Site icon Vistara News

Road Accident | ಕೆಎಸ್‌ಆರ್‌ಟಿಸಿ ಬಸ್-ಕಾರು ಮುಖಾಮುಖಿ ಡಿಕ್ಕಿ; ಇಬ್ಬರ ಸಾವು, ನಾಲ್ವರಿಗೆ ಗಾಯ

Road Accident

ಹಾವೇರಿ: ಹಾನಗಲ್ ತಾಲೂಕಿನ ಹುಣಸಿಕಟ್ಟಿ ಕ್ರಾಸ್ ಬಳಿ ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿ (Road Accident) ಇಬ್ಬರು ಮೃತಪಟ್ಟು, ನಾಲ್ವರಿಗೆ ಗಂಭೀರ ಗಾಯಗಳಾಗಿವೆ.

ಕೇರಳದ ಕಾಸರಗೋಡಿನ ತಲಂಗರೇ ಗ್ರಾಮದ ಮಹಮ್ಮದ್ ಕುಂಞ (68), ಆಯಿಷಾ ಮಹಮ್ಮದ್ ಕುಂಞ(60) ಮೃತರು. ಕುಟುಂಬಸ್ಥರಾದ ಝಯಾರ್ ಮಹಮ್ಮದ್ ಕುಂಞ (35), ಇಶಾನ್ ಝಯಾರ್ ಕುಂಞ, ಮಹಮ್ಮದ್ ಜಾಯಿನ್, ಇಝಾ ಫಾತಿಮಾ ಗಾಯಾಳುಗಳು.

ಹಾನಗಲ್ ಕಡೆಯಿಂದ ಲಕ್ಷ್ಮೇಶ್ವರ ಸಮೀಪದ ದರ್ಗಾಕ್ಕೆ ಕಾರಿನಲ್ಲಿ ಒಂದೇ ಕುಟುಂಬದ 6 ಜನರು ಪ್ರಯಾಣಿಸುತ್ತಿದ್ದರು. ಇದೇ ವೇಳೆ ಎದುರಿಗೆ ಬಂದ ಬಸ್‌ನೊಂದಿಗೆ ಕಾರು ಡಿಕ್ಕಿಯಾಗಿದೆ. ಹಾನಗಲ್ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ | Murder Case | ಹಣದ ವಿಚಾರಕ್ಕೆ ಯುವಕನ ಕಿಡ್ನ್ಯಾಪ್ ಮಾಡಿ ಕೊಲೆ; 9 ತಿಂಗಳ ನಂತರ ಆರೋಪಿಗಳ ಬಂಧನ

Exit mobile version