Site icon Vistara News

Logistics Park: ಬೆಂಗಳೂರಲ್ಲಿ 1770 ಕೋಟಿ ವೆಚ್ಚದ ಮಲ್ಟಿ ಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್! NHLML ಜತೆ ಡೀಲ್

Logistics Park

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳ ಲಾಜಿಸ್ಟಿಕ್ಸ್ ಮ್ಯಾನೇಜ್ಮೆಂಟ್ ಲಿಮಿಟೆಡ್ (NHLML) ಎಂದು ಕರೆಯಲಾಗುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI)ದ ಘಟಕವು, ಬೆಂಗಳೂರಿನಲ್ಲಿ (Bengaluru) ಮಲ್ಟಿ-ಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್(multi-modal logistics park) ನಿರ್ಮಾಣಕ್ಕೆ ಸಂಬಂಧಿಸಿದಂತೆ 1,770 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪತ್ರಿಕಾ ಪ್ರಕಟಣೆ ತಿಳಿಸಿದೆ(ministry of road transport and highways).

ಬೆಂಗಳೂರು ಗ್ರಾಮೀಣ ಜಿಲ್ಲೆಯ ಮುದ್ದಲಿಂಗನಹಳ್ಳಿಯಲ್ಲಿ ಸುಾರು 4000 ಎಕರೆಯಲ್ಲಿ ಈ ಯೋಜನೆಯು ಜಾರಿಗೆ ಬರಲಿದೆ. ಪಿಎಂ ಗತಿ ಶಕ್ತಿ ನ್ಯಾಷನಲ್ ಮಾಸ್ಟರ್ ಪ್ಲ್ಯಾನ್ ಅಡಿ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಅತಿ ದೊಡ್ಡ ಪ್ರಾಜೆಕ್ಟ್ ಇದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಮಲ್ಟಿ ಮೋಡಲ್ ಲಾಜಿಸ್ಟಿಕ್ ಪಾರ್ಕ್ ಮುಂಬರುವ ಕೆಐಎಡಿಬಿ ಕೈಗಾರಿಕಾ ಪ್ರದೇಶಕ್ಕೆ ಸಮೀಪದಲ್ಲಿ ಸ್ಥಾಪನೆಯಾಗುವ ನಿರೀಕ್ಷೆಯಿದೆ. ರಾಷ್ಟ್ರೀಯ ಹೆದ್ದಾರಿ 648 ಮತ್ತು ಅದರ ಪೂರ್ವ ಮತ್ತು ಉತ್ತರ ಭಾಗಗಳಲ್ಲಿ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ಮತ್ತು ಬೆಂಗಳೂರು-ಹುಬ್ಬಳ್ಳಿಯನ್ನು ಸಂಪರ್ಕಿಸುವ ಮೂಲಕ ಬಹು ಮೋಡ್ ಸಾರಿಗೆಯನ್ನು ಸಂಯೋಜಿಸುತ್ತದೆ. -ಮುಂಬೈ ರೈಲು ಮಾರ್ಗವು ಅದರ ದಕ್ಷಿಣದಲ್ಲಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಎಖ್ಸ್ ವೇದಿಕೆಯಲ್ಲಿ ಮಾಹಿತಿ ನೀಡಿದ್ದಾರೆ. ಈ ಪಾರ್ಕ್, ವಿಮಾನ ನಿಲ್ದಾಣದಿಂದ 58 ಕಿಮೀ ಮತ್ತು ಬೆಂಗಳೂರು ಸಿಟಿ ರೈಲು ನಿಲ್ದಾಣದಿಂದ 48 ಕಿಮೀ ದೂರದಲ್ಲಿ ಇರಲಿದೆ.

ಈ ಸುದ್ದಿಯನ್ನೂ ಓದಿ: Invest Karnataka 2022 | ವೆಲ್ಸ್‌ಪನ್‌ ಒನ್‌ ಲಾಜಿಸ್ಟಿಕ್ಸ್‌ನಿಂದ ರಾಜ್ಯದಲ್ಲಿ 2,000 ಕೋಟಿ ರೂ. ಹೂಡಿಕೆ

ಈ ಪಾರ್ಕ್ ಅನ್ನು ಮೂರು ಹಂತದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಮೊದಲನೇ ಹಂತದ ಪಾರ್ಕ್ ನಿರ್ಮಾಣವು ಮುಂದಿನ 2 ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಇದು ಕನ್ಸೆಷನ್ ಪಿರಿಯಡ್‌ 45 ವರ್ಷ ಪೂರೈಸುವ ಹೊತ್ತಿಗೆ 30 ಮಿಲಿಯನ್ ಮೆಟ್ರಿಕ್ ಟನ್ ಕಾರ್ಗೊ ನಿರ್ವಹಣೆ ಮಾಡಲಿದೆ. ಸಹಜವಾಗಿಯೇ ಇದರಿಂದ ಬೆಂಗಳೂರು ಮತ್ತ ತುಮಕೂರುಗಳಂಥ ಕೈಗಾರಿಕಾ ಪ್ರದೇಶಗಳಿಗೆ ಭಾರೀ ಲಾಭವಾಗಲಿದೆ.

ಎಂಎಂಲ್‌ಪಿಯ ಅಭಿವೃದ್ಧಿಯು ಒಟ್ಟಾರೆ ಸರಕು ವೆಚ್ಚಗಳು ಮತ್ತು ಸಮಯವನ್ನು ಕಡಿಮೆ ಮಾಡಲು ಸಮರ್ಥ ಅಂತತ್-ಮಾದರಿ ಸರಕು ಸಾಗಣೆಯನ್ನು ಸಕ್ರಿಯಗೊಳಿಸುವ ಮೂಲಕ ದೇಶದ ಸರಕು ಸಾಗಣೆ ವಲಯವನ್ನು ಸುಧಾರಿಸಲು ಭಾರತ ಸರ್ಕಾರದ ಪ್ರಮುಖ ಉಪಕ್ರಮವಾಗಿದೆ. ಅತ್ಯುತ್ತಮ ಉಗ್ರಾಣವನ್ನು ಒದಗಿಸಲು, ಸರಕುಗಳ ಟ್ರ್ಯಾಕಿಂಗ್ ಮತ್ತು ಪತ್ತೆಹಚ್ಚುವಿಕೆಯು ಸುಧಾರಿಸಲಿದೆ. ಇದರಿಂದಾಗಿ ಭಾರತೀಯ ಲಾಜಿಸ್ಟಿಕ್ಸ್ ವಲಯದ ದಕ್ಷತೆಯು ಹೆಚ್ಚಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version