ಬೆಂಗಳೂರು: ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ಹೋಗಿ ಚುನಾವಣೆ ಗೆಲ್ಲಲಿ ಎಂದು ಹೇಳಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ. ರವಿ ಅವರಿಗೆ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ ಚಾಟಿ ಬೀಸಿದ್ದಾರೆ.
ʻʻಒಂದು ಕೆಜಿ ಕುಂಕುಮ ಮತ್ತು ಒಂದು ಮೀಟರ್ ಕೇಸರಿ ಬಟ್ಟೆ ಹಿಡಿದುಕೊಂಡು ರಾಜಕೀಯ ಮಾಡಿ ಶಾಸಕನಾದವರು ಸಿ.ಟಿ. ರವಿ. ಈಗ ಸಾವಿರಾರು ಕೋಟಿ ಒಡೆಯನಾದ ಸಿ.ಟಿ.ರವಿ ಜಿಲ್ಲೆಯಲ್ಲಿ ರೈತರು ಎದಿರುಸುತ್ತಿರುವ ಸಮಸ್ಯೆ ಪರಿಹರಿಸಲು ಮನಸು ಮಾಡಿಲ್ಲ. ಈಗ ಸಿದ್ದರಾಮಯ್ಯ ವಿಚಾರಕ್ಕೆ ಬಂದರೆ ಅವರಿಗೆ ಪಾಕಿಸ್ತಾನ ನೆನಪಾಗುತ್ತದೆ,ʼʼ ಎಂದು ಕಿಡಿ ಕಾರಿದರು.
ʻʻಚಿಕ್ಕಮಗಳೂರು ಕ್ಷೇತ್ರದಲ್ಲಿ ಸೋಲಿನ ಭಯದಿಂದ ಸಿ.ಟಿ.ರವಿ ಪಾಕಿಸ್ತಾನ ಹೆಸರು ಬಳಸಿ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನ ಯಾಕೆ? ಸಿದ್ದರಾಮಯ್ಯ ಅವರು ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರಿನಿಂದ ಸ್ಪರ್ಧಿಸಿದರೆ ತಪ್ಪೇನು? ಒಂದು ವೇಳೆ ಸಿ.ಟಿ. ರವಿ ಅವರಿಗೆ ತಾಕತ್ತಿದ್ದರೆ ಸಿದ್ದರಾಮಯ್ಯ ಅವರಿಗೆ ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಹ್ವಾನ ನೀಡಲಿʼʼ ಎಂದು ಸವಾಲು ಹಾಕಿದರು.
ʻʻಸಿದ್ದರಾಮಯ್ಯ ಚಿಕ್ಕಮಗಳೂರಲ್ಲಿ ಚುನಾವಣೆಗೆ ನಿಂತರೆ ಅತ್ಯಧಿಕ ಬಹುಮತದಿಂದ ಗೆಲ್ಲುತ್ತಾರೆ. ಸಿ.ಟಿ. ರವಿಗೆ ತಾಕತ್ ಇದ್ದರೆ ಸಿದ್ದರಾಮಯ್ಯ ಅವರಿಗೆ ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಲು ಸವಾಲು ಹಾಕಲಿ ನೋಡೋಣʼʼ ಎಂದಿದ್ದಾರೆ ಸಚಿನ್ ಮೀಗಾ. ಚಿಕ್ಕಮಗಳೂರು ಕ್ಷೇತ್ರದಲ್ಲಿ ಸೋಲಿನ ಭಯದಿಂದ ಸಿ.ಟಿ.ರವಿ ಪಾಕಿಸ್ತಾನ ಹೆಸರು ಬಳಸುತ್ತಿದ್ದಾರೆ ಎಂದಿದ್ದಾರೆ ಮೀಗಾ.
ಇದನ್ನೂ ಓದಿ | ವೋಟ್ ಸಿಗುತ್ತದೆಂದರೆ ಸಿದ್ದರಾಮಯ್ಯ ಸುನ್ನತ್ಗೂ ರೆಡಿ: ಸಿ.ಟಿ ರವಿ ಗೇಲಿ