ಹುಬ್ಬಳ್ಳಿ/ ಚಿಕ್ಕೋಡಿ/ಕೊಪ್ಪಳ: ಹುಬ್ಬಳ್ಳಿ ಸಮೀಪ ಕಾರೊಂದು ಪಲ್ಟಿಯಾಗಿದ್ದು, (Road Accident) ಕಾರುವೊಂದು ಪಲ್ಟಿಯಾಗಿದ್ದು, ಹಲವರು ಗಾಯಗೊಂಡಿದ್ದರು. ಅದೇ ಮಾರ್ಗದಲ್ಲಿ ಬರುತ್ತಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಕ್ಷಣವೇ ನೆರವಿಗೆ ದಾವಿಸಿದ್ದಾರೆ.
ಅಪಘಾತವಾದ ವಿಷಯ ತಿಳಿದ ಗೃಹ ಸಚಿವರು ತಮ್ಮ ಕಾರನ್ನು ನಿಲ್ಲಿಸಿ ತಕ್ಷಣವೇ ನೆರವಿಗೆ ದಾವಿಸಿದ್ದಾರೆ. ತಮ್ಮ ಜತೆಗಿದ್ದ ಗನ್‌ಮ್ಯಾನ್‌ಗಳನ್ನು ಅಲ್ಲಿಗೆ ಕಳುಹಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸೂಕ್ತ ವ್ಯವಸ್ಥೆ ಮಾಡಿಸಿದ್ದಾರೆ. ಹತ್ತಿರವೇ ಇದ್ದ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದು ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ.
ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರ ದುರ್ಮರಣ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಹಳ್ಳದ ಬಳಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಥಳದಲ್ಲಿಯೇ ಮೂವರು ದುರ್ಮರಣ ಹೊಂದಿದ್ದಾರೆ. ರಾಯಬಾಗ ಹಾರೂಗೇರಿ ಮುಖ್ಯರಸ್ತೆಯಲ್ಲಿ ಭೀಕರ ಅಪಘಾತ ನಡೆದಿದ್ದು, ಎರಡು ಬೈಕ್‌ಗಳ ಮೇಲೆ ಒಟ್ಟು ನಾಲ್ಕು ಜನ ಪ್ರಯಾಣ ಮಾಡುತ್ತಿದ್ದರು. ನಾಲ್ವರಲ್ಲಿ ಮೂವರು ಸ್ಥಳದಲ್ಲಿ ಮೃತಪಟ್ಟಿದ್ದರೆ, ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳು ಅನ್ನು ಸಾರ್ವಜನಿಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕ್ರಷರ್ ವಾಹನ ಡಿಕ್ಕಿಯಾಗಿ ವೃದ್ಧ ಸ್ಥಳದಲ್ಲಿಯೇ ಸಾವು
ಕೊಪ್ಪಳ ಜಿಲ್ಲೆ ಕುಕನೂರು ಪಟ್ಟಣದ ಯಲಬುರ್ಗಾ ರಸ್ತೆಯಲ್ಲಿ ಕ್ರಷರ್ ವಾಹನ ಡಿಕ್ಕಿ ಹೊಡೆದು ವೃದ್ಧರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹೇಮರಡ್ಡಿ ಬೀಡನಾಳ (65) ಮೃತ ವ್ಯಕ್ತಿ.
ಇದನ್ನೂ ಓದಿ: Navodaya School: ಕೈಕೊಟ್ಟ ನವೋದಯ ಶಾಲಾ ವೆಬ್‌ಸೈಟ್; ಅರ್ಜಿ ಸಲ್ಲಿಸಲು ಆಗದೆ ವಿದ್ಯಾರ್ಥಿಗಳು ಕಂಗಾಲು
ಇವರು ಕುಕನೂರು ತಾಲೂಕಿನ ದ್ಯಾಂಪುರ ಗ್ರಾಮದವರು ಎಂದು ತಿಳಿದು ಬಂದಿದೆ. ಕ್ರಷರ್ ವಾಹನ ಹಾಗೂ ಚಾಲಕನನ್ನು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ. ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.