ ಐವರಾಗಿದ್ದು, ಇನ್ನೊಬ್ಬರ ಹೆಸರು ಗೊತ್ತಾಗಿಲ್ಲ ಎಂದು ಬಳ್ಳಾರಿ ವಲಯ ಐಜಿಪಿ ಲೋಕೇಶ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ; Drowned in River: ಭೀಮಾ ನದಿಗೆ ಬಿದ್ದು ತಾಯಿ, ಮಕ್ಕಳು ಮೃತ್ಯು; ಬಟ್ಟೆ ತೊಳೆಯುವಾಗ ದುರಂತ

Exit mobile version