ಬೆಂಗಳೂರು: ಇ- ಕಾಮರ್ಸ್ ವಲಯಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ (e commerce workers) ರಾಜ್ಯ ಸರ್ಕಾರ (Karnataka Government) ಗಿಫ್ಟ್ ನೀಡಿದೆ. ಗಿಗ್ ಕಾರ್ಮಿಕರಿಗೆ ತಲಾ ಎರಡು ಲಕ್ಷ ರೂಪಾಯಿಯ ಅಪಘಾತ ವಿಮೆ ಮತ್ತು ಜೀವ ವಿಮೆ (Accident Insurance and Life Insurance) ನೀಡುವ ಸಂಬಂಧ ಮಹತ್ವದ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಇದರಿಂದ ಅಮೆಜಾನ್, ಫ್ಲಿಪ್ ಕಾರ್ಟ್, ಸ್ವಿಗ್ಗಿ, ಬಿಗ್ ಬಾಸ್ಕೆಟ್‌ನಂತಹ (Amazon, Flipkart, Swiggy, BigBasket) ಕ್ಷೇತ್ರಗಳಲ್ಲಿ ಪೂರ್ಣಕಾಲಿಕ ಹಾಗೂ ಅರೆಕಾಲಿಕ ನೌಕರರಾಗಿ (Full time and part time employees) ಕಾರ್ಯನಿರ್ವಹಿಸುತ್ತಿರುವವರಿಗೆ ಈ ವಿಮಾ ಸೌಲಭ್ಯದ (Insurance Policy) ಆದೇಶ ಅನ್ವಯ ಆಗುತ್ತದೆ.
ಅಪಘಾತ ವಿಮೆಗೆ ಎರಡು ಲಕ್ಷ ರೂಪಾಯಿ ಹಾಗೂ ಜೀವ ವಿಮೆಗೆ ಎರಡು ಲಕ್ಷ ರೂಪಾಯಿಯಂತೆ ಒಟ್ಟು ನಾಲ್ಕು ಲಕ್ಷ ರೂಪಾಯಿ ಜೀವ ವಿಮೆ ಸೌಲಭ್ಯ ನೀಡಿ ಕಾರ್ಮಿಕ ಇಲಾಖೆ ಆದೇಶವನ್ನು ಹೊರಡಿಸಿದೆ. ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ (Labour Minister Santosh Lad) ಅವರಿಂದ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಗಿಗ್ ಕಾರ್ಮಿಕರಿಗೆ ಸರ್ಕಾರ ಜೀವ ಮಿಮೆಯನ್ನು ಜಾರಿ ಮಾಡುತ್ತಿದೆ ಎಂಬ ವಿಷಯವನ್ನು ವಿಸ್ತಾರ ನ್ಯೂಸ್ ಬ್ರೇಕ್ ಮಾಡಿತ್ತು.
ಇದನ್ನೂ ಓದಿ: Karnataka Politics : ಜೆಡಿಎಸ್‌ಗೆ ʼಕಮಲದಳʼ ಎಂದು ಮರು ನಾಮಕರಣ ಮಾಡಿದ ಕಾಂಗ್ರೆಸ್; ಮೈತ್ರಿಗೆ ಕಿಡಿ!
2.30 ಲಕ್ಷ ನೌಕರರಿಗೆ ಈ ಯೋಜನೆ ಫಲ
ಅಮೆಜಾನ್, ಫ್ಲಿಪ್ ಕಾರ್ಟ್, ಸ್ವಿಗ್ಗಿ, ಬಿಗ್ ಬಾಸ್ಕೆಟ್ ಕ್ಷೇತ್ರಗಳಲ್ಲಿ ಪೂರ್ಣಕಾಲಿಕ ಹಾಗೂ ಅರೆಕಾಲಿಕ ನೌಕರರಾಗಿ ಸುಮಾರು 2.30 ಲಕ್ಷ ನೌಕರರು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಈ ಕಾರ್ಮಿಕರು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿದ್ದು, ಕಾರ್ಮಿಕ ಕಾನೂನುಗಳಡಿ ನಿಗದಿಪಡಿಸಿರುವ ಸಾಮಾಜಿಕ ಭದ್ರತಾ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇಂತಹ ಅಸಂಘಟಿತ ಕಾರ್ಮಿಕರಿಗಾಗಿ 2008ರಲ್ಲಿ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆಯು ರಚಿತವಾಗಿದ್ದು, ಈ ಕಾಯ್ದೆಗೆ 2009ರಲ್ಲಿ ಕರ್ನಾಟಕ ನಿಯಮಗಳು ರೂಪಿತವಾಗಿದೆ. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ಕಾರ್ಯರೂಪಗೊಂಡಿರುತ್ತದೆ. ಗಿಗ್ ಕಾರ್ಮಿಕರು ಸರಕು/ಸೇವೆಗಳನ್ನು ನಿಗದಿತ ಸಮಯಕ್ಕೆ ಸರಿಯಾಗಿ ವಾಹನಗಳಲ್ಲಿ ವಿತರಿಸುತ್ತಿದ್ದು, ಅಂತಹ ಸಂದರ್ಭದಲ್ಲಿ ಅಪಘಾತಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಪಘಾತದಿಂದ ಮರಣ/ಸಂಪೂರ್ಣ ಶಾಶ್ವತ ದುರ್ಬಲತೆ ಹೊಂದಿದ್ದಲ್ಲಿ ಅವರು ಹಾಗೂ ಅವರ ಅವಲಂಬಿತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ ಎಂಬ ಕಾರಣಕ್ಕೆ ಈ ಆದೇಶವನ್ನು ನೀಡಿದ್ದಾಗಿ ರಾಜ್ಯ ಸರ್ಕಾರ ಆದೇಶದಲ್ಲಿ ಉಲ್ಲೇಖಿಸಿದೆ.
ಯೋಜನೆಯ ವ್ಯಾಪ್ತಿ?
ಇದು ಜೀವ ವಿಮೆ/ಅಪಘಾತ ವಿಮೆ ಅಥವಾ ಎರಡೂ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ಈ ಯೋಜನೆಯು ಕರ್ನಾಟಕ ರಾಜ್ಯಾದ್ಯಂತ ಎಲ್ಲ ಪ್ರದೇಶಗಳಿಗೂ ಅನ್ವಯಿಸುತ್ತದೆ. ಈ ಯೋಜನೆಯು ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ಅಧಿಕೃತ ಗೆಜೆಟ್‌ನಲ್ಲಿ ಪುಕಟಿಸಿದ ದಿನಾಂಕದಿಂದ ಜಾರಿಗೆ ಬರುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ನೋಂದಣಿ ಪ್ರಕ್ರಿಯೆ ಹೇಗೆ?
ಗಿಗ್ ಕಾರ್ಮಿಕರು ನೋಂದಣಿ ಮಾಡಿಸಿಕೊಳ್ಳಲು ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸಿದೆ. ಅಲ್ಲದೆ, ನೋಂದಣಿಯನ್ನು ಯಾರು ಮಾಡಿಕೊಳ್ಳಬಹುದು? ಅವರ ಆದಾಯ ಎಷ್ಟು ಇರಬೇಕು? ಎಲ್ಲಿ ಮಾಡಿಕೊಳ್ಳಬಹುದು ಎಂಬ ಮಾಹಿತಿಯನ್ನು ನೀಡಲಾಗಿದೆ.
- . ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರು ಯೋಜನೆಯ ಸೌಲಭ್ಯಕ್ಕೆ ಅರ್ಹರು.
- ಅರ್ಜಿದಾರರು 18 ರಿಂದ 60 ವರ್ಷದವರಾಗಿರಬೇಕು.
- ಆದಾಯ ತೆರಿಗೆ ಪಾವತಿದಾರರಾಗಿರಬಾರದು.
- ಇ.ಎಸ್.ಐ ಮತ್ತು ಇ.ಪಿ.ಎಫ್ ಸೌಲಭ್ಯ ಹೊಂದಿರಬಾರದು.
- ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರು ರಾಜ್ಯ ಸರ್ಕಾರದ ಸೇವಾಸಿಂಧು ಪೋರ್ಟಲ್‌ನಲ್ಲಿ ಅಗತ್ಯ ದಾಖಲೆಗಳೊಂದಿಗೆ ನೇರವಾಗಿ ಅರ್ಜಿ ಸಲ್ಲಿಸಿ ಗುರುತಿನ ಚೀಟಿ ಪಡೆಯುವುದು.
- ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ ನೋಂದಣಿಯು ಶಾಶ್ವತವಾಗಿ ಮಾನ್ಯವಾಗಿರುತ್ತದೆ.
ಇದನ್ನೂ ಓದಿ: Prajwal Revanna: ಪ್ರಜ್ವಲ್ ರೇವಣ್ಣಗೆ ಬಿಗ್ ಟ್ರಬಲ್; ಅನರ್ಹತೆ ಆದೇಶಕ್ಕೆ ತಡೆ ಕೊಡಲು ಹೈಕೋರ್ಟ್ ನಕಾರ
ನೋಂದಣಿಗಾಗಿ ಬೇಕಿರುವ ದಾಖಲೆಗಳು ಏನು?
- ಗಿಗ್ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ಕುರಿತು ನಿಗದಿತ ನಮೂನೆಯಲ್ಲಿ ಉದ್ಯೋಗದಾತರಿಂದ ಪಡೆದ ಉದ್ಯೋಗ ಪಮಾಣ ಪತ್ರ/ ಗುರುತಿನ ಚೀಟಿ
- ಆಧಾರ್ ಸಂಖ್ಯೆ
- ಇ-ಶ್ರಮ್ ಗುರುತಿನ ಚೀಟಿ ಸಂಖ್ಯೆ
- ಪಾಸ್‌ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ
- ವಿಳಾಸ ಪುರಾವೆಗಾಗಿ ಯಾವುದಾದರೂ ದಾಖಲೆ (ಮತದಾರರ ಗುರುತಿನ ಚೀಟಿ/ಚಾಲನಾ ಪರವಾನಗಿ/ಆಧಾರ್/ಪಾಸ್‌ಪೋರ್ಟ್/ಬ್ಯಾಂಕ್ ಪಾಸ್ ಬುಕ್ ಇತ್ಯಾದಿ