Site icon Vistara News

Road accident | ಇಟ್ಟಿಗೆ ತುಂಬಿದ್ದ ಲಾರಿ ಪಲ್ಟಿ: ಚೆಲ್ಲಾಡಿದ ಇಟ್ಟಿಗೆಗಳ ನಡುವೆ ಕಾರ್ಮಿಕನ ಆಕ್ರಂದನ

Lorry bricks

ಹುಬ್ಬಳ್ಳಿ: ಇಟ್ಟಿಗೆ ತುಂಬಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ (Road accident) ನಡೆದಿದ್ದು, ಅದರ ಮೇಲಿದ್ದ ಕಾರ್ಮಿಕ ಚೆಲ್ಲಾಡಿದ ಇಟ್ಟಿಗೆಗಳ ನಡುವೆ ನರಳುತ್ತಿದ್ದ ದೃಶ್ಯ ಕಂಡುಬಂದಿದೆ.

ಹುಬ್ಬಳ್ಳಿಯ ಗದಗ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆ ಬದಿಗೆ ಉರುಳಿದೆ. ಉರುಳಿದ ಪರಿಣಾಮವಾಗಿ ಐಟಿಸಿ ಗೋದಾಮಿನ ಎದುರು ರಸ್ತೆ ತುಂಬೆಲ್ಲಾ ಇಟ್ಟಿಗೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಹೀಗೆ ರಾಶಿಯಾಗಿ ಬಿದ್ದ ಇಟ್ಟಿಗೆಗಳ ರಾಶಿಯಲ್ಲಿ ನಡುವೆ ಒಬ್ಬ ಕಾರ್ಮಿಕ ಸಿಲುಕಿ ನರಳಾಡುತ್ತಿರುವ ದೃಶ್ಯ ಕಂಡುಬಂತು. ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Road accident | ಆಗಷ್ಟೇ ಪೂಜೆ ಮಾಡಿಸಿಕೊಂಡು ಬಂದ ಹೊಸ ಕಾರು ಡಿಕ್ಕಿ: ಫುಟ್‌ಪಾತ್‌ ಮೇಲೆ ಹೋಗಿ ಬಿದ್ದ ಬೈಕ್‌ ಸವಾರ ಮೃತ್ಯು

Exit mobile version