ಚಿತ್ರದುರ್ಗ: ಸಂಕ್ರಾಂತಿಯ ದಿನದಂದು (Makara Sankranti) ಆರಂಭಗೊಂಡ ಅಪಘಾತ ಸರಣಿ (Accident Series) ರಾಜ್ಯದಲ್ಲಿ ಮುಂದುವರಿಯುವಂತೆ ಕಾಣುತ್ತಿದೆ. ಸೋಮವಾರ ರಾಜ್ಯದ ನಾನಾ ಭಾಗಗಳಲ್ಲಿ ಸಂಭವಿಸಿದ ಹಲವು ಅಪಘಾತಗಳಲ್ಲಿ (Road accident) ಒಟ್ಟು 16 ಮಂದಿ ಪ್ರಾಣ ಕಳೆದುಕೊಂಡಿದ್ದರು. ಮಂಗಳವಾರ ಮುಂಜಾನೆಯಿಂದ ಎರಡು ಅಪಘಾತಗಳಲ್ಲಿ ಮೂವರ ಜೀವಬಲಿಯಾಗಿದೆ. ಇದೀಗ ಚಿತ್ರದುರ್ಗದಲ್ಲಿ ಕಾಲೇಜಿಗೆ ಹೋಗಲು ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳು (College student death) ಲಾರಿ ಡಿಕ್ಕಿ ಹೊಡೆದು (Lorry hits Student) ಪ್ರಾಣ ಕಳೆದುಕೊಂಡಿದ್ದಾಳೆ.
ಚಿತ್ರದುರ್ಗ ತಾಲೂಕಿನ ವಿಜಾಪುರ ಗೊಲ್ಲರಹಟ್ಟಿ ಬಳಿ ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿನಿಗೆ ಲಾರಿ ಡಿಕ್ಕಿಯಾಗಿ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಲಾರಿ ಡಿಕ್ಕಿ ಹೊಡೆತಕ್ಕೆ ಆಕೆ ಸರ್ವೀಸ್ ರಸ್ತೆಗೆ ಎಸೆಯಲ್ಪಟ್ಟು ಪ್ರಾಣ ಕಳೆದುಕೊಂಡಿದ್ದಾಳೆ.
ವಿಜಾಪುರ ಗೊಲ್ಲರಹಟ್ಟಿ ಗ್ರಾಮದ ಸುಚಿತ್ರ (19) ಮೃತ ವಿದ್ಯಾರ್ಥಿನಿ. ಆಕೆ ಮತ್ತು ಆಕೆಯ ಇಬ್ಬರು ಗೆಳತಿಯರು ಕಾಲೇಜಿಗೆ ಹೋಗಲು ಬಸ್‌ಗಾಗಿ ಕಾಯುತ್ತಿದ್ದರು. ಆಗ ದಾವಣಗೆರೆಯಿಂದ ಬೆಂಗಳೂರಿಗೆ ಹೊರಟಿದ್ದ ಲಾರಿಯೊಂದು ರಸ್ತೆ ಬದಿ ನಿಂತಿದ್ದ ಅವರ ಮೇಲೆ ನುಗ್ಗಿದೆ.
ಲಾರಿ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದ್ದು, ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Road Accident: ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ, ಡೆಲಿವರಿ ಬಾಯ್ ಸಾವು
ಬೈಕ್ ಡಿವೈಡರ್‌ಗೆ ಬಡಿದು ತಂದೆ-ಮಗಳು ಮೃತ್ಯು
ನೆಲಮಂಗಲ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಸಂಭವಿಸಿದ ಭೀಕರ ಅಪಘಾತದಲ್ಲಿ (Road accident) ತಂದೆ ಮತ್ತು ಐದು ವರ್ಷದ ಮಗಳು (Father and daughter Dead) ಮೃತಪಟ್ಟಿದ್ದಾರೆ. ಬೈಕ್ ಡಿವೈಡರ್‌ಗೆ ಡಿಕ್ಕಿ (Bike hits Divider) ಹೊಡೆದು ಸಂಭವಿಸಿದ ದುರಂತ ಇದಾಗಿದೆ.
ಬೆಂಗಳೂರಿನ ಉತ್ತರ ತಾಲೂಕಿನ ಅಡಕಮಾರನಹಳ್ಳಿಯಲ್ಲಿ ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ತಂದೆ-ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪತ್ನಿಗೆ ಗಂಭೀರ ಗಾಯಗಳಾಗಿವೆ.
ಬೆಂಗಳೂರಿನ ಚಿಕ್ಕಪೇಟೆಯ ಅಮಿತ್ (32) ಹಾಗೂ 5 ವರ್ಷದ ಮಗಳು ಅನಿತಾ ಮೃತಪಟ್ಟವರು. ಅಮಿತ್ ಪತ್ನಿ ಕುಸುಮಾ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ತಂದೆ ಹಾಗೂ ಮಗಳ ಇಬ್ಬರ ತಲೆಗೂ ಗಂಭೀರ ಪೆಟ್ಟಾಗಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟರು.
ಅಮಿತ್ ಮತ್ತು ಕುಸುಮಾ ಅವರು ತಮ್ಮ ಪುಟ್ಟ ಮಗಳೊಂದಿಗೆ ಸಂಕ್ರಾಂತಿ ಹಬ್ಬಕ್ಕೆಂದು ಊರಿಗೆ ಹೋಗಿದ್ದರು. ಅಲ್ಲಿಂದ ಹಬ್ಬ ಮುಗಿಸಿ ಮರಳುವಾಗ ನೆಲಮಂಗಲ ಬಳಿಯ ಅಡಕಮಾರನಹಳ್ಳಿಯ ಪ್ಲೈಓವರ್ ಮೇಲೆ ಅವರು ಚಲಾಯಿಸುತ್ತಿದ್ದ ಬೈಕ್ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ತಂದೆ, ಮಗಳು ಸ್ಥಳದಲ್ಲೇ ಮೃತಪಟ್ಟರೆ, ತಾಯಿಯ ಸ್ಥಿತಿ ಗಂಭೀರವಾಗಿದೆ.