Site icon Vistara News

Supreme Court: ಡಿ ರೂಪಾ ವಿರುದ್ಧದ ಮಾನನಷ್ಟ ಕೇಸ್‌ಗೆ ಸುಪ್ರೀಂ ಕೋರ್ಟ್ ತಡೆ

Roopa vs Sinduri, Supreme Court stays defamation case against D Rupa

ನವದೆಹಲಿ: ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ (IAS Officer Rohini Sindhuri) ವಿರುದ್ಧ ಮಾಡಲಾದ ಎಲ್ಲ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳನ್ನು (Social Media post Delete) ಡಿಲಿಟ್ ಮಾಡುವುದಾಗಿ ಐಪಿಎಸ್ ಅಧಿಕಾರಿ ಡಿ ರೂಪಾ (IPS Officer D Roopa) ಅವರು ಸುಪ್ರೀಂ ಕೋರ್ಟ್‌(Supreme Court)ಗೆ ಅಫಿಡವಿಟ್ ಸಲ್ಲಿಸಿದ ಬೆನ್ನಲ್ಲೇ, ಅವರ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ (Criminal Defamation Case) ಪ್ರಕ್ರಿಯೆಗಳಿಗೆ ತಡೆ ನೀಡಿದೆ.

ಅಭಯ್ ಎಸ್ ಓಕಾ ಮತ್ತು ಪಂಕಜ್ ಮಿತ್ತಲ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು, ಸೋಷಿಯಲ್ ಮೀಡಿಯಾ ಪೋಸ್ಟ್‌ಗಳನ್ನು ಡಿಲಿಟ್ ಮಾಡುವ ರೂಪಾ ಅವರ ಹೇಳಿಕೆಯನ್ನು ಪರಿಗಣಿಸಿತು. ಅಲ್ಲದೇ, ಇಬ್ಬರು ಹಿರಿಯ ಅಧಿಕಾರಿಗಳು ಸೋಷಿಯಲ್ ಮೀಡಿಯಾ ಮತ್ತು ಮಾಧ್ಯಮಗಳ ಮುಂದೆ ಮಾತನಾಡದಂತೆ ನಿರ್ಬಂಧ ವಿಧಿಸಿತು.

ಒಂದು ವೇಳೆ ಯಾವುದೇ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳನ್ನು ಡಿಲಿಟ್ ಮಾಡಿಲ್ಲ ಎಂದಾದರೆ ಈ ಕುರಿತು ಅರ್ಜಿದಾರರ ವಕೀಲರಿಗೆ ಮಾಹಿತಿ ನೀಡಲಾಗುವುದು ಎಂದು ರೋಹಿಣಿ ಸಿಂಧೂರಿ ಅವರ ಪರ ವಕೀಲರು ಕೋರ್ಟ್ ಗಮನಕ್ಕೆ ತಂದರು. ಸಿಂಧೂರಿ ಅವರು ಸಲ್ಲಿಸಿರುವ ವಿಚಾರಣೆಯ ಪ್ರತಿಗಳನ್ನು ದಾಖಲೆಯಲ್ಲಿ ಇರಿಸುವಂತೆ ಪೀಠವು ಸೂಚಿಸಿದೆ.

ಅಲ್ಲದೇ, ಬಾಕಿ ಇರುವ ಸಿವಿಲ್ ಮೊಕದ್ದಮೆಯಲ್ಲಿ ರೂಪಾ ಅವರು ಸಲ್ಲಿಸಿದ ಅಫಿಡವಿಟ್ ಅನ್ನು ಸಲ್ಲಿಸಲು ಇದು ಅವಕಾಶ ಮಾಡಿಕೊಟ್ಟಿತು. ಈ ಮಧ್ಯೆ, ಈ ಅರ್ಜಿಯ ಕ್ರಿಮಿನಲ್ ಪ್ರಕರಣದ ಪ್ರಕ್ರಿಯೆಗಳು ಮುಂದುವರಿಯುವುದಿಲ್ಲ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠವು ಹೇಳಿತು. ರೂಪಾ ಪರ ಹಿರಿಯ ವಕೀಲ ಆದಿತ್ಯ ಸೋಂಧಿ ವಾದ ಮಂಡಿಸಿದರೆ, ಸಿಂಧೂರಿ ಪರ ಹಿರಿಯ ವಕೀಲ ವಿನಯ್ ನವಾರೆ ವಾದ ಮಂಡಿಸಿದ್ದರು. ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಜನವರಿ 12ಕ್ಕೆ ಮುಂದೂಡಿತು.

ಇದಕ್ಕೂ ಮೊದಲು ಸುಪ್ರೀಂ ಕೋರ್ಟ್, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸೋಷಿಯಲ್ ಮೀಡಿಯಾಗಳಲ್ಲಿ ಮಾಡಲಾದ ಎಲ್ಲ ಪೋಸ್ಟ್‌ಗಳನ್ನು 24 ಗಂಟೆಯೊಗೇ ಡಿಲಿಟ್ ಮಾಡುವಂತೆ ಡಿ ರೂಪಾ ಅವರಿಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಇದಾದ ಬಳಿಕ, ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದ ರೂಪಾ ಅವರು, ನ್ಯಾಯಾಲಯದ ಸೂಚನೆಯಂತೆ ಪೋಸ್ಟ್‌ಗಳನ್ನು ಡಿಲಿಟ್ ಮಾಡುವುದಾಗಿ ಹೇಳಿತ್ತು. ಈ ಮೊದಲು ಡಿ ರೂಪಾ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಕೇಸ್‌ಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ಕೂಡ ನಿರಾಕರಿಸಿತ್ತು.

ಏನಿದು ರೂಪಾ-ರೋಹಿಣಿ ಜಗಳ?

ಕಳೆದ ಫೆಬ್ರವರಿಯಲ್ಲಿ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ ರೂಪಾ ನಡುವಿನ ಜಗಳ ತಾರಕ್ಕೇರಿತು. ರೋಹಿಣಿ ವಿರುದ್ಧ ವೈಯಕ್ತಿಕ ಆರೋಪಗಳನ್ನು ಮಾಡಿದ್ದ ಡಿ ರೂಪಾ ಅವರು ಸೋಷಿಯಲ್ ಮೀಡಿಯಾದಲ್ಲಿ ಅವರ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿರುವ ಪೋಸ್ಟ್ ಷೇರ್ ಮಾಡಿದ್ದರು. ಅಲ್ಲದೇ, ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಇದು ಇಬ್ಬರ ನಡುವಿನ ಜಗಳ ಬೀದಿಗೆ ಬರುವಂತೆ ಮಾಡಿತ್ತು. ಅಲ್ಲದೇ, ಸಾಕಷ್ಟು ವಾದ ವಿವಾದಕ್ಕೆ ಕಾರಣವಾಗಿತ್ತು. ಬಳಿಕ, ಐಎಎಸ್ ಅಧಿಕಾರಿ ರೋಹಿಣಿ ಅವರು, ಡಿ ರೂಪಾ ಅವರು ಸೋಷಿಯಲ್ ಮೀಡಿಯಾದಲ್ಲಿ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡಿದ್ದಾರೆ. ಮಾಧ್ಯಮಗಳಲ್ಲೂ ಅವಮಾನಕರ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಿದ್ದರು. ರೂಪಾ ವಿರುದ್ದ 1 ಕೋಟಿ ರೂ. ಕ್ರಿಮಿನಲ್ ಮಾನಹಾನಿ ಕೇಸ್ ದಾಖಲಿಸಿದ್ದರು.

ಈ ಸುದ್ದಿಯನ್ನೂ ಓದಿ: Rohini Sindhuri : 6 ತಿಂಗಳ ಬಳಿಕ ರೋಹಿಣಿ ಸಿಂಧೂರಿಗೆ ಮತ್ತೆ ಸಿಕ್ತು ಹುದ್ದೆ ; ಅವರೀಗ Chief Editor! ರೂಪಾ IPSಗೆ ಇಲ್ವಾ?

Exit mobile version