ಮಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥ ಅವರಿಗೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮವನ್ನು ಕೈಬಿಡಲಾಗಿದೆ. ಕೆಲವು ಸಂಘಟನೆಗಳು ಈ ಸನ್ಮಾನ ವಿರೋಧಿಸಿ ಪ್ರತಿಭಟನೆಗೆ ನಿರ್ಧರಿಸಿದ್ದವು.
ಶನಿವಾರ ಮಂಗಳೂರಿನಲ್ಲಿ ರೋಹಿತ್ ಚಕ್ರತೀರ್ಥ ಅವರಿಗೆ ನಾಗರಿಕ ಸನ್ಮಾನ ಏರ್ಪಡಿಸಲು ಚಿಂತನ ಗಂಗಾ ಸಂಘಟನೆಯವರು ಕಾರ್ಯಕ್ರಮ ಆಯೋಜಿಸಿದ್ದರು. ಆದರೆ ನೂತನ ಪಠ್ಯದಲ್ಲಿ ಕುವೆಂಪು ಮುಂತಾದವರಿಗೆ ಅವಮಾನವಾಗಿದೆ ಎಂಬ ಹಿನ್ನೆಲೆಯಲ್ಲಿ ವಿವಾದ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ವಿವಾದಿತ ರೋಹಿತ್ ಅವರಿಗೆ ನಾಗರಿಕ ಸನ್ಮಾನ ಕೈ ಬಿಡಬೇಕು ಎಂದು ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ಹೆಸರಿನಲ್ಲಿ ಎಡಪಂಥೀಯರು ಒತ್ತಾಯಿಸಿದ್ದರು.
ಸನ್ಮಾನ ಕೈ ಬಿಡಲು ಒತ್ತಾಯಿಸಿ ಮುತ್ತಿಗೆ ಹಾಕಲು ನಿರ್ಧರಿಸಲಾಗಿತ್ತು. ಇದರಿಂದಾಗಿ ಶನಿವಾರದ ಕಾರ್ಯಕ್ರಮವನ್ನು ಆಯೋಜಕರು ಮುಂದೂಡಿದ್ದಾರೆ. ಪ್ರತಿಭಟನೆಯಿಂದ ಅಹಿತಕರ ಘಟನೆ ನಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ʼಸತ್ಯವನ್ನು ಕೆಲ ದಿನ ಹಿಮ್ಮೆಟ್ಟಿಸಬಹುದು, ಆದರೆ ಸಾಯಿಸಲಾಗದುʼ ಎಂಬ ಪೋಸ್ಟರ್‌ಗಳನ್ನು ಆಯೋಜಕರು ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ರೋಹಿತ್ ಚಕ್ರತೀರ್ಥಗೆ ನಾಗರಿಕ ಸನ್ಮಾನ ನಾಳೆ; ಮುತ್ತಿಗೆ ಹಾಕಲು ಸಂಘಟನೆಗಳ ತೀರ್ಮಾನ