Site icon Vistara News

Road Accident : ಸೋದರನ ನಿಶ್ಚಿತಾರ್ಥ ಮುಗಿಸಿ ಹೊರಟ ಇಬ್ಬರು ಅಪಘಾತದಲ್ಲಿ ಮೃತ್ಯು

Gadaga accident two bike riders dead

ಗದಗ: ಕರ್ನಾಟಕ ರಾಜ್ಯ ಸರ್ಕಾರಿ ಬಸ್‌ (KSRTC Bus) ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು (Two riders dead) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಗೋಗೇರಿ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ತಮ್ಮ ಸೋದರನ ಮದುವೆಯ ನಿಶ್ಚಿತಾರ್ಥದಲ್ಲಿ ಭಾಗವಹಿಸಿದ ಖುಷಿಯಲ್ಲಿದ್ದ ಅವರು ರಸ್ತೆ ಮಧ್ಯೆ ಹೆಣವಾಗಿದ್ದಾರೆ.

ದಾವಲಸಾಬ್ ಹುಸೇನಸಾಬ್ ಮ್ಯಾಗೇರಿ(28), ಹಸನಸಾಬ್ ಹುಸೇನಸಾಬ್ ಖಾನಗೌಡರ್ (25) ಮೃತಪಟ್ಟ ದುರ್ದೈವಿಗಳು. ಇವರು ಕೊಪ್ಪಳ ಜಿ.ಕುಷ್ಟಗಿ ತಾಲೂಕಿನ ಕಲಾಲಬಂಡಿ ಗ್ರಾಮದವರಾಗಿದ್ದು, ರೋಣ ತಾಲೂಕಿನ ಸವಡಿ ಗ್ರಾಮದಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದರು.

ಇವರ ಸಹೋದರ ವಿವಾಹ ನಿಶ್ಚಿತಾರ್ಥ ರೋಣದ ಬಳಿ ನಡೆದಿತ್ತು. ಸಹೋದರನ ನಿಶ್ಚಿತಾರ್ಥ ಮಗಿಸಿಕೊಂಡು ವಾಪಸ್ ಬರುವ ವೇಳೆ ದುರ್ಘಟನೆ ಸಂಭವಿಸಿದ್ದು, ಇಬ್ಬರೂ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. KSRTC ಬಸ್ ಸಿಂಧನೂರಿನಿಂದ ಗಜೇಂದ್ರಗಡಕ್ಕೆ ಬರುತ್ತಿತ್ತು.

ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್‌ ಡಿಕ್ಕಿಯಾಗಿ ಇಬ್ಬರು ಸವಾರರು ಮೃತ್ಯು

ವಿಜಯಪುರ: ಕಬ್ಬು ತುಂಬಿದ ಟ್ರ್ಯಾಕ್ಟರ್‌ಗೆ ವೇಗವಾಗಿ ಧಾವಿಸಿ ಬಂದ ಬೈಕ್ ಡಿಕ್ಕಿಯಾಗಿ (Bike Rams into tractor) ಸವಾರರಿಬ್ಬರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡ (Bike riders dead) ದಾರುಣ ಘಟನೆ (Road Accident) ವಿಜಯಪುರ ಜಿಲ್ಲೆಯ (Vijayapura news) ತಾಳಿಕೋಟಿ ತಾಲೂಕಿನ ದೇವರಹುಲಗಬಾಳ ಗ್ರಾಮದ ಬಳಿ ಬುಧವಾರ ಸಂಜೆ ನಡೆದಿದೆ.

ತಾಳಿಕೋಟಿ ಮುದ್ದೇಬಿಹಾಳ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಮೃತರನ್ನು ತಾಳಿಕೋಟಿ ತಾಲೂಕಿನ ತುಂಬಗಿ ಗ್ರಾಮದವರಾದ ಹುಸೇನಸಾಬ ಇನಾಂದಾರ್ (30), ಮೈಬುಸಾಬ ನದಾಫ್ (33) ಎಂದು ಗುರುತಿಸಲಾಗಿದೆ.

ಕಬ್ಬು ತುಂಬಿಕೊಂಡು ಬಂದು ನಿಂತಿದ್ದ ಟ್ರ್ಯಾಕ್ಟರ್‌ಗೆ ಅತಿ ವೇಗದಲ್ಲಿ ಬಂದ ಬೈಕ್‌ ಡಿಕ್ಕಿಯಾಗಿದೆ. ಬೈಕ್‌ ಸಂಪೂರ್ಣ ನಜ್ಜುಗುಜ್ಜಾಗಿದೆ. ತಾಳಿಕೋಟೆಯಿಂದ ಮುದ್ದೇಬಿಹಾಳ ಕಡೆಗೆ ಹೊರಟಿದ್ದ ಬೈಕ್ ಸವಾರರಿಗೆ ಹೇಗೆ ನಿಯಂತ್ರಣ ತಪ್ಪಿತೋ, ಬೈಕ್‌ ಯಾಕೆ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆಯಿತೋ ಸ್ಪಷ್ಟತೆ ಇಲ್ಲ. ತಾಳಿಕೋಟಿ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Road Accident : ಬರ್ತ್‌ಡೇ ದಿನವೇ ಡೆತ್‌ಡೇ; ಸ್ನೇಹಿತರಿಬ್ಬರ ಪ್ರಾಣ ತೆಗೆದ ಬಸ್‌!

Exit mobile version