Site icon Vistara News

Safe deepavali | ದೀಪಾವಳಿಗೆ ಮುನ್ನವೇ ಶುರುವಾಯ್ತು ಪಟಾಕಿ ಅನಾಹುತ, ನಾಲ್ವರು ಪುಟ್ಟ ಮಕ್ಕಳಿಗೆ ಗಾಯ

deepaavali eye injury

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಆರಂಭಕ್ಕೆ ಮೊದಲೇ ಪಟಾಕಿಯಿಂದ ಅನಾಹುತಗಳು ಶುರುವಾಗಿವೆ. ದೀಪಾವಳಿ ಹಬ್ಬ ಸೋಮವಾರದಿಂದ ಬುಧವಾರದವರೆಗೆ ಮೂರು ದಿನ ನಡೆಯುತ್ತದೆ. ಭಾನುವಾರ ನೀರು ತುಂಬುವ ಶಾಸ್ತ್ರವಿದೆಯಾದರೂ ಅದು ನಗರ ಪ್ರದೇಶದಲ್ಲಿ ಹೆಚ್ಚಾಗಿ ಆಚರಣೆಯಲ್ಲಿಲ್ಲ. ಆದರೆ, ಹಬ್ಬದ ಸಡಗರ ಮಾತ್ರ ಭಾನುವಾರದಿಂದಲೇ ಆರಂಭಗೊಂಡಿದೆ. ಜತೆಗೆ ಪಟಾಕಿಗಳ ಅಬ್ಬರವೂ ಹೆಚ್ಚಿದೆ.

ಈ ನಡುವೆ, ಭಾನುವಾರದಿಂದಲೇ ಶುರುವಾಗಿರುವ ಪಟಾಕಿ ಅಬ್ಬರಕ್ಕೆ ಈಗಾಗಲೇ ನಾಲ್ವರು ಮಕ್ಕಳಿಗೆ ಕಣ್ಣು ಮತ್ತು ಮುಖಕ್ಕೆ ಗಾಯವಾಗಿದೆ ಎಂದು ಮಿಂಟೋ ಆಸ್ಪತ್ರೆಯಿಂದ ಮಾಹಿತಿ ಸಿಕ್ಕಿದೆ. ಮಿಂಟೋ ಆಸ್ಪತ್ರೆಯೊಂದರಲ್ಲೇ ನಾಲ್ವರು ಚಿಕಿತ್ಸೆ ಪಡೆದಿದ್ದಾರೆ. ಉಳಿದ ಕಡೆ ಇನ್ನೂ ಕೆಲವರಿಗೆ ಸಮಸ್ಯೆ ಆಗಿರಬಹುದು ಎಂದು ಹೇಳಲಾಗಿದೆ.

ಹತ್ತು ವರ್ಷದ ಬಾಲಕನಿಗೆ ರಾಕೆಟ್‌ ಸಿಡಿಸುವ ವೇಳೆ ಮುಖ ಪೂರ್ತಿ ಸುಟ್ಟುಹೋಗಿದೆ. ಆತನಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಥಣಿಸಂದ್ರದ 7 ವರ್ಷದ ಬಾಲಕನ ಎಡಗಣ್ಣಿಗೆ ಹಾನಿಯಾಗಿದ್ದರೆ, ಫ್ರೇಜರ್‌ ಟೌನ್‌ನ 7ವರ್ಷದ ಬಾಲಕನ ಬಲಗಣ್ಣಿಗೆ ಹಾನಿ ಉಂಟಾಗಿದೆ. ಆದರೆ, ಇಬ್ಬರಿಗೂ ಕಣ್ಣಿಗೆ ಯಾವುದೇ ತೊಂದರೆ ಆಗಿಲ್ಲ.

ಈ ನಡುವೆ, ಫ್ರೇಜರ್‌ ಟೌನ್‌ನ ಏಳು ವರ್ಷದ ಬಾಲಕ ಆದಿತ್ಯ, ಆಟಂ ಬಾಂಬ್‌ ಹಚ್ಚುವಾಗ ಅದು ಹತ್ತಿರದಲ್ಲೇ ಸಿಡಿದು ಬಲಗಣ್ಣಿಗೆ ಗಾಯವಾಗಿದೆ. ಮಧ್ಯರಾತ್ರಿ ಒಂದು ಗಂಟೆಯ ಹೊತ್ತಿಗೆ ಘಟನೆ ನಡೆದಿದ್ದು, ಕೂಡಲೇ ಆಸ್ಪತ್ರೆಗೆ ತಂದು ದಾಖಲಿಸಲಾಗಿದೆ.

ಇದನ್ನೂ ಓದಿ | Deepavali 2022 | ದೀಪಾವಳಿ ಬಗ್ಗೆ ಪುರಾಣದಲ್ಲಿದೆ ರೋಚಕ‌ ಕಥೆ

Exit mobile version