Site icon Vistara News

Karnataka Election: ಸಾಮಾಜಿಕ ಸಮಾನತೆ ಪ್ರತಿಪಾದಿಸಿದ ಮಾನವತಾವಾದಿ ಬಸವಣ್ಣ: ಎಸ್.ಟಿ.ಸೋಮಶೇಖರ್

S T Somashekar says Basavanna was a humanist who advocated social equality

#image_title

ಬೆಂಗಳೂರು: ಬಸವ ಜಯಂತಿ ಹಿನ್ನೆಲೆಯಲ್ಲಿ ಮನೆಮನೆ ಚುನಾವಣಾ ಪ್ರಚಾರಕ್ಕೆ (Karnataka Election) ತೆರಳುವುದಕ್ಕೂ ಮುನ್ನ ಹೇರೋಹಳ್ಳಿ ವಾರ್ಡ್‌ನಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಬಸವಣ್ಣನವರ ಭಾವಚಿತ್ರಕ್ಕೆ ಭಾನುವಾರ ಪುಷ್ಪನಮನ ಸಲ್ಲಿಸಿದರು.

ನಂತರ ಮಾತನಾಡಿದ ಅವರು, ಬಸವಣ್ಣನವರು ಸಾಮಾಜಿಕ ಸಮಾನತೆಯನ್ನು ಪ್ರತಿಪಾದಿಸಿದ ಮಾನವತಾವಾದಿ. ಅವರ ಉದಾತ್ತ ಚಿಂತನೆಗಳು, ತತ್ವಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ಕರೆಕೊಟ್ಟರು.

ಅಧಿಕಾರದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇನೆ. ರಸ್ತೆ, ನೀರು ಸೇರಿದಂತೆ ಮೂಲಸೌಕರ್ಯಕ್ಕೆ ಒತ್ತು ನೀಡಿದ್ದೇನೆ. ಮತದಾರರು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

ಇದನ್ನೂ ಓದಿ | Basavaraj Bommmai: 50 ವರ್ಷದ ಕೆಲಸವನ್ನು ಸುರೇಶ್‌ ಗೌಡರು 5 ವರ್ಷದಲ್ಲಿ ಮಾಡಿದ್ದಾರೆ: ತುಮಕೂರು ಗ್ರಾಮಾಂತರದಲ್ಲಿ ಸಿಎಂ ಬೊಮ್ಮಾಯಿ ರೋಡ್‌ ಶೋ

ಹೇರೋಹಳ್ಳಿ, ಉಲ್ಲಾಳ, ಅಂಧ್ರಹಳ್ಳಿ, ಕೆಂಗೇರಿ, ವಿಶ್ವೇಶ್ವರಯ್ಯ ಲೇಔಟ್ ಭಾಗದಲ್ಲಿ ಯಶವಂತ ಕ್ಷೇತ್ರದ ಅಭ್ಯರ್ಥಿಯಾದ ಎಸ್.ಟಿ.ಸೋಮಶೇಖರ್ ಅವರು ಮನೆಮನೆ ಪ್ರಚಾರ ಮಾಡಿದರು. ಪ್ರಚಾರ ಸಂದರ್ಭದಲ್ಲಿ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ದೊರೆಯಿತು.

Exit mobile version