Site icon Vistara News

Rowdysheeter Murder : ನಡುರಸ್ತೆಯಲ್ಲಿ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ ಮರ್ಡರ್‌

Rowdysheeter Mastigowda Murder

ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ರೌಡಿಶೀಟರ್‌ ಶೀಟರ್‌ (Rowdysheeter) ಒಬ್ಬನ ಬರ್ಬರ ಹತ್ಯೆಗೆ (Rowdysheeter Murder) ಸಾಕ್ಷಿಯಾಗಿದೆ. ಇಲ್ಲಿನ ರೌಡಿಯೊಬ್ಬನನ್ನು ತಂಡವೊಂದು ನಡುರಸ್ತೆಯಲ್ಲಿ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ.

ಹಾಸನ ಜಿಲ್ಲೆ, ಚನ್ನರಾಯಪಟ್ಟಣದ ಧನಲಕ್ಷ್ಮೀ ಚಿತ್ರಮಂದಿರದ (Dhanalaxmi Cinema theatre) ಮುಂಭಾಗದಲ್ಲಿ ನಡೆದ ಈ ಭೀಕರ ಘಟನೆಯಲ್ಲಿ ಕೊಲೆಯಾದ ರೌಡಿಶೀಟರ್‌ ಹಸರು ಮಾಸ್ತಿ ಗೌಡ (30). ಹಾಡಹಗಲೇ ನಡೆದ ಈ ಘಟನೆಯಿಂದ ಚನ್ನರಾಯಪಟ್ಟಣ ಜನತೆ ಬೆಚ್ಚಿಬಿದ್ದಿದ್ದಾರೆ.

ಮಾಸ್ತಿ ಗೌಡ ಚನ್ನರಾಯಪಟ್ಟಣ ಭಾಗದಲ್ಲಿ ರೌಡಿಯಾಗಿ ಕುಖ್ಯಾತಿಯನ್ನು ಪಡೆದಿದ್ದ. ಹಲವಾರು ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತನನ್ನು ನಿಯಂತ್ರಿಸಲು ಪೊಲೀಸರು ರೌಡಿ ಶೀಟ್‌ ತೆರೆದು ಕಾಲಕಾಲಕ್ಕೆ ಠಾಣೆಗೆ ಬಂದು ಸಹಿ ಹಾಕುವಂತೆ ಸೂಚಿಸಿದ್ದರು. ಪೊಲೀಸರು ಆತನನ್ನು ನಿಯಂತ್ರಿಸಲು ಯತ್ನಿಸಿದರೂ ಆತ ಹಿಂದೆ ಕಟ್ಟಿಕೊಂಡಿದ್ದ ದ್ವೇಷಗಳು, ಮಾಡಿದ ಕರಾಳ ಕೃತ್ಯಗಳು ಆತನನ್ನು ಬೆನ್ನಟ್ಟುತ್ತಲೇ ಇದ್ದವು ಅನಿಸುತ್ತದೆ. ಅದರ ಭಾಗವಾಗಿಯೇ ಈ ಕೊಲೆ ನಡೆದಿದೆ ಎನ್ನಲಾಗಿದೆ.

ಕೊಲೆ ನಡೆದ ಪರಿಸರದಲ್ಲಿ ಜನಸಂದಣಿ

ರೌಡಿ ಶೀಟರ್‌ ಮಾಸ್ತಿ ಗೌಡ ಚನ್ನರಾಯಪಟ್ಟಣದ ಧನಲಕ್ಷ್ಮೀ ಚಿತ್ರಮಂದಿರ ಪ್ರದೇಶದಲ್ಲಿದ್ದಾಗ ಇನ್ನೋವಾ ಕಾರಿನಲ್ಲಿ ಬಂದ ನಾಲ್ಕೈದು ಯುವಕರು ಆತನನ್ನು ಬೆನ್ನಟ್ಟಿದ್ದಾರೆ. ರಸ್ತೆಯಲ್ಲಿ ಸಾಕಷ್ಟು ದೂರಕ್ಕೆ ಸಿನಿಮಾ ಶೈಲಿಯಲ್ಲಿ ಬೆನ್ನಟ್ಟಿದ ಈ ದುಷ್ಕರ್ಮಿಗಳು ಸಿನಿಮಾ ಮಂದಿರದ ಮುಂದೆ ಬಂದಾಗ ಕೆಳಗೆ ಬಿದ್ದ ಮಾಸ್ತಿ ಗೌಡನ ಮೇಲೆ ಬೇಕಾಬಿಟ್ಟಿ ಮಾರಕಾಸ್ತ್ರಗಳಿಂದ ಹೊಡೆಯಲಾಗಿದೆ. ಇದರಿಂದ ಮಾಸ್ತಿ ಗೌಡ ತೀವ್ರವಾಗಿ ಗಾಯಗೊಂಡಿದ್ದು, ಅಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟೂ ಅವಕಾಶ ಸಿಗಲಿಲ್ಲ.

ಮಾಸ್ತಿಗೌಡ ಚನ್ನರಾಯಪಟ್ಟಣ ತಾಲ್ಲೂಕಿನ, ಹೊನ್ನಮಾರನಹಳ್ಳಿ ಗ್ರಾಮದವನು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಪೊಲೀಸರು ನಡುರಸ್ತೆಯಲ್ಲಿ ನಡೆದ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಸಿ ಟೀವಿ ಫೂಟೇಜ್‌ಗಳನ್ನು ಗಮನಿಸುತ್ತಿದ್ದಾರೆ. ಮಾಸ್ತಿ ಗೌಡನಿಗೆ ಇರಬಹುದಾದ ವೈರಿಗಳನ್ನು ಗುರುತಿಸುವ ಕೆಲಸವೂ ನಡೆದಿದೆ. ಈಗಾಗಲೇ ಪೊಲೀಸರಿಗೆ ಕೆಲವರ ಮೇಲೆ ಸಂಶಯ ಬಂದಿದೆ. ಅವರನ್ನು ವಿಚಾರಣೆಗೆ ಕರೆದು ತಂದು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೊಲೆ ನಡೆದ ಪ್ರದೇಶ

ಮಾಸ್ತಿ ಗೌಡನನ್ನು ದುಷ್ಕರ್ಮಿಗಳು ನೂರಾರು ಜನರ ನಡುವೆಯೇ ಅಟ್ಟಾಡಿಸಿಕೊಂಡು ಹೋಗಿದ್ದರಿಂದ ಸ್ಥಳದಲ್ಲಿ ಭಾರಿ ಆತಂಕ ಸೃಷ್ಟಿಯಾಗಿತ್ತು. ಕೊಲೆಯಾದ ಪರಿಸರದಲ್ಲಿ ಸಾವಿರಾರು ಜನರು ಸೇರಿದ್ದರು. ಪೊಲೀಸರು ರಸ್ತೆ ಬಂದ್‌ ನಡೆಸಿ ಮಹಜರು ನಡೆಸಿದರು. ಈ ಘಟನೆಯ ಬಳಿಕ ನಗರದಾದ್ಯಂತ ನಾಕಾಬಂದಿ ಮಾಡಿ ದುಷ್ಕರ್ಮಿಗಳು ಪಟ್ಟಣ ಬಿಟ್ಟು ಹೊರಗೆ ಹೋಗುವುದನ್ನು ತಡೆಯಲು ಪ್ರಯತ್ನಿಸಲಾಗಿದೆ.

ಇದನ್ನೂ ಓದಿ: Murder Case : ಪ್ರೀತಿಸಿದ ಪತ್ನಿಯನ್ನೇ ಕೊಂದ ಗಂಡ; 45 ದಿನದ ಮಗುವನ್ನು ಹೆಣದ ಜತೆ ಬಿಟ್ಟು ಪರಾರಿ

Exit mobile version