Site icon Vistara News

Road Accident : ತಿರುಪತಿಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಬ್ರೇಕ್‌ ಫೇಲ್‌; ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

Road Accident

ಕೋಲಾರ/ತಿರುಪತಿ: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಚಂದ್ರಗಿರಿ ಮಡಲಂ ಬಳಿಯ ಭಾಕರಪೇಟ್ ಘಾಟ್‌ನಲ್ಲಿ (Road Accident) ತೆರುಳುತ್ತಿದ್ದ ಕಎಸ್‌ಆರ್‌ಟಿಸಿ ಬಸ್‌ವೊಂದು ಬ್ರೇಕ್ ಫೈಲ್ಯೂರ್‌ ಆಗಿ ಬಂಡೆಗೆ ಡಿಕ್ಕಿ ಹೊಡೆದಿದೆ. ಕೆಎಸ್‌ಆರ್‌ಟಿಸಿ ಬಸ್‌ ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ.

ಪ್ರಪಾತವನ್ನು ತಪ್ಪಿಸಿದ ಚಾಲಕ ಬಸ್‌ ಅನ್ನು ಬೆಟ್ಟದ ಬಂಡೆಗೆ ಗುದ್ದಿಸಿದ್ದಾರೆ. ಬಸ್‌ನಲ್ಲಿದ್ದ 43 ಪ್ರಯಾಣಿಸುತ್ತಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಗಾಯಾಳುಗಳನ್ನು ತಿರುಪತಿಯ ರೂಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್‌ ಮದನಪಲ್ಲಿ ಮಾರ್ಗವಾಗಿ ತಿರುಪತಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಬಿಟ್ಟರೆ ಯಾವುದೇ ಪ್ರಾಣ ಹಾನಿ ಆಗಿಲ್ಲ. ಕಂದಕ್ಕೆ ಬಸ್ ಬಿದ್ದಿದ್ದರೆ ಭಾರಿ ಆನಾಹುತ ಸಂಭವಿಸುತ್ತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಚಂದ್ರಗಿರಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಬಾಗೇಪಲ್ಲಿ ಡಿಪೋ ಮ್ಯಾನೇಜರ್ ಹಾಗೂ ಕೋಲಾರದ ಡಿಟಿಓ ಅಧಿಕಾರಿಗಳ ತಂಡ ಘಟನಾ ಸ್ಥಳಕ್ಕೆ ಹೊರಟಿದ್ದಾರೆ.

ಇದನ್ನೂ ಓದಿ: Karnataka Weather : ಫಲ್ಗುಣಿ ಅಬ್ಬರಕ್ಕೆ ಮುಳುಗಿದ ದೇಗುಲಗಳು; ಆಗಸ್ಟ್‌ 5ರವರೆಗೆ ಭಾರಿ ಮಳೆ ಸಾಧ್ಯತೆ

ಕುಳಿತ ಜಾಗದಲ್ಲೇ ಮೃತಪಟ್ಟ ಕಾರ್ಮಿಕ

ಬೆಂಗಳೂರಿನ ಬಾಗಲಗುಂಟೆಯ ಇಂದಿರಾ ಕ್ಯಾಂಟೀನ್ ಬಳಿ ಕುಳಿತ ಸ್ಥಿತಿಯಲ್ಲೇ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ರಾಮನಗರ ನಿವಾಸಿ ಶಿವಲಿಂಗಯ್ಯ ಮೃತ ದುರ್ದೈವಿ. ಗಾರೆ ಕೆಲಸಕ್ಕಾಗಿ ರಾಮನಗರದಿಂದ ಬೆಂಗಳೂರಿಗೆ ಬಂದಿದ್ದ ಶಿವಲಿಂಗಯ್ಯ ಅವರು ನಿನ್ನೆ ಬುಧವಾರ ಇಂದಿರಾ ಕ್ಯಾಂಟೀನ್ ಬಳಿ ಕುಳಿತಿದ್ದರು. ಆದರೆ ಮರುದಿನ ಗಮನಿಸಿದ ಸ್ಥಳೀಯರು ಶಿವಲಿಂಗಯ್ಯ ಮೃತಪಟ್ಟಿದ್ದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗಾಯಗೊಂಡ ನಾಗರ ಹಾವಿಗೆ ಟ್ರೀಟ್ಮೆಂಟ್‌

ಧಾರವಾಡದಲ್ಲಿ ಗಾಯಗೊಂಡ ನಾಗರ ಹಾವಿಗೆ ವೈದ್ಯರು ಆರೈಕೆ ಮಾಡಿದ್ದಾರೆ. ಧಾರವಾಡದ ಸಾಧುನವರ್ ಎಸ್ಟೇಟ್ ಬಳಿ ಹಾವೊಂದು ಬಿದ್ದಿತ್ತು. ಬೈಕ್ ಸವಾರರು ಗಾಯಗೊಂಡಿದ್ದ ಹಾವಿಗೆ ಆರೈಕೆ ಮಾಡಿದ್ದಾರೆ. ಪ್ರಾಣಿ ಪ್ರಿಯ ಸೋಮಶೇಖರ್ ಮೊದಲು ಆರೈಕೆ ಮಾಡಿ ಬಳಿಕ ಕೃಷಿ ವಿವಿಯ ವೈದ್ಯ ಡಾ.ಅನಿಲ್ ಪಾಟೀಲ್‌ರಿಂದ ಚಿಕಿತ್ಸೆ ನೀಡಿದ್ದಾರೆ. ಮುಂದೆ ಹೋಗಲಾರದೆ ಸ್ಥಿತಿಯಲ್ಲಿದ್ದ ಹಾವಿಗೆ ಚಿಕಿತ್ಸೆ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version