Site icon Vistara News

Ram Mandir: ಅಯೋಧ್ಯೆಯಲ್ಲಿ ರಾಮನ ದರ್ಶನ ಪಡೆದು ಕೊನೆಯುಸಿರೆಳೆದ ಉಡುಪಿಯ ಭಕ್ತ

RSS Worker

ಉಡುಪಿ: ರಾಮ ಮಂದಿರ (Ram Mandir) ಉದ್ಘಾಟನೆಯಾದ ಬಳಿಕ ರಾಮನ ದರ್ಶನ ಪಡೆಯಲು ದೇಶದ ವಿವಿಧೆಡೆಯಿಂದ ಕೋಟ್ಯಂತರ ಭಕ್ತರು ಅಯೋಧ್ಯೆಗೆ ತೆರಳುತ್ತಿದ್ದಾರೆ. ಈ ನಡುವೆ ರಾಮಲಲ್ಲಾ ದರ್ಶನ ಪಡೆಯಲು ಉಡುಪಿಯಿಂದ ತೆರಳಿದ್ದ ಭಕ್ತರೊಬ್ಬರು, ರಾಮನ ದರ್ಶನ ಪಡೆದು ಕೊನೆಯುಸಿರೆಳೆದಿರುವ ಘಟನೆ ನಡೆದಿದೆ.

ಉಡುಪಿಯ ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತ ಪಾಂಡುರಂಗ ಶಾನುಭೋಗ್ ಮೃತರು. ರಾಮಲಲ್ಲಾನ ಮಂದಿರಕ್ಕೆ ಹೋಗಬೇಕೆಂದು ಅಯೋಧ್ಯೆಗೆ ತೆರಳಿದ್ದ ಇವರು, ಬೆಳಗ್ಗೆ ರಾಮಲಲ್ಲಾನಿಗೆ ಕೈಮುಗಿದು, ಪೇಜಾವರ ಶ್ರೀಗಳಿಂದ ಕಲಶಾಭಿಷೇಕದ ಪ್ರಸಾದ ಪಡೆದಿದ್ದರು. ಮಧ್ಯಾಹ್ನ ಪಲ್ಲಕ್ಕಿ ಉತ್ಸವಕ್ಕೆ ಆಗಮಿಸುವ ವೇಳೆ ಹೃದಯಘಾತ ಸಂಭವಿಸಿ ಪಾಂಡುರಂಗ ಶಾನುಭೋಗ್ ನಿಧನರಾಗಿದ್ದಾರೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಶಾನುಭಾಗ್‌ ಅವರು, ದೃಷ್ಟಿ ಇಲ್ಲದಿದ್ದರೂ ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದರು.

ಇದನ್ನೂ ಓದಿ | Physical Abuse : ಚರ್ಚ್‌ ಧರ್ಮಗುರು ವಿರುದ್ಧ ಎಫ್‌ಐಆರ್‌; ಪ್ರಾರ್ಥನೆಗೆ ಬಂದವಳ ಮೇಲೆ ಅತ್ಯಾಚಾರ

ಕಾರಲ್ಲಿ ಬಂದು ಕಾಲೇಜು ವಿದ್ಯಾರ್ಥಿನಿಯನ್ನು ಕಿಡ್ನ್ಯಾಪ್‌ ಮಾಡಿದ ಯುವಕರು!

ಹಾವೇರಿ: ಹಾವೇರಿಯಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಕಿಡ್ನ್ಯಾಪ್ (Kidnap Case) ಮಾಡಲಾಗಿದೆ. ಶನಿವಾರ ಬೆಳಗ್ಗೆ ಮನೆಯಿಂದ ಹೊರಟಿದ್ದ ವಿದ್ಯಾರ್ಥಿನಿಯನ್ನು ಯುವಕರ ಗುಂಪೊಂದು ಹಾವೇರಿಯ ದ್ಯಾಮವ್ವನ ಗುಡಿ ಸಮೀಪ ಕಿಡ್ನಾಪ್ ಮಾಡಿದೆ.

ವಿಜಯಲಕ್ಷ್ಮಿ ಒಬಣ್ಣನವರ ಎಂಬಾಕೆ ಕಿಡ್ನ್ಯಾಪ್‌ ಆದವಳು. ಕಾರಿನಲ್ಲಿ ಬಂದ ಯುವಕರ ಗುಂಪು ರಸ್ತೆ ಬದಿ ನಡೆದುಹೋಗುತ್ತಿದ್ದ ವಿಜಯಲಕ್ಷ್ಮೀಯನ್ನು ಕಿಡ್ನಾಪ್ ಮಾಡಿದ್ದಾರೆ. ವಿಷ್ಣು ಹೊನ್ನಪ್ಪ ತಗಡಿನಮನಿ ಎಂಬಾತ ತನ್ನಿಬ್ಬರು ಸ್ನೇಹಿತರ ಜತೆಗೆ ಸೇರಿಕೊಂಡು ಕಿಡ್ನ್ಯಾಪ್‌ ಮಾಡಿದ್ದ. ಕಿಡ್ನ್ಯಾಪ್‌ ಮಾಡಿ ಬ್ಯಾಡಗಿ ತಾಲೂಕಿನ ಮೊಟೇಬೆನ್ನೂರು ಸಮೀಪದ ಗೌಪ್ಯವಾದ ಸ್ಥಳದಲ್ಲಿ ಕೂಡಿಹಾಕಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಕಿಡ್ನ್ಯಾಪ್‌ ಆದ ಕೆಲವೇ ಗಂಟೆಯಲ್ಲಿ ಹಾವೇರಿ ಪೊಲೀಸರು ವಿಜಯಲಕ್ಷ್ಮಿಯನ್ನು ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: ಕುಡಿತದ ಚಟ ಸಹಿಸದೆ ಬೆಂಗಳೂರಿನಲ್ಲಿ ಮಗನನ್ನೇ ಕೊಂದ ತಂದೆ; ಇಲ್ಲಿದೆ ಒಂದು ಟ್ವಿಸ್ಟ್

ಈ ವಿಷ್ಟು ಕಳೆದೊಂದು ವರ್ಷದಿಂದ ವಿಜಯಲಕ್ಷ್ಮೀ ಹಿಂದೆ ಹೋಗುವುದು, ಮಾತಾಡಿಸುವುದು, ಚೂಡಾಯಿಸುವುದು ಮಾಡುತ್ತಿದ್ದ. ಈ ವಿಷಯವನ್ನು ವಿಜಯಲಕ್ಷ್ಮೀ ಮನೆಯಲ್ಲಿ ತಿಳಿಸಿದ್ದಳು. ಆಗ ಆರೋಪಿ ವಿಷ್ಟುವಿನ ತಂದೆಯ ಸಮ್ಮುಖದಲ್ಲಿ ಮಗಳ ತಂಟೆಗೆ ಬಾರದಂತೆ ವಾರ್ನಿಂಗ್‌ ಕೊಟ್ಟಿದ್ದರು. ಮಗನಿಗೆ ಸರಿಯಾಗಿ ಬುದ್ಧಿ ಕಲಿಸುವಂತೆ ಹೇಳಿದ್ದರು.

ಇಷ್ಟಾದರೂ ಸುಮ್ಮನೆ ಆಗದ ವಿಷ್ಟು ಮಾ.9ರ ಬೆಳಗ್ಗೆ 9:30ಕ್ಕೆ ವಿಜಯಲಕ್ಷ್ಮೀಯನ್ನು ಕಿಡ್ನಾಪ್‌ ಮಾಡಿದ್ದಾನೆ. ಯಾವಾಗ ಆಕೆಯ ತಂದೆ ದೂರು ನೀಡಿದ್ದರೂ, ಅರ್ಧದಾರಿಯಲ್ಲೇ ಬಿಟ್ಟು ಪರಾರಿ ಆಗಿದ್ದ. ನಂತರ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ವಿಜಯಲಕ್ಷ್ಮೀ ತಂದೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿ, ತನಿಖೆಯನ್ನು ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version