ತುಮಕೂರು: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ನ ಬರ್ಬರ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಬಳಿಯ ಕುಣಿಗಲ್- ಮದ್ದೂರು ಬೈ ಪಾಸ್‌ನಲ್ಲಿ ಶನಿವಾರ ರಾತ್ರಿ ನಡೆದಿದೆ. ಕೇವಲ ಮೂರು ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ರೌಡಿಶೀಟರ್‌ನನ್ನು ದುಷ್ಕರ್ಮಿಗಳು ಹತ್ಯೆ (Murder Case) ಮಾಡಿದ್ದಾರೆ.
ಸುರೇಶ್ @ ಕ್ಯಾಪ್ಟನ್ ಸೂರಿ (40) ಕೊಲೆಯಾದ ರೌಡಿಶೀಟರ್. ಹುಲಿಯೂರುದುರ್ಗ ಬಳಿಯ ಕಂಪ್ಲಾಪುರದಲ್ಲಿ ವಾಸವಿದ್ದ ಸುರೇಶ್, ಬೆಂಗಳೂರಿನ ಹನುಮಂತನಗರ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದ ಎನ್ನಲಾಗಿದೆ. ಈತ ಕೇವಲ ಮೂರು ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ.
ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಹುಲಿಯೂರುದುರ್ಗ ಬೈಪಾಸ್ ಬಳಿ ಕಾರಿನಲ್ಲಿ ತೆರಳುತ್ತಿದ್ದಾಗ, ದುಷ್ಕರ್ಮಿಗಳು ಕಾರಿನ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಸೂರಿ ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಇದನ್ನೂ ಓದಿ | Skeletons Found: ರೆಡ್ಡಿ ಸಂಪ್ರದಾಯದಂತೆ 5 ಅಸ್ಥಿ ಪಂಜರಗಳ ಅಂತ್ಯ ಸಂಸ್ಕಾರ
ಸ್ಥಳಕ್ಕೆ ಹುಲಿಯೂರುದುರ್ಗ ಪೊಲೀಸರು ಹಾಗೂ ಎಸ್.ಪಿ ಅಶೋಕ್, ಎಎಸ್‌ಪಿ ಮರಿಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಾಪತ್ತೆಯಾದ ಆರೋಪಿಗಳಿಗೆ ಹುಡುಕಾಟ ಆರಂಭಿಸಿದ್ದಾರೆ. ಮೃತದೇಹವನ್ನು ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನಲ್ಲಿ ಡ್ರಗ್ ಪೆಡ್ಲರ್ ಬಂಧನ
ಮಂಗಳೂರು: ಹೊಸ ವರ್ಷಾಚರಣೆ ಪಾರ್ಟಿಗಳಿಗೆ ಡ್ರಗ್ಸ್ ಸರಬರಾಜು ಮಾಡಲು ಯತ್ನಿಸುತ್ತಿದ್ದ ಪೆಡ್ಲರ್‌ನನ್ನು ಪೊಲೀಸರು ಬಂಧಿಸಿ, 5 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ ವಶಕ್ಕೆ ಪಡೆದಿದ್ದಾರೆ. ಉಳ್ಳಾಲ ನಿವಾಸಿ ಮಹಮ್ಮದ್ ರಮೀಜ್ (33) ಬಂಧಿತ ಆರೋಪಿ.
ಇದನ್ನೂ ಓದಿ | Wood Smuggling: ಸಂಸದ ಪ್ರತಾಪ್ ಸಿಂಹ ಸಹೋದರನ ಬಂಧನ; ಅರಣ್ಯದಲ್ಲಿ ಮರ ಕಳವು ಆರೋಪ
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಸರಬರಾಜು ಮಾಡಲು ಡ್ರಗ್ಸ್ ತಂದಿದ್ದ. ಮಂಗಳೂರು ಹೊರವಲಯದ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆ ಬಳಿ ಡಗ್ಸ್ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಈತನನ್ನು ಬಂಧಿಸಲಾಗಿದೆ.
ಹೊಲದಲ್ಲಿ ಹೂತ್ತಿಟ್ಟಿದ್ದ ಶವ ಪತ್ತೆ
ಚಿತ್ರದುರ್ಗ: ಜಿಲ್ಲೆಯ ಸಿದ್ದವ್ವನ ದುರ್ಗದ ಹೊಲದಲ್ಲಿ ಹೂತ್ತಿಟ್ಟಿದ್ದ ಶವ ಶನಿವಾರ ಪತ್ತೆಯಾಗಿದೆ. ಕೊಲೆ ಮಾಡಿ ಶವವನ್ನು ಜಮೀನಿನಲ್ಲಿ ಹೂತ್ತಿಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮೃತರನ್ನು ಮುದ್ದಾಪುರದ ಬಸವರಾಜಪ್ಪ (60) ಎಂದು ಗುರುತಿಸಲಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಬಸವರಾಜಪ್ಪ ಕಾಣೆಯಾಗಿದ್ದ. ತುರುವನೂರು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಆದರೆ, ಜಮೀನಿನಲ್ಲಿ ಹೂತಿಟ್ಟ ಶವವನ್ನು ಕಾಡು ಪ್ರಾಣಿಗಳು ಎಳೆದೊಯ್ದಿದ್ದರಿಂದ ಶನಿವಾರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ