Site icon Vistara News

Road Accident | ಶಾಲಾ ಬಸ್‌ ಪಲ್ಟಿ; ಮಹಿಳೆ ಸಾವು, 12 ಮಂದಿಗೆ ಗಂಭೀರ ಗಾಯ

ಶಿರಸಿ: ಶಾಲಾ ಬಸ್ ಪಲ್ಟಿಯಾಗಿ ಒಬ್ಬ ಮಹಿಳೆ ಮೃತಪಟ್ಟು 12 ಮಂದಿ ತೀವ್ರ ಗಾಯಗೊಂಡಿರುವ ಘಟನೆ ಶಿರಸಿ ತಾಲೂಕಿನ ಬನವಾಸಿ ಭಾಗದ ಬುಗುಡಿಕೊಪ್ಪದಲ್ಲಿ (Road Accident) ನಡೆದಿದೆ. ಕಸ್ತೂರಮ್ಮಾ (50) ಮೃತ ದುರ್ದೈವಿ.

ಪಲ್ಟಿಯಾಗಿ ಬಿದ್ದಿರುವ ಶಾಲಾ ಬಸ್‌

ಶಾಲಾ ಬಸ್‌ ಅಪಘಾತದಲ್ಲಿ 12 ಮಂದಿ ತೀವ್ರವಾದ ಗಾಯಗೊಂಡಿದ್ದು, ಗಾಯಾಳುಗಳನ್ನು ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ರಾಣಿಬೆನ್ನೂರಿನ ಪರಿಣಿತಿ ವಿದ್ಯಾ ಮಂದಿರಕ್ಕೆ ಸೇರಿದ ಶಾಲಾ ಬಸ್ ಇದಾಗಿದ್ದು, ಪ್ರವಾಸಕ್ಕೆಂದು ಶಾಲಾ ಸಿಬ್ಬಂದಿ ಬಂದಿದ್ದರು ಎನ್ನಲಾಗಿದೆ. ಬಸ್ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Modi In Bengaluru | ಕರ್ನಾಟಕ ಭಾರತ್‌ ಗೌರವ್‌ ಕಾಶಿ ಯಾತ್ರೆಗೆ ಹೋಗುವುದು ಹೇಗೆ?

Exit mobile version