Site icon Vistara News

Road Accident : ಬೈಕ್‌ ಓವರ್‌ಟೇಕ್‌ ವೇಳೆ ಟೆಂಪೊ ಪಲ್ಟಿ; ಕ್ರೀಡಾಕೂಟಕ್ಕೆ ಹೋಗುತ್ತಿದ್ದ 25 ವಿದ್ಯಾರ್ಥಿಗಳಿಗೆ ಗಾಯ

Tempo overturns

ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳನ್ನು ತುಂಬಿಕೊಂಡು ಹೋಗುತಿದ್ದ ಟೆಂಪೋ‌ವೊಂದು ಬೈಕ್‌ನ್ನು (Tempo Overturns) ಓವರ್‌ಟೇಕ್‌ ಮಾಡುವ ಭರದಲ್ಲಿ ಪಲ್ಟಿಯಾಗಿ ಬಿದ್ದಿದ್ದು (Road Accident), ಟೆಂಪೋದಲ್ಲಿದ್ದ 25 ವಿದ್ಯಾರ್ಥಿಗಳಿಗೆ (Students injured) ಗಂಭೀರ ಗಾಯಗಳಾಗಿವೆ. ಒಬ್ಬ ವಿದ್ಯಾರ್ಥಿನಿಯ ಕೈ ಮುರಿತ ಆಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆ (Chikkaballapura News) ಚಿಂತಾಮಣಿ ತಾಲ್ಲೂಕಿನ ಟಿ ಹೊಸಹಳ್ಳಿ ಮೋರಿ ಬಳಿ ಅಪಘಾತ ಸಂಭವಿಸಿದೆ. 25 ವಿದ್ಯಾರ್ಥಿಗಳನ್ನು ತುಂಬಿಕೊಂಡು ಹೋಗುತಿದ್ದ ಟೆಂಪೋ‌ ಎದುರಿನಿಂದ ಹೋಗುತ್ತಿದ್ದ ಬೈಕನ್ನು ಓವರ್ ಟೇಕ್ ಮಾಡುವ ವೇಳೆ ಮುಗ್ಗರಿಸಿ ಬಿದ್ದಿದೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಚಿಕಿತ್ಸೆಗೆಂದು ಚಿಂತಾಮಣಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿಂತಾಮಣಿ ಸಮೀಪದ ಸಂತೇಕಲ್ಲಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುತಿದ್ದ ವಿದ್ಯಾರ್ಥಿಗಳು ಈ ರೀತಿ ಗಾಯಗೊಂಡಿದ್ದಾರೆ. ಇವರು ಸಂತೇಕಲ್ಲಹಳ್ಳಿಯಿಂದ ಮಸ್ತೇನಹಳ್ಳಿ ಶಾಲೆಗೆ ಕ್ರೀಡಾಕೂಟಕ್ಕೆ ತೆರಳುತಿದ್ದರು.

ವಿದ್ಯಾರ್ಥಿಗಳು ತೆರಳಬೇಕಾಗಿದ್ದ ದಾರಿಯಲ್ಲಿ ಬಸ್‌ಗಳ ಸಂಖ್ಯೆ ಕಡಿಮೆ. ಸಮಯಕ್ಕೆ ಸರಿಯಾಗಿ ತಲುಪುವುದು ಕಷ್ಟ ಎಂದು ಅಲ್ಲಿನ ಶಿಕ್ಷಕರು ಬೇರೆ ವ್ಯವಸ್ಥೆ ಮಾಡೋಣ ಎಂದು ಹೇಳಿದ್ದಾರೆ. ಮೊದಲು ರಿಕ್ಷಾದಲ್ಲಿ ಹೋಗುವುದು ಎಂದು ತೀರ್ಮಾನವಾಗಿತ್ತು. ಅದರೆ, ಇಷ್ಟೊಂದು ಜನರಿಗೆ ಹಲವು ರಿಕ್ಷಾ ಮಾಡಬೇಕಾಗುತ್ತದೆ ಎಂದು ಟೆಂಪೋ ಬುಕ್‌ ಮಾಡಲಾಯಿತು.

ಶಿಕ್ಷಕರ ಸಲಹೆಯಂತೆ ವಿದ್ಯಾರ್ಥಿಗಳು ಟೆಂಪೋ ಹತ್ತಿದ್ದರು. ಕ್ರೀಡಾಕೂಟಕ್ಕೆ ಹೋಗಲು ತಡವಾಗುತ್ತದೆ ಎಂಬ ಕಾರಣಕ್ಕೆ ಟೆಂಪೋ ಚಾಲಕನೂ ವಾಹನವನ್ನು ವೇಗವಾಗಿ ಓಡಿಸಿದ್ದ. ಈ ನಡುವೆ ಎದುರು ಬೈಕ್‌ ಒಂದು ಹೋಗುತ್ತಿತ್ತು. ಆಗ ಅದನ್ನು ಓವರ್‌ಟೇಕ್‌ ಮಾಡಲು ಟೆಂಪೊ ಸ್ವಲ್ಪ ವೇಗವಾಗಿ ಚಲಿಸಿತು. ಇದರಿಂದ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ.

ಗಾಯಗೊಂಡ ವಿದ್ಯಾರ್ಥಿಗಳು

ಇದರಿಂದ ಎಲ್ಲ 25 ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಒಬ್ಬ ವಿದ್ಯಾರ್ಥಿನಿಯ ಕೈ ಮುರಿತ ಉಂಟಾಗಿದೆ. ಗಾಯಾಳುಗಳನ್ನು ಎರಡು ಕಾರು ಮತ್ತು ಇತರ ವಾಹನಗಳಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಷ್ಟೊಂದು ದೊಡ್ಡ ಅಪಘಾತ ಸಂಭವಿಸಿದರೂ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ ವಿದ್ಯಾರ್ಥಿಗಳು.

ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಿವಮೊಗ್ಗದಲ್ಲೂ ಸಂಭವಿಸಿತ್ತು ದುರಂತ

ಬುಧವಾರ ಶಿವಮೊಗ್ಗದ ಸಾಗರ ಸಮೀಪ ಬಸ್‌ ಒಂದು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ಬಸ್‌ ವಿದ್ಯುತ್‌ ಶಾಕ್‌ಗೆ ಒಳಗಾಗಿ 35ಕ್ಕೂ ಅಧಿಕ ಮಕ್ಕಳು ಗಾಯಗೊಂಡಿದ್ದರು. ಬೆಳಗ್ಗೆ ಮಕ್ಕಳು ಮತ್ತು ಇತರ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್‌ ಮಾರ್ಗದ ಬದಿಯ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿತ್ತು. ಆಗ ಅದರಲ್ಲಿದ್ದ ವಿದ್ಯಾರ್ಥಿಗಳಿಗೆ ಶಾಕ್‌ ತಗುಲಿತ್ತು. ಕೂಡಲೇ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರು ಚೇತರಿಸಿಕೊಂಡಿದ್ದಾರೆ.

ಇದನ್ನೂ ಓದಿ : Road Accident: ಟಿಟಿ ವಾಹನ-ಬೈಕ್ ಮುಖಾಮುಖಿ ಡಿಕ್ಕಿಯಾಗಿ ಸವಾರ ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ

Exit mobile version