Site icon Vistara News

Road Accident | ಶಬರಿಮಲೆಗೆ ತೆರಳಿದ್ದವರ ಮಿನಿ ಬಸ್‌ಗೆ ಲಾರಿ ಡಿಕ್ಕಿ; ಅಪಘಾತದಲ್ಲಿ 23 ಜನರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

road accident

ರಾಮನಗರ: ಇಲ್ಲಿನ ಪೇಟೆ ಕುರುಬರಹಳ್ಳಿ ನಿವಾಸಿಗಳು ಶಬರಿಮಲೆಗೆ ಮಿನಿ ಬಸ್‌ನಲ್ಲಿ ತೆರಳಿ ವಾಪಸ್‌ ಆಗುವಾಗ ಲಾರಿಯೊಂದು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ (Road Accident) 23 ಜನರಿಗೆ ಗಾಯವಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಕೇರಳದ‌ ಕಣ್ಣೂರು ಬಳಿಯ ಪೊನ್ನೂರು ಬಳಿ ಘಟನೆ ಸಂಭವಿಸಿದ್ದು, ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಶಬರಿಮಲೆ ದರ್ಶನಕ್ಕೆಂದು ಮಾಲೆ ಧರಿಸಿ ನವೆಂಬರ್ 20ರ ರಾತ್ರಿ ದರ್ಶನಕ್ಕೆಂದು ತೆರಳಿದ್ದರು. ಶಬರಿಮಲೆ ದರ್ಶನ ಮುಗಿಸಿಕೊಂಡು ಧರ್ಮಸ್ಥಳಕ್ಕೆ ಹೋಗುವಾಗ ಈ ಅಪಘಾತ ಸಂಭವಿಸಿದೆ. ಪೊನ್ನೂರು ಬಳಿ ತಿರುವು ತೆಗೆದುಕೊಂಡು ಹೋಗುವಾಗ ಎದುರಿಗೆ ಬಂದ ಲಾರಿಗೆ ಡಿಕ್ಕಿಯಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮಿನಿ ಬಸ್‌ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಪೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗಾಯಾಳುಗಳ ಚಿರಾಟ ಕಂಡು ಸ್ಥಳೀಯರೆಲ್ಲರೂ ಮರುಕುಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪೊನ್ನೂರು ಪೊಲೀಸರು ಭೇಟಿ ನೀಡಿದ್ದು, ಜೆಸಿಬಿ ಮೂಲಕ ಮಿನಿ ಬಸ್‌ ಅನ್ನು ರಸ್ತೆ ಮಧ್ಯಭಾಗದಿಂದ ತೆರವು ಮಾಡಲಾಗಿದೆ.

ಇದನ್ನೂ ಓದಿ | Bike Accident | ಬೈಕ್‌ ಡಿಕ್ಕಿಯಾಗಿ ಕುರಿಗಾಯಿ ಸ್ಥಳದಲ್ಲಿಯೇ ಸಾವು; ಮುಗಿಲು ಮುಟ್ಟಿದ ಆಕ್ರಂದನ

Exit mobile version