Site icon Vistara News

Road Accident: ಅಥಣಿ ಘಟನಟ್ಟಿ ಕ್ರಾಸ್ ಬಳಿ ಭೀಕರ ಅಪಘಾತ; ಒಬ್ಬ ಸ್ಥಳದಲ್ಲೇ ಸಾವು, ಮೂವರು ಗಂಭೀರ

Road Accident near Athani Ghatanatti Cross One killed on the spot three seriously injured

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಘಟನಟ್ಟಿ ಕ್ರಾಸ್ ಬಳಿ ಕಂಟೇನರ್ ಹಾಗೂ ಕ್ರೂಸರ್ ವಾಹನದ ಮಧ್ಯೆ ಭೀಕರ ಅಪಘಾತ (Road Accident) ಸಂಭವಿಸಿದ್ದು, ಒಬ್ಬ ಮೃತಪಟ್ಟಿದ್ದರೆ, ಆರು ಜನರಿಗೆ ಗಾಯಗಳಾಗಿವೆ. ಎಲ್ಲರೂ ದೇವರ ದರ್ಶನ ಪಡೆದುಕೊಂಡ ವಾಪಸ್‌ ಆಗುವಾಗ ಅಪಘಾತ ಸಂಭವಿಸಿದೆ.

ವಿಜಯಪುರ ಸಿಂದಗಿ ತಾಲೂಕಿನ ಚಿಕ್ಕ ಯರಗಲ್ಲ (ಕೇಡಿ) ಗ್ರಾಮಸ್ಥರು ತೆರಳುತ್ತಿದ್ದ ವಾಹನ ಅಪಘಾತಕ್ಕೀಡಾಗಿದೆ ಎಂದು ತಿಳಿದುಬಂದಿದೆ. ದೇವಕಿ ನಿಂಗಣ್ಣ ಕೀಚಡಿ (೬೫) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ ಆರು ಜನರಿಗೆ ಗಂಭೀರ ಗಾಯಗಳಾಗಿದ್ದು, ಇವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ.

ಗಂಭೀರವಾಗಿ ಗಾಯಗೊಂಡ ಮೂವರನ್ನು ಮಹಾರಾಷ್ಟ್ರದ ಮೀರಜ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದರೆ, ಇನ್ನುಳಿದ ಗಾಯಾಳುಗಳಿಗೆ ಅಥಣಿ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಂಚಲಿ ಮಾಯಕ್ಕ ದೇವಿ ದರ್ಶನ ಪಡೆದುಕೊಂಡು ಎಲ್ಲರೂ ವಾಪಸಾಗುತ್ತಿದ್ದರು. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Road accident : ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿದ ಆಟೋ ರಿಕ್ಷಾ: ಮಹಿಳೆ ಸ್ಥಳದಲ್ಲೇ ಮೃತ್ಯು, ಇಬ್ಬರಿಗೆ ಗಾಯ

ಅಪಘಾತವಾದ ಕೂಡಲೇ ಸಮೀಪದಲ್ಲಿದ್ದ ನಾಗರಿಕರು ರಕ್ಷಣೆಗೆ ದಾವಿಸಿದ್ದಾರೆ. ಕೂಡಲೇ ಪೊಲೀಸರಿಗೆ ಹಾಗೂ ಆಂಬ್ಯುಲೆನ್ಸ್‌ಗೆ ಮಾಹಿತಿ ಮುಟ್ಟಿಸಲಾಗಿದೆ. ತಕ್ಷಣವೇ ಆಂಬ್ಯುಲೆನ್ಸ್‌ ವ್ಯವಸ್ಥೆಯಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸಾಗಿಸಲಾಗಿದೆ.

Exit mobile version