ಮಂಗಳೂರು: ದೇಶದ್ರೋಹಿ, ನಪುಂಸಕ ಅಂತ ಹೇಳೋಕೆ ಅರ್ಥ ಬೇಕಲ್ಲ? ನಾಲಗೆ ಇದೆ ಅಂತ ಒಟ್ಟಾರೆ ಹೇಳಿಕೊಂಡು ಹೋದ್ರೆ ಆಗುತ್ತಾ? ಒಂದು ಕಡೆ ನಾವು ಗಲಾಟೆ ಮಾಡ್ತೀವಿ ಅಂತಾರೆ, ಮತ್ತೊಂದೆಡೆ ನಪುಂಸಕ ಅಂತಾರೆ. ಹೀಗೆ ಆರ್‌ಎಸ್‌ಎಸ್ ವಿರುದ್ದ ಕಾಂಗ್ರೆಸ್ ಹೇಳಿಕೆಯನ್ನು ಆರ್‌ಎಸ್‌ಎಸ್ ಮುಖಂಡ ಕಲ್ಕಡ್ಕ ಪ್ರಭಾಕರ ಭಟ್ ಖಂಡಿಸಿದ್ದಾರೆ.
ದೇಶದ ಕೆಲಸ ಮಾಡುತ್ತ ದಿನನಿತ್ಯ ಭಾರತ್ ಮಾತಾ ಕೀ ಜೈ ಹೇಳುವವರು ನಾವು ಮಾತ್ರ. ಇವರೆಲ್ಲಾ ಈಗ ಎಲ್ಲಿ ಭಾರತ್ ಮಾತಾ ಕೀ ಜೈ ಹೇಳುತ್ತಾರೆ? ಇಟಲಿಯಿಂದ ಬಂದವರಿಗೋ ಅಥವಾ ಇನ್ಯಾರಿಗೋ ಜೈ ಹೇಳುತ್ತಾರೆ.
ಇದನ್ನೂ ಓದಿ | ಆರ್‌ಎಸ್‌ಎಸ್ ವಿರೋಧಿಗಳು ತುಂಡಾಸುರರು ಎಂದು ಬಣ್ಣಿಸಿದ ವಸಂತಕುಮಾರ್
ಭಾರತ್ ಮಾತಾ ಕೀ ಜೈ ಹೇಳುವವರು ಯಾರು? ಅದು ನಾವು ಮಾತ್ರ. ಇಟಲಿಯ ಹೆಂಗಸಿನ ಪಾದಪೂಜೆ ಮಾಡಿ ಅದರ ನೀರನ್ನ ತೀರ್ಥ ಎಂದು ಕುಡಿತಾರಲ್ಲ? ಅಂಥದ್ದನ್ನ ಪೂಜೆ ಮಾಡೋರು ನಪುಂಸಕರಾ? ಅಥವಾ ದೇಶವನ್ನು ಪೂಜಿಸುವವರು ನಪುಂಸಕರ? ಎಂದರು.
ಆರ್‌ಎಸ್‌ಎಸ್, ವಿಎಚ್‌ಪಿ ದೇಶ ವಿಭಜನೆ ಮಾಡಿಲ್ಲ. ನೆಹರೂ, ಗಾಂಧೀಜಿ ಒಪ್ಪಿಗೆ ಕೊಟ್ಟು ದೇಶ ವಿಭಜನೆ ಆಗಿದ್ದು. ದೇಶ ವಿಭಜನೆ ಇವತ್ತು ನಮಗೆ ನಿತ್ಯ ಆತಂಕ ತಂದಿಟ್ಟಿದೆ. ಚೀನಾ ಆಕ್ರಮಣ ಮಾಡಿದಾಗ ನೆಹರೂ ಮಾತನಾಡಲಿಲ್ಲ, ಆಗ ಸಂಘದ ಹಿರಿಯರಾದ ಗುರೂಜಿ ಅವರು ಎಚ್ಚರಿಕೆ ಕೊಟ್ಟರು. ನೆಹರೂ, ಗಾಂಧೀಜಿ, ಇಂದಿರಾ ಬಗ್ಗೆ ಬಂದಾಗ ಅದನ್ನ ಓದಿದವರು ಕಾಂಗ್ರೆಸ್‌ಗೆ ಸೇರಿದರ? ಈವರೆಗಿನ ಪಠ್ಯದಲ್ಲಿ ಘೋರಿ ಮಹಮ್ಮದ್, ಘಜ್ನಿ ಮಹಮ್ಮದ್, ಬಾಬರ್ ಬಗ್ಗೆ ಇತ್ತು. ನೀವು ಏಸು, ಪೈಗಂಬರ್ ಕೊಡಿ, ಆದ್ರೆ ಮೊದಲು ರಾಮ, ಕೃಷ್ಣರ ಬಗ್ಗೆ ಕೊಡ ಬೇಕು ಅಲ್ವಾ? ಇವರೆಲ್ಲಾ ಭಾರತೀಯರೇ. ಯಾವುದೋ ಕಾರಣಕ್ಕೆ ಇಸ್ಲಾಂ ಪೂಜಿಸಿ ಅಲ್ಲಾನನ್ನ ಪ್ರಾರ್ಥಿಸ್ತಾರೆ. ಈ ಬಗ್ಗೆ ನಮ್ಮ ಯಾವುದೇ ಅಭಿಪ್ರಾಯ ವ್ಯತ್ಯಾಸಗಳು ಇಲ್ಲ ಎಂದರು.
ಇದನ್ನೂ ಓದಿ: ಭ್ರಷ್ಟರ, ಕ್ರಿಮಿನಲ್‌ಗಳ, ಉಗ್ರವಾದಿಗಳ ಪಾರ್ಟಿ ಕಾಂಗ್ರೆಸ್: ನಳೀನ್ ಕುಮಾರ್ ಕಟೀಲ್