ನೆಲಮಂಗಲ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬೀಗ ಮುರಿದು ಚಿನ್ನಾಭರಣ ಕಳವು ಮಾಡುತ್ತಿದ್ದ ಕುಖ್ಯಾತ ಮನೆಗಳ್ಳರನ್ನು (Theft Case ) ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಅಟ್ಟೂರು ಲೇಔಟ್‌ನ ವೆಂಕಟೇಶ್ ಹಾಗೂ ಆತನ ಅತ್ತೆ ಮಹದೇವಮ್ಮ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 61 ಲಕ್ಷ ರೂ. ಮೌಲ್ಯದ 850 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಆರೋಪಿ ವೆಂಕಟೇಶ್ ಕಳೆದ ಮೂರು ವರ್ಷದಿಂದ ಮನೆಗಳ್ಳತನ ಮಾಡುತ್ತಿದ್ದ. ಈತನ ಎಲ್ಲ ಕಾರ್ಯಕ್ಕೆ ಅತ್ತೆ ಮಹದೇವಮ್ಮ ಬೆಂಬಲ ಇರುವುದು ತಿಳಿದು ಬಂದಿದೆ. ಎಸಿ ಕಾರಿನಲ್ಲಿ ಓಡಾಡಿಕೊಂಡು ಮನೆ ಕಳವಿಗೆ ಸ್ಕೆಚ್ ಹಾಕುತ್ತಿದ್ದ ವೆಂಕಟೇಶ್, ಬೀಗ ಹಾಕಿರುತ್ತಿದ್ದ ಮನೆಗಳನ್ನು ಹುಡುಕುತ್ತಿದ್ದ.
ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ನಂತರ ಮನೆಗಳ ಬೀಗ ಮುರಿದು ಕಳವು ಮಾಡುತ್ತಿದ್ದ. ಬಳಿಕ ಕದ್ದ ಬಂಗಾರವನ್ನು ಅತ್ತೆ ಮಹದೇವಮ್ಮನಿಗೆ ನೀಡುತ್ತಿದ್ದ. ಕಳವು ಮಾಡಿದ ಆಭರಣವನ್ನು ಮಾರಾಟ ಮಾಡಲೆಂದೇ ಕೆಲ ಯುವಕರನ್ನು ಆಕೆ ಬಳಸಿಕೊಳ್ಳುತ್ತಿದ್ದಳು. ಹೀಗೆ ಮನೆಗಳ್ಳತನ ಮಾಡಿ ಪರಾರಿಯಾಗುತ್ತಿದ್ದ ಇವರನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಜೈಲಿಗಟ್ಟಿದ್ದಾರೆ. ಅತ್ತೆ-ಅಳಿಯನ ಜತೆ, ಕಳವು ಆಭರಣಗಳನ್ನ ಸ್ವೀಕರಿಸುತ್ತಿದ್ದ ಇತರ ಮೂವರು ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ | Love Jihad| ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುವಂತೆ ಪತಿಯಿಂದ ಚಿತ್ರಹಿಂಸೆ; ಪೊಲೀಸ್ ಮೊರೆ ಹೋದ ಹಿಂದು ಮಹಿಳೆ