ಚಾಮರಾಜನಗರ: ಮಹದೇಶ್ವರ ಬೆಟ್ಟದ ಪಾಲಾರ್ ಬಳಿ ಪ್ರವಾಸಿ ಬಸ್ ಉರುಳಿ (Road Accident) ಬಿದ್ದಿದ್ದು, 15ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ತಮಿಳುನಾಡು ಪ್ರವಾಸ ಮುಗಿಸಿ ಮಹದೇಶ್ವರ ಬೆಟ್ಟಕ್ಕೆ ಬರುತ್ತಿದ್ದ ಬಸ್ ಇದಾಗಿತ್ತು ಎನ್ನಲಾಗಿದೆ.
ಬಸ್‌ನಲ್ಲಿ 50ಕ್ಕೂ ಹೆಚ್ಚು ಪ್ರವಾಸಿಗರಿದ್ದರು ಎನ್ನಲಾಗಿದ್ದು, ಈ ಪೈಕಿ 15 ಮಂದಿಗೆ ಗಾಯಗಳಾಗಿವೆ. ಗುಜರಾತ್ ನೋಂದಣಿ ಹೊಂದಿದ್ದ ಬಸ್ ಇದಾಗಿದೆ. ಆದರೆ, ಪ್ರವಾಸಿಗರು ಗುಜರಾತ್‌ನವರಾಗಿದ್ದಾರೆ.
ಇದನ್ನೂ ಓದಿ: Pathaan Movie: ಸಣ್ಣ ಬದಲಾವಣೆಗಳೊಂದಿಗೆ ತೆರೆಗೆ ಅಪ್ಪಳಿಸಿದ ʻಪಠಾಣ್ʼ, ಕೇಸರಿ ಬಿಕಿನಿ ವಿವಾದ ಏನಾಯ್ತು?
ಮಲೆಮಹದೇಶ್ವರ ಬೆಟ್ಟದ ಪಾಲಾರ್ ರಸ್ತೆಯ ಎರಡನೇ ತಿರುವಿನಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ಸೀದಾ ರಸ್ತೆಯ ಪಕ್ಕಕ್ಕೆ ವಾಲಿದೆ. ಈ ಹಿನ್ನೆಲೆಯಲ್ಲಿ ಮೇಲಿನ ಗುಡ್ಡದಿಂದ ಕೆಳಗಿನ ರಸ್ತೆಗೆ ಬಂದು ಬಿದ್ದಿದೆ. ಈ ಹಿನ್ನೆಲೆಯಲ್ಲಿ ೧೫ಕ್ಕೂ ಹೆಚ್ಚು ಮಂದಿಗೆ ತೀವ್ರ ಗಾಯಗಳಾಗಿದ್ದು, ಗಾಯಗೊಂಡವರನ್ನು ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
ಮಾಲ್ಗುಡಿ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ ಇಬ್ಬರು ದುರ್ಮರಣ
ಮಂಡ್ಯದ ರೈಲು ನಿಲ್ದಾಣದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ (Mandya Train accident). ರೈಲು ಇಳಿದು ಹಳಿ ದಾಟುತ್ತಿದ್ದ ಇಬ್ಬರು ಮಹಿಳೆಯರಿಗೆ ಇನ್ನೊಂದು ರೈಲು ಡಿಕ್ಕಿ ಹೊಡೆದು ಇಬ್ಬರು ಮಹಿಳೆಯರು ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ಕಾಚಿಗುಡ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಂದಿಳಿದ ಮಹಿಳೆಯರು ಮತ್ತೊಂದು ಭಾಗಕ್ಕೆ ಹೋಗಲು ರೈಲು ಹಳಿ ದಾಟುತ್ತಿದ್ದರು. ಆಗ ಮತ್ತೊಂದು ಹಳಿಯಲ್ಲಿ ಬಂದ ಮಾಲ್ಗುಡಿ ಎಕ್ಸ್‌ಪ್ರೆಸ್ ರೈಲು ಅವರಿಗೆ ಡಿಕ್ಕಿ ಹೊಡೆದಿದೆ. ಅವರಿಬ್ಬರೂ ಹಳಿಯಲ್ಲೇ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
ಕಾಚಿಗುಡ ಎಕ್ಸ್‌ಪ್ರೆಸ್ ನಿಂತು ಇವರೆಲ್ಲ ಇಳಿದು ಹಳಿ ದಾಟುವ ಹೊತ್ತಿಗೇ ಮೈಸೂರಿನಿಂದ ಬೆಂಗಳೂರಿನತ್ತ ಹೊರಟಿದ್ದ ಮಾಲ್ಗುಡಿ ಎಕ್ಸ್‌ಪ್ರೆಸ್ ರೈಲು ಬಂದಿದೆ. ಹೀಗಾಗಿ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಇಲ್ಲಿ ರೈಲು ಹಳಿಗಳನ್ನು ದಾಟಿಕೊಂಡು ಒಂದು ಪ್ಲಾಟ್‌ಫಾರಂನಿಂದ ಇನ್ನೊಂದು ಕಡೆಗೆ ಹೋಗಲು ಅವಕಾಶವಿಲ್ಲ. ಅದಕ್ಕಾಗಿ ಪ್ರತ್ಯೇಕ ದಾರಿ ಇದೆ. ಆದರೆ, ಅವಸರದಿಂದ ಸಾಗಿದ ಮಹಿಳೆಯರು ರೈಲು ಬಂದಿದ್ದನ್ನು ಗಮನಿಸದೆ ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: Illicit relationship: ಅಂಕಲ್ ಜೈಲಲ್ಲಿ, ಆಂಟಿ ಲವ್ವಲ್ಲಿ; ಒದೆ ತಿನ್ನುತ್ತಿದ್ದ ಮಕ್ಕಳಿಂದ ಕಂಪ್ಲೇಂಟ್, FIR ದಾಖಲು
ಮೃತರಲ್ಲಿ ಒಬ್ಬರ ಗುರುತು ಪತ್ತೆ
ರೈಲು ದುರಂತದಲ್ಲಿ ಮೃತಪಟ್ಟ ಇಬ್ಬರು ಮಹಿಳೆಯರ ಪೈಕಿ ಒಬ್ಬರ ಗುರುತು ಪತ್ತೆಯಾಗಿದೆ. ಇವರು ಬಸರಾಳು ಸಮೀಪದ ಹುರುಳಿಜವರನಕೊಪ್ಪಲು ಮೂಲದ ಶಶಿ ಎಂದು ಗುರುತಿಸಲಾಗಿದೆ. ಇವರ ಸಂಬಂಧಿಕರು ಸ್ಥಳಕ್ಕೆ ಆಗಮಿಸಿದ್ದು, ಅಣ್ಣನ ಮಗಳನ್ನು ಕಳೆದುಕೊಂಡ ಸೌಭಾಗ್ಯ ಎಂಬ ಮಹಿಳೆಯ ಗೋಳು ಎಂಥವರನ್ನೂ ಕಲಕುವಂತಿದೆ. ಇನ್ನೊಬ್ಬ ಮಹಿಳೆ ವೃದ್ಧೆಯಾಗಿದ್ದು, ಅವರ ಮುಖ ಗುರುತು ಹಚ್ಚಲಾಗದಷ್ಟು ಜಜ್ಜಿ ಹೋಗಿದೆ.
ಸ್ಥಳಕ್ಕೆ ರೈಲ್ವೇ ಪೊಲೀಸರು, ಸ್ಥಳೀಯ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.