Site icon Vistara News

Road Accident | ಟಿಪ್ಪರ್-ಆಟೋ ಮುಖಾಮುಖಿ ಡಿಕ್ಕಿಯಾಗಿ 3 ವರ್ಷದ ಬಾಲಕಿ ಸಾವು, ನಾಲ್ವರ ಸ್ಥಿತಿ ಗಂಭೀರ

Road Accident

ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಗವಿಮಠ ಬಳಿ ಲಾರಿ ಹಾಗೂ ಆಟೋ ಮುಖಾಮುಖಿ ಡಿಕ್ಕಿಯಾಗಿ (Road Accident) ಮೂರು ವರ್ಷದ ಬಾಲಕಿ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಂಗಳೂರಿನ ಹೆಗ್ಗೆರೆ ಮೂಲದ ತನ್ವಿಕಾ (3) ಮೃತ ಬಾಲಕಿ. ಐಶ್ವರ್ಯ, ಸರಸ್ವತಿ, ಮುನಿಯಮ್ಮ, ಸೌಮ್ಯ ಶಿವರಾಜು ಗಾಯಾಳುಗಳು. ಮದ್ದೂರು ಕಡೆಯಿಂದ ಬರುತ್ತಿದ್ದ ಟಿಪ್ಪರ್ ಹಾಗೂ ಕುಣಿಗಲ್ ಕಡೆಯಿಂದ ಹೋಗುತ್ತಿದ್ದ ಆಟೋ ಡಿಕ್ಕಿಯಾಗಿವೆ. ಈ ವೇಳೆ ಬಾಲಕಿ ಕೊನೆಯುಸಿರೆಳೆದಿದ್ದು, ಗಾಯಾಳುಗಳನ್ನು ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತು.

ಕಿತ್ತೂರು ಬಳಿ ತೆಂಗಿನ ಕಾಯಿ ತುಂಬಿದ್ದ ಲಾರಿಗೆ ಬೆಂಕಿ
ಬೆಳಗಾವಿ: ಜಿಲ್ಲೆಯ ಕಿತ್ತೂರು ಹೊರ ವಲಯದ ಪೆಟ್ರೋಲ್ ಬಂಕ್ ಕೂಗಳತೆ ದೂರದಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಲಾರಿ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹಾವೇರಿಯಿಂದ ಬೆಳಗಾವಿಗೆ ಬರುತ್ತಿದ್ದ ಲಾರಿಯನ್ನು ಪೆಟ್ರೋಲ್‌ ಬಂಕ್‌ ಪಕ್ಕ ನಿಲ್ಲಿಸಲಾಗಿತ್ತು. ಆದರೆ ಲಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕ ಧಾವಿಸಿ ಬೆಂಕಿ ನಂದಿಸಿದ್ದಾರೆ.

ಇದನ್ನೂ ಓದಿ | NIA Court | ಭಯೋತ್ಪಾದಕ‌ ಚಟುವಟಿಕೆಯಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳಿಗೆ 7 ವರ್ಷ ಜೈಲು

Exit mobile version