Site icon Vistara News

Sahitya Sammelana: ಮಾ.20 ರಂದು ಸಾಗರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ವಿ.ಗಣೇಶ್ ಅಧ್ಯಕ್ಷತೆ

V Ganesh writer Sahitya Sammelana sagara

#image_title

ಸಾಗರ: ಇಲ್ಲಿನ ಶಿವಪ್ಪ ನಾಯಕ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕು ಮಟ್ಟದ 11ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು (Sahitya Sammelana) ಹಿರಿಯ ಸಾಹಿತಿ ವಿ.ಗಣೇಶ್ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ಮಾ. 20ರಂದು ಬೆಳಗ್ಗೆ 9 ರಿಂದ ಆಯೋಜಿಸಲಾಗಿದೆ.

ಬೆಳಗ್ಗೆ 8.45ಕ್ಕೆ ಉಪ ವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಅವರು ರಾಷ್ಟ್ರ ಧ್ವಜಾರೋಹಣ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ನಾಗೇಶ್ ಬ್ಯಾಲಾಳ ನಾಡ ಧ್ವಜವನ್ನು ಹಾಗೂ ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ ನಾಡ ಧ್ಜಜಾರೋಹಣ ನೆರವೇರಿಸುವರು.

ಬೆಳಗ್ಗೆ 9ಕ್ಕೆ ಶಿವಪ್ಪ ನಾಯಕ ನಗರ ಆಶ್ರಮ ಶಾಲೆಯಿಂದ ಸಮ್ಮೇಳಾಧ್ಯಕ್ಷರ ಮೆರವಣಿಗೆಯನ್ನು ಕಲಾ ತಂಡಗಳೊಂದಿಗೆ ಆಯೋಜಿಸಿದ್ದು ಬಿಇಒ ಯಮನೂರಪ್ಪ, ನಗರಸಭೆ ಸದಸ್ಯರಾದ ಸವಿತಾವಾಸು, ಮಧುಮಾಲತಿ, ಉಮೇಶ್ ಎ, ಸಬೀನಾ ತನ್ವೀರ್, ಬಿ.ಎಚ್.ಲಿಂಗರಾಜ್, ಗಜೇಂದ್ರ, ಡಿ.ಕೆ.ಮೋಳೆ ಮೊದಲಾದವರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ: Rishab Shetty: ವಿಶ್ವಸಂಸ್ಥೆಯಲ್ಲಿ ಕನ್ನಡ ಭಾಷಣ ಪೂರ್ತಿಯಾಗಿ ಮಾಡಿದ್ರಾ ರಿಷಬ್‌?ವಿಡಿಯೊದಲ್ಲಿ ಏನಿದೆ?

ಬೆಳಗ್ಗೆ 10ಕ್ಕೆ ಶಾಸಕ ಎಚ್. ಹರತಾಳು ಹಾಲಪ್ಪ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಸಾಹಿತಿ ಡಾ.ನಾ.ಡಿಸೋಜ ದಿಕ್ಸೂಚಿ ಮಾತುಗಳನ್ನಾಡುವರು. ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಆಶಯ ಭಾಷಣ ಮಾಡಲಿದ್ದಾರೆ. ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ, ಉಪಾಧ್ಯಕ್ಷ ವಿ.ಮಹೇಶ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಮೋಹನ್ ಮೂರ್ತಿ, ಉಪ ವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್, ನಗರಸಭೆ ಸದಸ್ಯ ಬಿ.ಎಚ್.ಲಿಂಗರಾಜ್, ನೌಕರರ ಸಂಘದ ಅಧ್ಯಕ್ಷ ಪರಮೇಶ್ವರಪ್ಪ ಜಿ, ಪ್ರಮುಖರಾದ ಬಿ.ಆರ್.ಜಯಂತ್, ಗಣೇಶ್ ಪ್ರಸಾದ್, ಸೈಯದ್ ಜಾಕೀರ್, ವಿಜಯ ಕುಮಾರ್ ವಿ.ಕೆ, ಮೊದಲಾದವರು ಉಪಸ್ಥಿತರಿರುವರು.

ಬೆಳಗ್ಗೆ 11.45 ಕ್ಕೆ ವರ್ತಮಾನದ ಸಾಹಿತ್ಯ ಮತ್ತು ಸಾಂಸ್ಕೃತಿಕ ತಲ್ಲಣಗಳು ಕುರಿತ ಗೋಷ್ಠಿಯ ಅಧ್ಯಕ್ಷತೆಯನ್ನು ಪತ್ರಕರ್ತ ಕೆ.ಎನ್.ವೆಂಕಟಗಿರಿ ವಹಿಸಲಿದ್ದು ಶಿವಮೊಗ್ಗ ಕಮಲಾ ನೆಹರೂ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ. ಆರಡಿ ಮಲ್ಲಯ್ಯ ಕಟ್ಟೇರ ವಿಷಯ ಮಂಡಿಸಲಿದ್ದಾರೆ. ವೇದಿಕೆಯಲ್ಲಿ ಗಣಪತಿ ಮಂಡಗಳಲೆ, ಶಿವಾನಂದ ಕುಗ್ವೆ, ಪರಮೇಶ್ವರ ದೂಗೂರು, ಲಕ್ಷ್ಮಣ್ ಸಾಗರ್, ರವಿರಾಜ್ ಮಂಡಗಳಲೆ, ರಾಮಚಂದ್ರ ಸಾಗರ್, ಸಫ್ರಾಜ್ ಚಂದ್ರಗುತ್ತಿ, ಡಾ.ಕೆಳದಿ ವೆಂಕಟೇಶ್ ಜೋಯಿಸ್, ಸತೀಶ್ ಕೆ. ಉಪಸ್ಥಿತರಿರುವರು. ಮಧ್ಯಾಹ್ನ 12.45ರಿಂದ ನಡೆಯುವ ಎರಡನೇ ಗೋಷ್ಠಿ ರಾಜಕೀಯ ಮತ್ತು ಮಹಿಳಾ ಪ್ರಾತಿನಿಧ್ಯ ಗೋಷ್ಠಿ ಅಧ್ಯಕ್ಷತೆಯನ್ನು ಹೆಸರಾಂತ ವೈದ್ಯೆ ಡಾ.ರಾಜನಂದಿನಿ ಕಾಗೋಡು ವಹಿಸಲಿದ್ದು ಸಾಹಿತಿ ಹಾಗೂ ಉಪನ್ಯಾಸಕಿ ಡಾ. ವಸುಮತಿ ಗೌಡ ವಿಷಯ ಮಂಡಿಸುವರು. ವೇದಿಕೆಯಲ್ಲಿ ಎನ್.ಲಲಿತಮ್ಮ, ಶರಾವತಿ ಸಿ.ರಾವ್, ರೋಹಿಣಿ ಶರ್ಮ, ಚೂಡಾಮಣಿ ರಾಮಚಂದ್ರ, ಸುಮಂಗಲ ರಾಮಕೃಷ್ಣ, ವೀಣಾ ನಾಯ್ಡು, ಕಸ್ತೂರಿ ಸಾಗರ್, ನಾದಿರ ಪರ್ವಿನ್ ಉಪಸ್ಥಿತರಿರುವರು.

ಮಧ್ಯಾಹ್ನ 2.15ಕ್ಕೆ ಸಮ್ಮೇಳನಾಧ್ಯಕ್ಷರ ಸಾಹಿತ್ಯಾವಲೋಕನ ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಅಂಬ್ರಯ್ಯ ಮಠ ವಹಿಸಲಿದ್ದು, ಸಾಹಿತಿ ಡಾ.ಗುರುದತ್ತ ಶಿವಮೊಗ್ಗ ಇವರು ವಿಷಯ ಮಂಡಿಸಲಿದ್ದಾರೆ. ಗೋಷ್ಠಿಯಲ್ಲಿ ಕೃಷ್ಣಯ್ಯ, ತಿಮ್ಮಪ್ಪ ಕಲಸಿ, ಪ್ರೊ.ಮಹಾಬಲೇಶ್ವರ, ಶಕುಂತಲ ಹಿರೇಮಠ, ಈಳಿ ಶ್ರೀಧರ್, ಎಸ್.ಬಿ.ಮಹಾದೇವ್, ಬಿ.ಜಿ.ಮಂಜಪ್ಪ, ಮ.ಸ.ನಂಜುಂಡಸ್ವಾಮಿ, ದಿನೇಶ್ ಶಿರವಾಳ, ರಮೇಶ್ ಕೆಳದಿ, ಸತ್ಯನಾರಾಯಣ ಖಂಡಿಕಾ, ಬಿ.ಡಿ.ರವಿಕುಮಾರ್ ಉಪಸ್ಥಿತರಿರುವರು.

ಮಧ್ಯಾಹ್ನ 3ಕ್ಕೆ ನಡೆಯುವ ಕಾವ್ಯ ಕಲರವ ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ.ಜಯಪ್ರಕಾಶ್ ಮಾವಿನಕುಳಿ ವಹಿಸಲಿದ್ದು, ಗೋಷ್ಠಿಯಲ್ಲಿ ಕುಸುಮ ಸುಬ್ಬಣ್ಣ, ಶಂಕರ್ ಅಳ್ವಿಕೋಡು, ತಸ್ರಿಫ್ ಇಬ್ರಾಹಿಂ ಉಪಸ್ಥಿತರಿರುವರು. ಕವಿಗೋಷ್ಠಿಯಲ್ಲಿ ಭಾಗೀರಥಿ, ಚಂದ್ರಶೇಖರ್ ಸಿರಿವಂತೆ, ಯೋಗೀಶ್ ಭಟ್, ಚಂದ್ರಮೌಳಿ, ವಿಷ್ಣುಮೂರ್ತಿ, ಆನಂದಪುರ, ಪಾಲಾಕ್ಷಪ್ಪ ಎಸ್.ಎನ್, ಗವಿಯಪ್ಪ ಎಲ್.ಟಿ., ಜಗನ್ನಾಥ ಕೆ, ಗಜಾನನ, ಡಾ.ಅನ್ನಪೂರ್ಣ, ಅರ್ಚನ ಪ್ರಸನ್ನ, ಅವಿನಾಶ್ ಜಿ, ಗಾರ್ಗಿ ಬಂದಗದ್ದೆ, ಭದ್ರಪ್ಪ ಗೌಡ, ವೆಂಕಟೇಶ್ ಸಂಪ, ಕವನ ವಾಚಿಸಲಿದ್ದಾರೆ, ಎಚ್.ಜಿ.ಸುಬ್ರಹ್ಮಣ್ಯ ಭಟ್, ಕೋದಂಡ ಸಾಗರ್, ದೀಪಕ್ ಸಾಗರ್, ಸಹನಾ ಜಿ ಭಟ್ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: World Sleep Day : ಉದ್ಯೋಗಿಗಳಿಗೆ ಸಾವಕಾಶ ನಿದ್ದೆ ಮಾಡಲು ರಜೆ ಘೋಷಿಸಿದ ಬೆಂಗಳೂರಿನ ವೇಕ್‌ಫಿಫ್ಟ್

ಸಂಜೆ 4ಕ್ಕೆ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಿದ್ದು ಶಾಸಕರಾದ ಎಚ್. ಹರತಾಳು ಹಾಲಪ್ಪ ಅಧ್ಯಕ್ಷತೆ ವಹಿಸಲಿದ್ದು ಸಂಸದರಾದ ಬಿ.ವೈ.ರಾಘವೇಂದ್ರ, ಮಾಜಿ ವಿಧಾನ ಸಭಾಧ್ಯಕ್ಷರಾದ ಕಾಗೋಡು ತಿಮ್ಮಪ್ಪ ಸಾಧಕರನ್ನು ಸನ್ಮಾನಿಸುವರು, ಈ ಸಂದರ್ಭದಲ್ಲಿ ಸಹಾಯಕ ಪೊಲೀಸ್ ಅಧಿಕಾರಿ ರೋಹನ್ ಜಗದೀಶ್, ಪ್ರಮುಖರಾದ ಅಶ್ವಿನಿ ಕುಮಾರ್, ಟಿ.ಡಿ.ಮೇಘರಾಜ್, ಐ.ಎನ್.ಸುರೇಶ್ ಬಾಬು, ಶ್ರೀನಿವಾಸ್ ಆರ್, ಟಿ.ವಿ.ಪಾಂಡುರಂಗ ಉಪಸ್ಥಿತರಿರುವರು, ಡಾ.ಎಚ್.ಎಸ್.ಮೋಹನ್-ಸಾಹಿತ್ಯ, ಮುನಾಫ್ ಶ್ರೀಧರನಗರ-ಕಾಯಕ, ಗಣಪತಿಯಪ್ಪ ಜಂಬೂರು ಮನೆ-ಕೃಷಿ, ಅಬಸೆ ದಿನೇಶ್ ಕುಮಾರ್ ಜೋಷಿ-ಸಮಾಜಸೇವೆ, ಎಂ.ಎಸ್.ಗೌಡರು —ಕಾನೂನು, ಫ್ರಾನ್ಸಿಸ್ ಪಿಯೂಸ್ ಫರ್ನಾಂಡಿಸ್-ಸಾಂಸ್ಕೃತಿಕ, ಡಿ.ಎಂ.ಗಜಾನನ-ಕಲೆ, ಮಂಜಣ್ಣ-ಶ್ರಮಜೀವಿ, ಸಾವಿತ್ರಿ-ಮಹಿಳಾ ಕ್ಷೇತ್ರ, ರೋಟರಿ ರಕ್ತನಿಧಿ-ಸಂಘ ಸಂಸ್ಥೆ, ಸರ್ಕಾರಿ ಉರ್ದು ಪ್ರೌಢಶಾಲೆ-ಶಿಕ್ಷಣ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಗುವುದು.

ಇದನ್ನೂ ಓದಿ: Shakib Al Hasan: ಜುವೆಲ್ಲರಿ ಶಾಪ್​ ಉದ್ಘಾಟನೆ ಕಾರ್ಯಕ್ರಮದಲ್ಲಿ ಹಲ್ಲೆಗೊಳಗಾದ ಬಾಂಗ್ಲಾ ಆಟಗಾರ​; ವಿಡಿಯೊ ವೈರಲ್

ಸಂಜೆ 5.30ಕ್ಕೆ ಕ.ಸಾ.ಪ ಅಧ್ಯಕ್ಷ ವಿ.ಟಿ.ಸ್ವಾಮಿ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಸಾಹಿತಿ ಹಾಗೂ ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಶುಭಾ ಮರವಂತೆ ಸಮಾರೋಪ ನುಡಿಗಳನ್ನಾಡುವರು. ವೇದಿಕೆಯಲ್ಲಿ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು, ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ ಅರವಿಂದ ರಾಯ್ಕರ್, ಹೈಕೋರ್ಟ್ ಹಿರಿಯ ನ್ಯಾಯವಾದಿ ಕೆ. ದಿವಾಕರ್, ಪೌರಾಯುಕ್ತ ಸಿ.ಚಂದ್ರಪ್ಪ, ಹೆಚ್.ಕೆ.ನಾಗಪ್ಪ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು, ಕ.ಸಾ.ಪ ನಿಕಟಪೂರ್ವ ಅಧ್ಯಕ್ಷ ಎಸ್.ವಿ.ಹಿತಕರ್ ಜೈನ್, ಆಟೋ ಚಾಲಕರ ಸಂಘದ ಅಧ್ಯಕ್ಷ ಜನಾರ್ಧನ ಪೂಜಾರಿ ಮೊದಲಾದವರು ಉಪಸ್ಥಿತರಿರುವರು.

ಸಮ್ಮೇಳನಾಧ್ಯಕ್ಷರ ಪರಿಚಯ

ಸಾಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ಸಾಹಿತ್ಯ ಭವನದಲ್ಲಿ ಮಾ. 20 ರಂದು ಆಯೋಜಸಿರುವ ತಾಲೂಕು ಮಟ್ಟದ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಸಾಹಿತಿ ವಿ.ಗಣೇಶ್ ಅವರು ಸಾಹಿತ್ಯ, ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: Viral Video : ರಾಷ್ಟ್ರೀಯ ಹೆದ್ದಾರಿಯಲ್ಲಿ ಬರ್ತ್‌ಡೇ ಆಚರಿಸಿಕೊಂಡ ಯೂಟ್ಯೂಬರ್‌; ಪೊಲೀಸರಿಂದ ಭರ್ಜರಿ ಗಿಫ್ಟ್‌!

ಸಾಗರದ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸುಮಾರು 38 ವರ್ಷಗಳ ಕಾಲ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಾ ಸಹಸ್ರಾರು ವಿದ್ಯಾರ್ಥಿಗಳಿಗೆ ಗಣಿತ ಮತ್ತು ಇಂಗ್ಲಿಷ್ ಎರಡನ್ನೂ ಬೋಧಿಸುತ್ತಾ ಮೆಚ್ಚಿನ ಶಿಕ್ಷಕರಾಗಿ ಅವರ ಬದುಕನ್ನು ಬೆಳಗುವುದರಲ್ಲಿ ಸಹಕಾರಿಯಾಗಿದ್ದಾರೆ. ತಮ್ಮ ಅಧಿಕಾರದ ಅವಧಿಯಲ್ಲಿ ಸಾಗರದ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಿ ರಾಜ್ಯಕ್ಕೆ ಮಾದರಿ ಕಾಲೇಜನ್ನಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ನಿವೃತ್ತಿ ನಂತರ ನಿಂತ ನೀರಾಗದೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲೂ ಪಾಂಡಿತ್ಯವನ್ನು ಹೊಂದಿರುವ ಗಣೇಶ್‍ ಅವರು ಎರಡೂ ಭಾಷೆಗಳಲ್ಲಿ ಕಥೆ, ಕಾದಂಬರಿ, ಕವನ, ಅನುವಾದ ಮುಂತಾದ ಎಲ್ಲ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ. ಮಕ್ಕಳ ಸಾಹಿತ್ಯ ಕುರಿತು ಹೆಚ್ಚಿನ ಕೃತಿ ರಚನೆ ಮಾಡಿದ್ದಾರೆ.

ಇದನ್ನೂ ಓದಿ: Puneeth Rajkumar: ರಾಘಣ್ಣನ ಕುಟುಂಬದಿಂದ ಅನ್ನದಾನ, ಸಸಿಗಳ ವಿತರಣೆ

ಸಾರ್ವಜನಿಕ ಕ್ಷೇತ್ರದಲ್ಲಿಯೂ ಸಾಕಷ್ಟು ಸೇವೆ ಸಲ್ಲಿಸುತ್ತಾ ಬಂದಿರುವ ವಿ.ಗಣೇಶ್, ಸುಗಮ ಸಂಗೀತ ಪರಿಷತ್, ಸಿರಿಗನ್ನಡ ವೇದಿಕೆ, ಸ್ಮಾರ್ತ ಬ್ರಾಹ್ಮಣ ಒಕ್ಕೂಟ, ಎಸ್.ವಿ.ಪಿ. ಕಾಲೋನಿ ರಾಮ ಮಂದಿರ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಗೃಹ ನಿರ್ಮಾಣ ಸಂಘ ಸೇರಿದಂತೆ ವಿವಿಧ ಸಂಸ್ಥೆಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಸಾಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ನಿರ್ದೇಶಕರಾಗಿ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ.

ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನದ ರಾಷ್ಟ್ರೀಯ ಪ್ರಶಸ್ತಿ, ರಾಷ್ಟ್ರಮಟ್ಟದ ಸಹೃದಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಸುಮ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸಾಗರದ ಶ್ರೀ ಶೃಂಗೇರಿ ಶಂಕರ ಮಠ, ನಿವೃತ್ತ ನೌಕರರ ಸಂಘ, ರಾಷ್ಟ್ರೋತ್ತಾನ ಪರಿಷತ್ತು, ಹೊಸಪೇಟೆಯ ಶಂಕರ ಸಾಹಿತ್ಯ ಪರಿಷತ್ತು,, ಜನ್ ಜೀವನ್ ಜಾಗೃತ್ ವೇದಿಕೆ ಮುಂತಾದ ಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟಿರುತ್ತಾರೆ. ಇತ್ತೀಚೆಗೆ ಶಿಕಾರಿಪುರದ ಹಳೆಯ ವಿದ್ಯಾರ್ಥಿಗಳ ಸಂಘವು ಶ್ರೀಯುತರನ್ನು ಗೌರವಿಸಿ ಪ್ರಸನ್ನವದನ ಪ್ರಥಿತರು ಎಂಬ ಅಭಿನಂದನಾ ಗ್ರಂಥವನ್ನು ಅರ್ಪಿಸಿರುತ್ತಾರೆ.

ಪತ್ನಿ ನಿರ್ಮಲಾ ಅವರೊಂದಿಗೆ ಸಾಗರದಲ್ಲಿ ವಾಸವಾಗಿರುವ ಗಣೇಶ್ ಅವರಿಗೆ ಸಾಫ್ಟ್ ವೇರ್ ಎಂಜಿನಿಯುರುಗಳಾಗಿ ಕೆಲಸ ಮಾಡುತ್ತಿರುವ ಆಕಾಶ್ ಮತ್ತು ಅವಿನಾಶ್ ಎಂಬ ಇಬ್ಬರು ಮಕ್ಕಳಿದ್ದಾರೆ. ಆಕಾಶ್ ಕೆನಡಾದಲ್ಲಿದ್ದರೆ, ಅವಿನಾಶ್ ಪತ್ನಿಯೊಂದಿಗೆ ಬೆಂಗಳೂರಿನಲ್ಲಿದ್ದಾರೆ. ಗಣೇಶ್ ಅವರ ಇಬ್ಬರು ಮಕ್ಕಳೂ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವುದು ವಿಶೇಷವಾಗಿದೆ.

ಇದನ್ನೂ ಓದಿ: Kr pura to Whitefield Metro: ಕೆ.ಆರ್. ಪುರಂನಿಂದ ವೈಟ್ ಫೀಲ್ಡ್ ಮೆಟ್ರೋ ಓಡಾಟಕ್ಕೆ ಕೌಂಟ್‌ಡೌನ್‌ ಆರಂಭ; ಮಾರ್ಚ್‌ 25ಕ್ಕೆ ಡೇಟ್‌ ಫಿಕ್ಸ್‌!

Exit mobile version