ರಾಯಚೂರು: ತಾಲೂಕಿನ ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ (ಆರ್ಟಿಪಿಎಸ್) ಮತ್ತೊಂದು ಅವಘಡ ಸಂಭವಿಸಿದೆ. ಕಟ್ಟಡ ದುರಸ್ತಿ ವೇಳೆ ಸುಮಾರು 50 ಮೀಟರ್ ಎತ್ತರದಿಂದ ಆಯತಪ್ಪಿ ಕೆಳಕ್ಕೆ ಬಿದ್ದು ಮೂವರು ಕಾರ್ಮಿಕರು ಗಂಭೀರವಾಗಿ (RTPS in Raichur) ಗಾಯಗೊಂಡಿದ್ದಾರೆ.
ಬಿಹಾರ ಮೂಲದ ಕಾರ್ಮಿಕರಾದ ಸೋನುಕುಮಾರ್(28), ಮಹಾದೇವ್(32), ರಾಮಪ್ರೀತ್(29) ಗಾಯಾಳುಗಳು. ಆರ್ಟಿಪಿಎಸ್ನ ಒಂದನೇ ಘಟಕದಲ್ಲಿ ಸ್ಕ್ರ್ಯಾಪ್ ಕಟ್ಟಿಂಗ್ ಕೆಲಸ ಮಾಡುತ್ತಿದ್ದಾಗ, ಸುಮಾರು 50 ಮೀಟರ್ ಎತ್ತರದಿಂದ ಆಯತಪ್ಪಿ ಬಿದ್ದಿದ್ದರಿಂದ ಕಾರ್ಮಿಕರು ಗಾಯಗೊಂಡಿದ್ದಾರೆ. ಕೂಡಲೇ ಗಾಯಾಳುಗಳಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ, ನಂತರ ರಾಯಚೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ | Crime Rate : 2022ರಲ್ಲಿ ರಾಜಧಾನಿಯಲ್ಲಿ 172 ಕೊಲೆ, 153 ಅತ್ಯಾಚಾರ: ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ