Site icon Vistara News

SAFF Football: ಭಾರತ-ಪಾಕ್ ನಡುವಿನ ಫುಟ್ಬಾಲ್ ಪಂದ್ಯ ನಡೆಯುವಾಗಲೇ ಮೈದಾನಕ್ಕೆ ನುಗ್ಗಿದ ಅಭಿಮಾನಿಗಳು!

SAFF Football- Fans entered the field during the India-Pak game

ಬೆಂಗಳೂರು, ಕರ್ನಾಟಕ: ಮಳೆಯನ್ನು ಲೆಕ್ಕಿಸದೆ ನಾಯಕ ಸುನೀಲ್​ ಚೆಟ್ರಿ(Sunil Chhetri) ಅವರು ಬಾರಿಸಿದ ಹ್ಯಾಟ್ರಿಕ್​ ಗೋಲಿನ ನೆರವಿನಿಂದ ಭಾರತ (India) ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ(Pakistan football team) ವಿರುದ್ಧ ಸ್ಯಾಫ್ ಫುಟ್​ಬಾಲ್​​ ಚಾಂಪಿಯನ್​ಶಿಪ್​ ಟೂರ್ನಿಯಲ್ಲಿ(SAFF Football) 4-0 ಗೋಲ್​ಗಳ ಅಂತರದಿಂದ ಭರ್ಜರಿಯಾಗಿ ಗೆಲುವು ದಾಖಲಿಸಿದೆ. ಬುಧವಾರ ಕಂಠೀರವ ಕ್ರೀಡಾಂಗಣದಲ್ಲಿ(Sree Kanteerava Stadium) ನಡೆದ ದ್ವಿತೀಯ ಪಂದ್ಯದಲ್ಲಿ ಭಾರತ ತಂಡ ಪಾಕ್​ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ಆದರೆ, ಪಂದ್ಯ ನಡೆಯುತ್ತಿರುವಾಗ ಆಟದ ಮೈದಾನಕ್ಕೆ ಅಭಿಮಾನಿಗಳು (Fans) ನುಗ್ಗಿದ್ದರಿಂದ ಗಲಾಟೆ ನಡೆಯಿತು.

ಆಟದ ನಡುವೆ ಅಭಿಮಾನಿಗಳು ಆಟದ ಮೈದಾನಕ್ಕೆ ನುಗ್ಗಿದ್ದರಿಂದ ಗಲಾಟೆ ನಡೆಯಿತು. ಅಲ್ಲದೇ ಗೊಂದಲ ಏರ್ಪಟ್ಟಿತ್ತು. ಫುಟ್ಬಾಲ್ ಅಭಿಮಾನಿಗಳು ಪಾಕಿಸ್ತಾನದ ಆಟಗಾರರತ್ತ ದೌಡಾಯಿಸಿದರು. ಈ ವೇಳೆ, ಅಭಿಮಾನಿಗಳನ್ನು ತಡೆದಿದ್ದರಿಂದ ಭದ್ರತಾ ಸಿಬ್ಬಂದಿ ಜತೆ ಜಗಳ ನಡೆಯಿತು. ಆಗ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮೂವರು ಯುವಕರನ್ನು ವಶಕ್ಕೆ ಪಡೆದುಕೊಂಡರು.

ಈ ಸುದ್ದಿಯನ್ನೂ ಓದಿ: SAFF Football: ಪಾಕ್​ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು; ಟೂರ್ನಿಯಲ್ಲಿ ಶುಭಾರಂಭ

ಮೈದಾನದೊಳಕ್ಕೆ ನುಗ್ಗಿದ ಯುವಕರು ಪೊಲೀಸರು ಜತೆಗೂ ವಾಗ್ವಾದ ನಡೆಸಿದ್ದಾರೆ. ಆಟದ ವೇಳೆ ಮೈದಾನಕ್ಕೆ ನುಗ್ಗಿ ಗೊಂದಲ ಸೃಷ್ಟಿಸಿದ್ದ ಯುವಕರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಪಂದ್ಯಾವಳಿ ವೀಕ್ಷಣೆ ವೇಳೆ ರೂಲ್ಸ್ ಬ್ರೇಕ್ ಮಾಡಿ, ಗೊಂದಲವನ್ನು ಯುವಕರು ಸೃಷ್ಟಿಸಿದ್ದಾರೆ. ವಶಕ್ಕೆ ಪಡೆದ ಯುವಕರಿಗೆ ದಂಡ ವಿಧಿಸಿದ ಪೊಲೀಸರು ಬಿಟ್ಟು ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕ್ರೀಡೆಯ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Exit mobile version