Site icon Vistara News

Road Accident | ಅರಬೈಲ್‌ ಘಟ್ಟದಲ್ಲಿ ಟ್ಯಾಂಕರ್‌ಗೆ ಸ್ಕೂಲ್‌ ಬಸ್‌ ಡಿಕ್ಕಿ; 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

yellapura accident

ಯಲ್ಲಾಪುರ: ಟ್ಯಾಂಕರ್‌ಗೆ ಸ್ಕೂಲ್ ಬಸ್ ಡಿಕ್ಕಿ ಹೊಡೆದು (Road Accident) 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ತಾಲೂಕಿನ ಅರಬೈಲ್ ಘಟ್ಟದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

ಗಾಯಗೊಂಡವರು ಹುಬ್ಬಳ್ಳಿಯ ಸೇಂಟ್ ಆಂತೋನಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ ಎಂಬುದು ತಿಳಿದುಬಂದಿದೆ. ಇವರೆಲ್ಲರು ಸ್ಕೂಲ್ ಬಸ್‌ನಲ್ಲಿ ಸುಂಕಸಾಳಕ್ಕೆ ಪ್ರವಾಸಕ್ಕೆ ಹೊರಟಿದ್ದರು. ಅರಬೈಲ್ ಘಟ್ಟದಲ್ಲಿ ಹಾಳಾಗಿ ನಿಂತಿದ್ದ ಟ್ಯಾಂಕರ್ ಹಿಂದೆ ಇನ್ನೊಂದು ಟ್ಯಾಂಕರ್ ನಿಂತಿತ್ತು. ಇದು ಚಾಲಕನ ಅರಿವಿಗೆ ಬಾರದಿದ್ದರಿಂದ ಅದಕ್ಕೆ ಸ್ಕೂಲ್ ಬಸ್ ಡಿಕ್ಕಿ ಹೊಡೆದಿದೆ ಎಂದು ಅಂದಾಜಿಸಲಾಗಿದೆ.

ಬಸ್ ಚಾಲಕನಿಗೆ ತೀವ್ರ ಗಾಯಗಳಾಗಿದ್ದು, 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲರನ್ನೂ ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ | Road Accident | ಶಾಲಾ ಬಸ್‌ ಪಲ್ಟಿ; ಮಹಿಳೆ ಸಾವು, 12 ಮಂದಿಗೆ ಗಂಭೀರ ಗಾಯ

Exit mobile version