Site icon Vistara News

Prajwal Revanna Case: ರೂಮ್‌, ಟಾಯ್ಲೆಟ್‌ ಕ್ಲೀನ್‌ ಇಲ್ಲ; ಜಡ್ಜ್‌ ಎದುರು ಪ್ರಜ್ವಲ್‌ ರೇವಣ್ಣ ಅಳಲು!

Prajwal Revanna Case

Room And Toilet Not Clean In SIT Custody; Says Prajwal Revanna In Court

ಬೆಂಗಳೂರು: ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣದಲ್ಲಿ ಬಂಧನದ ಭೀತಿಯಿಂದ 35 ದಿನ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್‌ ರೇವಣ್ಣ (Prajwal Revanna Case) ಅವರನ್ನು ಕೊನೆಗೂ ಬಂಧಿಸಲಾಗಿದೆ. ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಬಂಧಿಸಿದ ಪೊಲೀಸರು ಬೆಂಗಳೂರಿನ (Bengaluru) 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಇದೇ ವೇಳೆ ಪ್ರಜ್ವಲ್‌ ರೇವಣ್ಣ ಅವರು ನ್ಯಾಯಾಧೀಶರ ಎದುರು ಅಳಲು ತೋಡಿಕೊಂಡಿದ್ದಾರೆ. “ನಾನು ಎಸ್‌ಐಟಿ ಕಸ್ಟಡಿಯಲ್ಲಿದ್ದೇನೆ. ಆದರೆ, ರೂಮ್‌ ಮತ್ತು ಟಾಯ್ಲೆಟ್‌ ಕ್ಲೀನ್‌ ಆಗಿ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ವಿಚಾರಣೆಯ ಆರಂಭದಲ್ಲಿಯೇ ಪ್ರಜ್ವಲ್‌ ರೇವಣ್ಣಗೆ ಕೋರ್ಟ್‌ ಜಡ್ಜ್‌ ನಿಮ್ಮ ಹೆಸರೇನು ಎಂದು ಕೇಳಿದರು. ಹಾಗೆಯೇ, ಯಾವಾಗ ಬಂಧಿಸಿದರು? ಎಲ್ಲಿ ಬಂಧಿಸಿದರು ಎಂಬುದಾಗಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪ್ರಜ್ವಲ್.‌ “ಎಸ್‌ಐಟಿ ವಶದಲ್ಲಿದ್ದೇನೆ. ರೂಮ್‌ ಸರಿಯಾಗಿಲ್ಲ, ಟಾಯ್ಲೆಟ್‌ ಸರಿಯಾಗಿಲ್ಲ. ಕೋಣೆ ಕ್ಲೀನ್‌ ಇಲ್ಲ” ಎಂದು ತಿಳಿಸಿದರು. ಆಗ ನ್ಯಾಯಾಧೀಶರು, “ಎಸ್‌ಐಟಿಯವರು ಕಿರುಕುಳ ಕೊಟ್ರಾ” ಎಂದು ಪ್ರಶ್ನಿಸಿದರು. ಅದಕ್ಕೆ ಪ್ರಜ್ವಲ್‌, “ಕಿರುಕುಳ ಕೊಟ್ಟಿಲ್ಲ. ರೂಮ್‌ ಕ್ಲೀನ್‌ ಇಲ್ಲ, ಟಾಯ್ಲೆಟ್‌ ಸ್ವಚ್ಛವಾಗಿಲ್ಲ” ಎಂದರು.

ಅನ್ನ-ಸಾಂಬಾರ್‌ ಸೇವಿಸಿದ ಸಂಸದ

42ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ಪ್ರಜ್ವಲ್‌ ರೇವಣ್ಣ ಅನ್ನ-ಸಾಂಬಾರ್‌ ಸೇವಿಸಿದರು. ಎಸ್‌ಐಟಿ ಅಧಿಕಾರಿಗಳು ನೀಡಿದ ಅನ್ನ-ಸಾಂಬಾರ್‌ ಮಾತ್ರ ಸೇವಿಸಿದ ಅವರು ವಿಚಾರಣೆಗೆ ಹಾಜರಾದರು. ಅಧಿಕಾರ, ಅಂತಸ್ತು, ಸಂಸತ್‌ ಸದಸ್ಯ ಎಂಬ ಜಂಭದಲ್ಲಿ ತಿರುಗಾಡುತ್ತಿದ್ದ ಸಂಸದ ಪ್ರಜ್ವಲ್‌ ರೇವಣ್ಣ ಅವರು ನ್ಯಾಯಾಧೀಶರ ಎದುರು ಮಂಕಾಗಿ ನಿಂತಿದ್ದರು. ವಾದ-ಪ್ರತಿವಾದ ಮುಗಿಯುವರೆಗೂ ಅವರು ಸಪ್ಪೆಯಾಗಿದ್ದರು. ಕೋರ್ಟ್‌ ಆದೇಶ ಏನಿರುತ್ತದೆಯೋ ಎಂಬ ದುಗುಡ ಅವರಲ್ಲಿತ್ತು ಎಂದು ತಿಳಿದುಬಂದಿದೆ.

ವಾದ-ಪ್ರತಿವಾದ ಹೀಗಿತ್ತು

“ಸಂತ್ರಸ್ತೆಯರ ಮೇಲೆ ಪ್ರಜ್ವಲ್‌ ರೇವಣ್ಣ ಬಲ ಪ್ರಯೋಗ ಮಾಡಿದ್ದಾರೆ. ಸಂತ್ರಸ್ತೆಯರನ್ನು ಹೆದರಿಸಿ, ಬೆದರಿಸಿ ಕಿರುಕುಳ ನೀಡಿದ್ದಾರೆ. ಬಟ್ಟೆ ಬಿಚ್ಚಿಸುವುದಕ್ಕೂ ಬಲವಂತ ಮಾಡುವುದಕ್ಕೂ ವ್ಯತ್ಯಾಸ ಇರುತ್ತದೆ. ಯಾವುದೇ ವಿಡಿಯೊಗಳಲ್ಲೂ ಮುಖ ಕಾಣದಂತೆ ರೆಕಾರ್ಡ್ ಮಾಡಲಾಗಿದೆ. ಆದರೆ, ಅವರು ಪ್ರಜ್ವಲ್‌ ಎಂಬುದಕ್ಕೆ ಸಾಕ್ಷ್ಯಗಳಿವೆ. ಇದರಿಂದಾಗಿ ಪ್ರಜ್ವಲ್‌ ರೇವಣ್ಣ ಅವರನ್ನು ವಿಚಾರಣೆ ನಡೆಸುವ ಅವಶ್ಯಕತೆ ಇದೆ. ಹಾಗಾಗಿ, ಅವರನ್ನು 15 ದಿನ ಎಸ್‌ಐಟಿ ಕಸ್ಟಡಿಗೆ ವಹಿಸಬೇಕು” ಎಂದು ಅಶೋಕ್‌ ನಾಯ್ಕ್‌ ಹೇಳಿದರು.

ಪ್ರಜ್ವಲ್‌ ಪರ ವಕೀಲ ಆಕ್ಷೇಪ

“ಎಸ್‌ಐಟಿ ಕಸ್ಟಡಿಗೆ ಕೇಳಿದ್ದಕ್ಕೆ ಪ್ರಜ್ವಲ್‌ ರೇವಣ್ಣ ಪರ ವಕೀಲ ಅರುಣ್‌ ಆಕ್ಷೇಪ ವ್ಯಕ್ತಪಡಿಸಿದರು. ಏಪ್ರಿಲ್ 28ರಿಂದ ಮೇ 2ರವರೆಗೂ ಅತ್ಯಾಚಾರ ಅಂತ ಆರೋಪ ಇಲ್ಲ. ಪೊಲೀಸರು ತಮಗೆ ಇಷ್ಟ ಬಂದ ರೀತಿ ಪದಗಳನ್ನು ಬಳಸಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಕೇವಲ CrPC 161 ಅಡಿ ಹೇಳಿಕೆ ಆಧರಿಸಿ ಅತ್ಯಾಚಾರ ಆರೋಪ ಕೇಸ್ ದಾಖಲಿಸಲಾಗಿದೆ. ಬೆಂಗಳೂರಿನಲ್ಲಿ ದೂರು ರೆಡಿ ಮಾಡಿಕೊಂಡು ಹೊಳೆನರಸೀಪುರದಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. 15 ದಿನ ಅಲ್ಲ, ಒಂದು ದಿನ ಕಸ್ಟಡಿಗೆ ನೀಡಿದರೆ ಸಾಕು” ಎಂದರು.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ಗೆ ಎಸ್‌ಐಟಿ ಕಸ್ಟಡಿ ಖಚಿತ; ಆರೋಪಿ ಪರ-ವಿರೋಧ ವಾದ ಹೀಗಿತ್ತು

Exit mobile version