Shakib Al Hasan: ಜುವೆಲ್ಲರಿ ಶಾಪ್​ ಉದ್ಘಾಟನೆ ಕಾರ್ಯಕ್ರಮದಲ್ಲಿ ಹಲ್ಲೆಗೊಳಗಾದ ಬಾಂಗ್ಲಾ ಆಟಗಾರ​; ವಿಡಿಯೊ ವೈರಲ್ - Vistara News

ಕ್ರಿಕೆಟ್

Shakib Al Hasan: ಜುವೆಲ್ಲರಿ ಶಾಪ್​ ಉದ್ಘಾಟನೆ ಕಾರ್ಯಕ್ರಮದಲ್ಲಿ ಹಲ್ಲೆಗೊಳಗಾದ ಬಾಂಗ್ಲಾ ಆಟಗಾರ​; ವಿಡಿಯೊ ವೈರಲ್

ಸೆಲ್ಫಿ ತೆಗೆಯುವ ಭರದಲ್ಲಿ ಅಭಿಮಾನಿಗಳು ಬಾಂಗ್ಲಾ ಕ್ರಿಕೆಟಿಗ ಶಕಿಬ್​ ಅಲ್​ ಹಸನ್​ ಅವರ ಕೊರಳ ಪಟ್ಟಿ ಹಿಡಿದು ಎಳೆದಾಡಿದ ಘಟನೆ ದುಬೈನಲ್ಲಿ ನಡೆದಿದೆ.

VISTARANEWS.COM


on

Shakib Al Hasan: Bangla player assaulted at jewelery shop launch event; The video is viral
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದುಬೈ: ಬಾಂಗ್ಲಾದೇಶದ ಸ್ಟಾರ್​ ಕ್ರಿಕೆಟ್​ ಆಟಗಾರ ಶಕೀಬ್ ಅಲ್ ಹಸನ್(Shakib Al Hasan) ಅವರು ದುಬೈನಲ್ಲಿ ನಡೆದ ವಾಣಿಜ್ಯ ಕಾರ್ಯಕ್ರಮವೊಂದರಲ್ಲಿ ಕಿರುಕುಳ ಅನುಭವಿಸಿದ ಘಟನೆ ನಡೆದಿದೆ.

ಆರವ್ ಖಾನ್ ಒಡೆತನದ ಚಿನ್ನದ ಆಭರಣ ಅಂಗಡಿಯನ್ನು ಉದ್ಘಾಟಿಸಲು ಶಕೀಬ್ ಅಲ್ ಹಸನ್ ದುಬೈಗೆ ತೆರಳಿದ್ದರು. ಈ ವೇಳೆ ಅವರನ್ನು ನೋಡಲು ಬಂದ ಅಭಿಮಾನಿಗಳಲ್ಲಿ ಕೆಲವರು ಅತಿರೇಕದಿಂದ ವರ್ತಿಸಿದ್ದಾರೆ. ಸೆಲ್ಫಿ ತೆಗೆಯುವ ಭರದಲ್ಲಿ ಶಕೀಬ್ ಅಲ್ ಹಸನ್ ಅವರನ್ನು ಎಳೆದಾಡಿ ನೆಲಕ್ಕೆ ಬೀಳಿಸಿದ್ದಾರೆ. ಇನ್ನು ಕೆಲವರು ಅವರ ಕೊರಳಪಟ್ಟಿಯನ್ನು ಎಳೆದಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ Shakib Al Hasan: ಅಭಿಮಾನಿಗೆ ಥಳಿಸಿದ ಶಕಿಬ್ ಅಲ್ ಹಸನ್‌; ವಿಡಿಯೊ ವೈರಲ್​

ಕೆಲ ದಿನಗಳ ಹಿಂದೆ ಶಕಿಬ್​ ಅವರು ಜಾಹೀರಾತು ಪ್ರಚಾರದ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ವೇಳೆ ಕ್ಯಾಪ್ ಎಳೆದು ದುರ್ವರ್ತನೆ ತೋರಿದ ಅಭಿಮಾನಿಯ ವಿರುದ್ಧ ಸಿಟ್ಟಿಗೆದ್ದು ಕ್ಯಾಪ್‌ ನಿಂದಲೇ ಒಂದೆರಡು ಬಾರಿ ಥಳಿಸಿದ್ದರು. ಇದೀಗ ಅಭಿಮಾನಿಗಳೆ ಶಕಿಬ್ ಅವರ ಕೊರಳಪಟ್ಟಿ ಹಿಡಿದು ಎಳೆದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Virender Sehwag: ಬಡ ದೇಶದ ಕ್ರಿಕೆಟ್​ ಲೀಗ್​ ಆಡಲ್ಲ ಎಂದ ವೀರೇಂದ್ರ ಸೆಹವಾಗ್; ಕಾರಣವೇನು?

Virender Sehwag: ಸೆಹವಾಗ್​ ಅವರು 14 ವರ್ಷದ ಕ್ರಿಕೆಟ್​ ಬಾಳ್ವೆಯಲ್ಲಿ 17,000 ಸಾವಿರಕ್ಕೂ ಅಧಿಕ ಅಂತಾರಾಷ್ಟ್ರಿಯ ರನ್​ ಬಾರಿಸಿದ್ದಾರೆ. ಭಾರತ ಪರ ಟೆಸ್ಟ್​ನಲ್ಲಿ ತ್ರಿಶತಕ ​ ಬಾರಿಸಿದ ಮೊದಲ ಆಟಗಾರ ಎಂಬ ಹಿರಿಮೆಯೂ ಇವರದ್ದಾಗಿದೆ.

VISTARANEWS.COM


on

Virender Sehwag
Koo

ಮುಂಬಯಿ: ಟೀಮ್​ ಇಂಡಿಯಾದ ಮಾಜಿ ಡ್ಯಾಶಿಂಗ್ ಓಪನಿಂಗ್​ ಬ್ಯಾಟರ್ ವೀರೇಂದ್ರ ಸೆಹವಾಗ್​​(Virender Sehwag) ಸಂದರ್ಶನವೊಂದರಲ್ಲಿ ಡ್ಯಾಶಿಂಗ್​ ಉತ್ತರವನ್ನೇ ನೀಡಿದ್ದಾರೆ. ನಾವು ಶ್ರೀಮಂತರು, ಬೇರೆ ಕ್ರಿಕೆಟ್ ಲೀಗ್​ಗಳಲ್ಲಿ ಆಡುವುದಕ್ಕಾಗಿ ಬಡ ದೇಶಗಳಿಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಆ್ಯಡಂ ಗಿಲ್‌ ಕ್ರಿಸ್ಟ್‌(Adam Gilchrist) ಅವರು “ಇತರ ಟಿ20 ಲೀಗ್ ಗಳಲ್ಲಿ ಆಡುವುದಕ್ಕಾಗಿ ಭಾರತೀಯ ಕ್ರಿಕೆಟಿಗರು ಮುಂದೆ ಯಾವತ್ತಾದರೂ ಬೇರೆ ದೇಶಗಳಿಗೆ ಹೋಗುವ ಸಾಧ್ಯತೆಯಿದೆಯೇ?” ಎಂದು ಸೆಹವಾಗ್​ಗೆ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಸೆಹವಾಗ್​, ”ಇಲ್ಲ, ನಮಗೆ ಅದರ ಅಗತ್ಯವಿಲ್ಲ. ನಾವು ಶ್ರೀಮಂತರು. ಇತರ ಲೀಗ್ ಗಳಲ್ಲಿ ಆಡುವುದಕ್ಕಾಗಿ ನಾವು ಬಡ ದೇಶಗಳಿಗೆ ಹೋಗುವುದಿಲ್ಲ” ಎಂದು ಹೇಳಿದರು. ಈ ಉತ್ತರ ಕೇಳಿ ಗಿಲ್‌ ಕ್ರಿಸ್ಟ್‌ ಒಂದು ಕ್ಷಣ ಅಚ್ಚರಿಗೊಂಡು ಬ್ಯಾಟಿಂಗ್​ ಮಾತ್ರವಲ್ಲದೆ ಮಾತಿನಲ್ಲಿಯೂ ನೀವು ಸ್ಫೋಟಕವಾಗಿದ್ದೀರಿ ಎಂದು ಹೇಳಿದ್ದಾರೆ.

‘ನನ್ನನ್ನು ಭಾರತ ತಂಡದಿಂದ ಕೈಬಿಡಲಾಗಿತ್ತು. ನಾನು ಐಪಿಎಲ್​ನಲ್ಲಿ ಆಡುತ್ತಿದ್ದೆ. ಆಗ ನನಗೆ ಬಿಬಿಎಲ್ ನಿಂದ ಒಂದು ಅವಕಾಶ ಬಂತು. ಈ ವೇಳೆ ನಾನು ಎಷ್ಟು ಹಣ ಸಿಗಬಹುದು ಎಂದು ಕೇಳಿದೆ. ಈ ವೇಳೆ ಫ್ರಾಂಚೈಸಿಯ ಅಧಿಕಾರಿಯೊಬ್ಬರು ಒಂದು ಲಕ್ಷ ಡಾಲರ್ ಸಿಗಬಹುದು ಎಂದು ಹೇಳಿದರು. ತಕ್ಷಣ ಉತ್ತರಿಸಿದ ನಾನು, ಈ ಮೊತ್ತವನ್ನು ನಾನು ಪ್ರವಾಸಕ್ಕಾಗಿ ಖರ್ಚು ಮಾಡುತ್ತೇನೆ. ನನ್ನ ಕಳೆದ ರಾತ್ರಿಯ ಬಿಲ್ ಇದಕ್ಕಿಂತ ಹೆಚ್ಚಾಗಿತ್ತು ಎಂದು ಹೇಳಿ ಆಫರ್ ತಿರಸ್ಕರಿಸಿದೆ” ಎಂದು ಸೆಹವಾಗ್​ ಹೇಳಿದರು. ಈ ಮೂಲಕ ಭಾರತದ ಕ್ರಿಕೆಟ್​ ಲೀಗ್​ಗಳು ವಿದೇಶೀ ಲೀಗ್​ಗಳಿಗಿಂತ ಅತ್ಯಂತ ಶ್ರೀಮಂತ ಎನ್ನುವುದನ್ನು ಸೆಹವಾಗ್​ ಪರೋಕ್ಷವಾಗಿ ಹೇಳಿದರು.

ಇದನ್ನೂ ಓದಿ Virender Sehwag: ನಾಯಕತ್ವ ನೀಡುವುದಾಗಿ ನಂಬಿಕೆ ದ್ರೋಹ; ಸೆಹ್ವಾಗ್​​​ ಸ್ಫೋಟಕ ಹೇಳಿಕೆ

ಸೆಹವಾಗ್​ ಅವರು 14 ವರ್ಷದ ಕ್ರಿಕೆಟ್​ ಬಾಳ್ವೆಯಲ್ಲಿ 17,000 ಸಾವಿರಕ್ಕೂ ಅಧಿಕ ಅಂತಾರಾಷ್ಟ್ರಿಯ ರನ್​ ಬಾರಿಸಿದ್ದಾರೆ. ಭಾರತ ಪರ ಟೆಸ್ಟ್​ನಲ್ಲಿ ತ್ರಿಶತಕ ​ ಬಾರಿಸಿದ ಮೊದಲ ಆಟಗಾರ ಎಂಬ ಹಿರಿಮೆಯೂ ಇವರದ್ದಾಗಿದೆ. ಸಚಿನ್​ ಬಳಿಕ ಏಕದಿನದಲ್ಲಿ ದ್ವಿಶತಕ ಬಾರಿಸಿದ ದ್ವಿತೀಯ ಆಟಗಾರನೂ ಹೌದು. ಒಟ್ಟು 251 ಏಕದಿನ ಪಂದ್ಯ ಆಡಿ 8273 ರನ್​ ಬಾರಿಸಿದ್ದಾರೆ. 15 ಶತಕ, 1 ದ್ವಿಶತಕ ಮತ್ತು 38 ಅರ್ಧಶತಕ ಬಾರಿಸಿದ್ದಾರೆ. ಟೆಸ್ಟ್​ನಲ್ಲಿ 8586 ರನ್​, 23 ಶತಕ 6 ದ್ವಿಶತಕ 2 ತ್ರಿಶತಕ ಬಾರಿಸಿದ್ದಾರೆ.

ಟಿ20 ಕ್ರಿಕೆಟ್​ನಲ್ಲಿ ಭಾರತ ತಂಡವನ್ನು ಮೊದಲ ಬಾರಿ ನಾಯಕನಾಗಿ ಮುನ್ನಡೆಸಿದ ಕೀರ್ತಿಯೂ ಇವರದ್ದಾಗಿದೆ. 19 ಟಿ20 ಪಂದ್ಯಗಳಿಂದ 394 ರನ್​ ಬಾರಿಸಿದ್ದಾರೆ. ಐಪಿಎಲ್​ನಲ್ಲಿಯೂ ತಮ್ಮ ಬಿರುಸಿನ ಬ್ಯಾಟಿಂಗ್​ ಮೂಲಕ 2728 ರನ್​ ಬಾರಿಸಿದ್ದಾರೆ. 2 ಶತಕ ಕೂಡ ಒಳಗೊಂಡಿದೆ.

Continue Reading

ಕ್ರೀಡೆ

IPL 2024: ಸಿಕ್ಸರ್​ನಿಂದ ಗಾಯಗೊಂಡ ಕ್ಯಾಮೆರಮನ್​ಗೆ ವಿಡಿಯೊ ಮೂಲಕ ಕ್ಷಮೆ ಕೇಳಿದ ರಿಷಭ್​ ಪಂತ್​​

IPL 2024: ಮೋಹಿತ್​ ಶರ್ಮ ಎಸೆತ ಅಂತಿಮ ಓವರ್​ನಲ್ಲಿ ಪಂತ್​ 4 ಸಿಕ್ಸರ್​ ಮತ್ತು ಒಂದು ಬೌಂಡರಿ ಸಿಡಿಸಿ 31 ರನ್ ದೋಚಿದರು. ಹೀಗಾಗಿ ಅಂತಿಮ 18 ಎಸೆತಗಳಲ್ಲಿ ಡೆಲ್ಲಿಗೆ ಬರೋಬ್ಬರಿ 67 ರನ್​ ಹರಿದು ಬಂತು. ಕೇವಲ 43 ಎಸೆತ ಎದುರಿಸಿದ ಪಂತ್​ ಬರೋಬ್ಬರಿ 8 ಸಿಕ್ಸರ್​ ಮತ್ತು 5 ಬೌಂಡರಿ ಸಿಡಿಸಿ ಅಜೇಯ 88 ರನ್​ ಬಾರಿಸಿದರು.

VISTARANEWS.COM


on

IPL 2024
Koo

ನವದೆಹಲಿ: ಗುಜರಾತ್​ ಟೈಟಾನ್ಸ್(DC vS GT)​ ವಿರುದ್ಧ ವಿಸ್ಫೋಟಕ ಬ್ಯಾಟಿಂಗ್​ ನಡೆಸಿ ಸಿಕ್ಸರ್​ಗಳ ಸುರಿಮಳೆ ಸುರಿಸಿದ್ದ ರಿಷಭ್​ ಪಂತ್(Rishabh Pant)​ ಅವರ ಒಂದು ಸಿಕ್ಸರ್​ ಕ್ಯಾಮೆರಮನ್​ಗೆ ತಲುಲಿದೆ. ಈ ಚೆಂಡಿನೇಡಿಗೆ ಗಾಯಗೊಂಡಿರುವ ಕ್ಯಾಮೆರಮನ್​ಗೆ ಪಂತ್​ ಅವರು ಪಂದ್ಯದ ಬಳಿಕ ಕ್ಷಮೆ ಕೇಳಿ ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ. ಈ ವಿಡಿಯೊವನ್ನು ಐಪಿಎಲ್​(IPL 2024) ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ.

ಪಂದ್ಯದ ಮುಕ್ತಾಯದ ಬಳಿಕ ರಿಷಭ್​ ಪಂತ್​ ಮತ್ತು ತಂಡದ ಹೆಡ್​ ಕೋಚ್​ ರಿಕಿ ಪಾಂಟಿಂಗ್​ ಈ ಘಟನೆಯ ಬಗ್ಗೆ ಮಾತನಾಡಿ, ಪಂತ್ ಅವರು ನಾನು ಉದ್ದೇಶ ಪೂರ್ವಕವಾಗಿ ಇದನ್ನು ಮಾಡಿಲ್ಲ. ಕ್ಷಮಿಸು ಸಹೋದರ, ಆದಷ್ಟು ಶೀಘ್ರವಾಗಿ ಚೇತರಿಕೆ ಕಾಣುವಂತಾಗಲಿ ಎಂದು ಕ್ಯಾಮೆರಮೆನ್​ಗೆ ಕ್ಷಮೆ ಕೇಳಿದ್ದಾರೆ.

44 ರನ್​ಗೆ ಮೂರು ವಿಕೆಟ್​ ಕಳೆದುಕೊಂಡ ವೇಳೆ ಕ್ರೀಸ್​ಗಿಳಿದ ಎಡಗೈ ಬ್ಯಾಟರ್​ಗಳಾದ ರಿಷಭ್​ ಪಂತ್​ ಮತ್ತು ಅಕ್ಷರ್​ ಪಟೇಲ್​ ಆರಂಭದಲ್ಲಿ ತಾಳ್ಮೆಯುತ ಬ್ಯಾಟಿಂಗ್​ ನಡೆಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಅರ್ಧಶತಕ ಪೂರ್ತಿಗೊಂಡ ತಕ್ಷಣ ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸಿ ಗುಜರಾತ್​ ಬೌಲರ್​ಗಳ ಮೇಲೆ ಸವಾರಿ ಮಾಡಿದರು. 17ನೇ ಓವರ್​ ತನಕ ಕ್ರೀಸ್​ನಲ್ಲಿದ್ದ ಅಕ್ಷರ್​ ಪಟೇಲ್ 5 ಬೌಂಡರಿ ಮತ್ತು 4 ಸಿಕ್ಸರ್​ ನೆರವಿನಿಂದ 66 ರನ್​ ಚಚ್ಚಿದರು. ಈ ಜೋಡಿ 4ನೇ ವಿಕೆಟ್​ಗೆ 113 ರನ್​ ಒಟ್ಟುಗೂಡಿಸಿತು.

ಮೋಹಿತ್​ ಶರ್ಮ ಎಸೆತ ಅಂತಿಮ ಓವರ್​ನಲ್ಲಿ ಪಂತ್​ 4 ಸಿಕ್ಸರ್​ ಮತ್ತು ಒಂದು ಬೌಂಡರಿ ಸಿಡಿಸಿ 31 ರನ್ ದೋಚಿದರು. ಹೀಗಾಗಿ ಅಂತಿಮ 18 ಎಸೆತಗಳಲ್ಲಿ ಡೆಲ್ಲಿಗೆ ಬರೋಬ್ಬರಿ 67 ರನ್​ ಹರಿದು ಬಂತು. ಕೇವಲ 43 ಎಸೆತ ಎದುರಿಸಿದ ಪಂತ್​ ಬರೋಬ್ಬರಿ 8 ಸಿಕ್ಸರ್​ ಮತ್ತು 5 ಬೌಂಡರಿ ಸಿಡಿಸಿ ಅಜೇಯ 88 ರನ್​ ಬಾರಿಸಿದರು.

4 ರನ್​ ಅಂತರದಿಂದ ಗೆದ್ದ ಡೆಲ್ಲಿ

ಇಲ್ಲಿನ ಅರುಣ್​ ಜೇಟ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್​ ರಿಷಭ್​ ಪಂತ್​(88*) ಮತ್ತು ಅಕ್ಷರ್​ ಪಟೇಲ್​(66) ಅವರ ಸಮಯೋಚಿತ ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 224 ರನ್​ ಪೇರಿಸಿತು. ಜವಾಬಿತ್ತ ಗುಜರಾತ್ ದಿಟ್ಟ ಹೋರಾಟ ನಡೆಸಿದರೂ 8 ವಿಕೆಟ್​ಗೆ 220 ರನ್​ ಬಾರಿಸಿ ಸಣ್ಣ ಅಂತರದಿಂದ ​ಸೋಲೊಪ್ಪಿಕೊಂಡಿತು. ಡೆಲ್ಲಿ ಈ ಗೆಲುವಿನ ಮೂಲಕ ಪ್ಲೇ ಆಫ್​ ರೇಸ್​ ಜೀವಂತವಾಗಿದೆ.

Continue Reading

ಕ್ರೀಡೆ

leopard Attack: ಚಿರತೆ ದಾಳಿ; ಜಿಂಬಾಬ್ವೆ ಮಾಜಿ ಕ್ರಿಕೆಟಿಗನಿಗೆ ತೀವ್ರ ಗಾಯ

Guy Whittal: ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ವಿಟ್ಟಲ್ ಅವರ ಫೋಟೋಗಳನ್ನು ಅವರ ಪತ್ನಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ವಿಟ್ಟಲ್ ಅವರು ಬ್ಯಾಂಡೇಜ್ ಮತ್ತು ರಕ್ತಸಿಕ್ತ ಅಂಗಿಯನ್ನು ಧರಿಸಿರುವುದನ್ನು ಕಾಣಬಹುದಾಗಿದೆ. ಸದ್ಯ ಅವರು ಮಿಲ್ಟನ್ ಪಾರ್ಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

VISTARANEWS.COM


on

leopard Attack
Koo

ಬಫಲೋ( ಜಿಂಬಾಬ್ವೆ): ಜಿಂಬಾಬ್ವೆಯ ಮಾಜಿ ಖ್ಯಾತ ಕ್ರಿಕೆಟಿಗ ಗೈ ವಿಟ್ಟಲ್(Guy Whittall) ಅವರು ಚಿರತೆ(Leopard) ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತೀವ್ರ ಗಾಯಗೊಂಡ ಅವರನ್ನು ಜಿಂಬಾಬ್ವೆಯ ಬಫಲೋ ರೇಂಜ್‌ನಿಂದ ವಿಮಾನದ ಮೂಲಕ ತುರ್ತು ಶಸ್ತ್ರಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಯಿತು.

ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ವಿಟ್ಟಲ್ ಅವರ ಫೋಟೋಗಳನ್ನು ಅವರ ಪತ್ನಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ವಿಟ್ಟಲ್ ಅವರು ಬ್ಯಾಂಡೇಜ್ ಮತ್ತು ರಕ್ತಸಿಕ್ತ ಅಂಗಿಯನ್ನು ಧರಿಸಿರುವುದನ್ನು ಕಾಣಬಹುದಾಗಿದೆ. ಸದ್ಯ ಅವರು ಮಿಲ್ಟನ್ ಪಾರ್ಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಟ್ಟಲ್​ ಅವರು ಕಾಡುಪ್ರಾಣಿಯಿಂದ ಸಮಸ್ಯೆ ಎದುರಿಸುತ್ತಿರುವುದು ಇದೇ ಮೊದಲಲ್ಲ. 2013 ರಲ್ಲಿ, 8 ಅಡಿ ಉದ್ದದ ಮೊಸಳೆ ದಾಳಿಯಿಂದಲೂ ಪಾರಾಗಿದ್ದರು. ಈ ಮೊಸಳೆ ವಿಟ್ಟಲ್​ ಅವರ ಹಾಸಿಗೆಯ ಕೆಳಗೆ ಅವಿತಿತ್ತು. 150 ಕೆ.ಜಿ ತೂಕದ ಮೊಸಳೆ ಜಿಂಬಾಬ್ವೆಯ ಹುಮಾನಿ ಲಾಡ್ಜ್‌ಗೆ ನುಸುಳಿತು ಮತ್ತು ಇಡೀ ರಾತ್ರಿ ಸದ್ದಿಲ್ಲದೆ ಮಲಗಿತು. ಮರುದಿನ ವಿಟ್ಟಲ್​ ಬೆಳಗ್ಗೆ ಅಡುಗೆಮನೆಯಲ್ಲಿ ಉಪಾಹಾರ ಸೇವಿಸುತ್ತಿದ್ದ ವೇಳೆ ಮನೆಕೆಲಸದವಳ ಭಯಭೀತ ಕಿರುಚಾಟ ಕೇಳಿದಾಗ ಮೊಸಳೆ ಪತ್ತೆಯಾಗಿತ್ತು.

ಇದನ್ನೂ ಓದಿ IPL 2024: ಧೋನಿ, ಚೆನ್ನೈ ಪಂದ್ಯ ನೋಡಲು ದೆಹಲಿ ವರೆಗೂ ನಡೆದುಕೊಂಡು ಹೋಗುವೆ ಎಂದ ಶತಾಯುಷಿ ಅಭಿಮಾನಿ; ವಿಡಿಯೊ ವೈರಲ್​

51 ವರ್ಷದ ವಿಟ್ಟಲ್ ಜಿಂಬಾಬ್ವೆ ಪರ 46 ಟೆಸ್ಟ್ ಮತ್ತು 147 ಏಕದಿನ ಪಂದ್ಯಗಳನ್ನಾಡಿದ್ದಾರೆ. ಬ್ಯಾಟಿಂಗ್​ ಆಲ್​ರೌಂಡರ್​​ ಆಗಿದ್ದ ಇವರು ಟೆಸ್ಟ್​ನಲ್ಲಿ 2207 ರನ್​, ಏಕದಿನದಲ್ಲಿ 2705 ರನ್​ ಬಾರಿಸಿದ್ದಾರೆ. ಟೆಸ್ಟ್​ನಲ್ಲಿ 4 ಶತಕ ಕೂಡ ಬಾರಿಸಿದ್ದಾರೆ. ಬೌಲಿಂಗ್​ನಲ್ಲಿಯೂ ಉತ್ತಮ ಪ್ರದರ್ಶನ ತೋರಿರುವ ಇವರು, ಟೆಸ್ಟ್​ನಲ್ಲಿ 51 ಮತ್ತು ಏಕದಿನದಲ್ಲಿ 88 ವಿಕೆಟ್​ ಕಿತ್ತಿದ್ದಾರೆ.

Continue Reading

South Cinema

Tamannaah Bhatia: ಐಪಿಎಲ್ ಸ್ಟ್ರೀಮಿಂಗ್ ಪ್ರಕರಣ; ನಟಿ ತಮನ್ನಾಗೆ ಸಮನ್ಸ್‌!

Tamannaah Bhatia: ಏಪ್ರಿಲ್ 23ರಂದು ನಟ ಸಂಜಯ್ ದತ್ ಅವರಿಗೂ ಈ ಸಂಬಂಧ ಸಮನ್ಸ್ ನೀಡಲಾಗಿತ್ತು. ಆದರೆ ಅವರು ಹಾಜರಾಗಿರಲಿಲ್ಲ. ತಾವು ಭಾರತದಲ್ಲಿ ಇಲ್ಲ ಎಂದು ವಿಚಾರಣೆಗೆ ಹಾಜಾರಾಗಲು ಹೊಸ ಡೇಟ್‌ ನೀಡಲು ಕೋರಿದ್ದರು. ಇದೀಗ ನಟಿ ತಮನ್ನಾಗೆ ಏಪ್ರಿಲ್ 29ರಂದು ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ಆದೇಶ ನೀಡಲಾಗಿದೆ ಎನ್ನಲಾಗಿದೆ.

VISTARANEWS.COM


on

Tamannaah Bhatia Summoned in Illegal IPL Streaming Case
Koo

ಮುಂಬೈ: ಫೇರ್‌ಪ್ಲೇ ಆ್ಯಪ್‌ನಲ್ಲಿ ಅಕ್ರಮ ಐಪಿಎಲ್ ಪಂದ್ಯಗಳ ಸ್ಟ್ರೀಮಿಂಗ್ (Illegal IPL Streaming Case) ಪ್ರಕರಣದಲ್ಲಿ ಟಾಲಿವುಡ್‌ ನಟಿ ತಮನ್ನಾ ಭಾಟಿಯಾ (Tamannaah Bhatia) ಹೆಸರು ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯನ್ನು ಮಹಾರಾಷ್ಟ್ರ ಸೈಬರ್ ಸೆಲ್ (Maharashtra Cyber Cell ) ವಿಚಾರಣೆಗೆ ಕರೆಸಿದೆ ಎಂದು ಮೂಲಗಳು ತಿಳಿಸಿವೆ. ಏಪ್ರಿಲ್ 29ರಂದು ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ಆದೇಶ ನೀಡಲಾಗಿದೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಂಜಯ್ ದತ್ ಹೆಸರು ಕೂಡ ಈ ಮುಂಚೆ ಕೇಳಿಬಂದಿತ್ತು.

ಫೇರ್‌ಪ್ಲೇ ಆ್ಯಪ್‌ನಲ್ಲಿ (Fairplay App) ಐಪಿಎಲ್ 2023ರ ಅಕ್ರಮ ಸ್ಟ್ರೀಮಿಂಗ್‌ಗೆ ಸಂಬಂಧಿಸಿದಂತೆ ವಯಾಕಾಮ್‌ಗೆ ಕೋಟ್ಯಂತರ ರೂ. ನಷ್ಟ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸೈಬರ್ ಸೆಲ್‌ ನಟಿ ತಮನ್ನಾ ಭಾಟಿಯಾ ಅವರನ್ನು ವಿಚಾರಣೆಗೆ ಕರೆದಿದೆ. ಏಪ್ರಿಲ್ 29ರಂದು ಮಹಾರಾಷ್ಟ್ರ ಸೈಬರ್‌ಗೆ ಹಾಜರಾಗುವಂತೆ ನಟಿಗೆ ತಿಳಿಸಲಾಗಿದೆ ಎಂದು ಎಎನ್‌ಐ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಏಪ್ರಿಲ್ 23ರಂದು ನಟ ಸಂಜಯ್ ದತ್ ಅವರಿಗೂ ಈ ಸಂಬಂಧ ಸಮನ್ಸ್ ನೀಡಲಾಗಿತ್ತು. ಆದರೆ ಅವರು ಹಾಜರಾಗಿರಲಿಲ್ಲ. ತಾವು ಭಾರತದಲ್ಲಿ ಇಲ್ಲ ಎಂದು ವಿಚಾರಣೆಗೆ ಹಾಜಾರಾಗಲು ಹೊಸ ಡೇಟ್‌ ನೀಡಲು ಕೋರಿದ್ದರು.

ಇದನ್ನೂ ಓದಿ: Tamannaah Bhatia : ಪಾಕ್​ ಕ್ರಿಕೆಟಿಗ ರಜಾಕ್ ಜತೆ ಚಿನ್ನದ ಮಳಿಗೆಗೆ ಹೋದ ಕಹಿ ಘಟನೆ ನೆನೆದ ತಮನ್ನಾ

ಫೇರ್ ಪ್ಲೇ ಪ್ಲಾಟ್‌ಫಾರ್ಮ್ ಬೆಟ್ಟಿಂಗ್‌ ಅಪ್ಲಿಕೇಶನ್‌ ಆಗಿದೆ. ವಯಾಕಾಮ್‌ 18 ಐಪಿಎಲ್‌ ಅಧಿಕೃತ ಪ್ರಸಾರ ಹಕ್ಕುಗಳನ್ನು ಹೊಂದಿದೆ. ಬೆಟ್ಟಿಂಗ್ ಅಪ್ಲಿಕೇಶನ್ ಫೇರ್ ಪ್ಲೇ ಪ್ಲಾಟ್‌ಫಾರ್ಮ್ ಅಕ್ರಮವಾಗಿ ಪಂದ್ಯಗಳನ್ನು ಸ್ಟ್ರೀಮ್ ಮಾಡುತ್ತಿದೆ ಎಂದು ವಯಾಕಾಮ್‌ ಎಫ್‌ಐಆರ್‌ ದಾಖಲಿಸಿತ್ತು . ವಯಾಕಾಮ್‌ 18ಗೆ 100 ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗಿದೆ ಎಂದು ವರದಿಯಾಗಿದೆ. ಎಫ್‌ಐಆರ್ ದಾಖಲಿಸಿದ ಬಳಿಕ ಬಾದ್‌ಶಾ, ಸಂಜಯ್ ದತ್, ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ತಮನ್ನಾ ಸೇರಿದಂತೆ ಹಲವಾರು ತಾರೆಯರನ್ನು ವಿಚಾರಣೆಗೆ ಕರೆಯಲಾಯಿದೆ ಎಂದು ವರದಿಯಾಗಿದೆ. ಡಿಸೆಂಬರ್ 2023 ರಲ್ಲಿ, ಬೆಟ್ಟಿಂಗ್ ಅಪ್ಲಿಕೇಶನ್‌ನ ಉದ್ಯೋಗಿಯನ್ನು ಬಂಧಿಸಲಾಯಿತ್ತು.

Continue Reading
Advertisement
Neha Murder case CID Officer
ಹುಬ್ಬಳ್ಳಿ33 seconds ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Virender Sehwag
ಕ್ರೀಡೆ9 mins ago

Virender Sehwag: ಬಡ ದೇಶದ ಕ್ರಿಕೆಟ್​ ಲೀಗ್​ ಆಡಲ್ಲ ಎಂದ ವೀರೇಂದ್ರ ಸೆಹವಾಗ್; ಕಾರಣವೇನು?

Guru Raghavendra and Vasishta Co operative Bank fraud handed over to SIT says DK Shivakumar
ಬೆಂಗಳೂರು11 mins ago

Bank fraud: ಗುರು ರಾಘವೇಂದ್ರ, ವಸಿಷ್ಠ ಸಹಕಾರ ಬ್ಯಾಂಕ್‌ಗಳ ಹಗರಣ ಎಸ್‌ಐಟಿ ಹೆಗಲಿಗೆ; ಶೀಘ್ರ ಕ್ರಮವೆಂದ ಡಿಕೆಶಿ

Shakhahaari Movie In OTT amzon Prime
ಸ್ಯಾಂಡಲ್ ವುಡ್17 mins ago

Shakhahaari Movie: ಒಟಿಟಿಗೆ ಎಂಟ್ರಿ ಕೊಡ್ತಿದೆ ʻಶಾಖಾಹಾರಿʼ ಸಿನಿಮಾ! ಸ್ಟ್ರೀಮಿಂಗ್‌ ಎಲ್ಲಿ? ಯಾವಾಗ?

Xiaomi EV
ಆಟೋಮೊಬೈಲ್18 mins ago

Xiaomi EV: ತಿಂಗಳಲ್ಲಿ 75 ಸಾವಿರ ಆರ್ಡರ್ ಸ್ವೀಕರಿಸಿದ ಕ್ಸಿಯೋಮಿ ಎಸ್‌ಯು 7 ಎಲೆಕ್ಟ್ರಿಕ್‌ ಕಾರು; ಟೆಸ್ಲಾಗಿಂತ ಅಗ್ಗ!

Nilkrishna Gajare JEE main 2024 result AIR 1
ಅಂಕಣ26 mins ago

JEE Main 2024 Result: ದೇಶಕ್ಕೇ ಮೊದಲ ರ‍್ಯಾಂಕ್ ಪಡೆದ ರೈತನ ಮಗ! ಈತನ ಯಶಸ್ಸು ಸ್ಫೂರ್ತಿದಾಯಕ

Aircraft Crash
ದೇಶ32 mins ago

Aircraft Crash: ಭಾರತೀಯ ವಾಯುಪಡೆಯ ವಿಮಾನ ಪತನ; ಭಾಗಗಳು ಸುಟ್ಟು ಭಸ್ಮ

Lok Sabha Election 2024 vote for better future and 98 year old woman dies when returning officer arrives at home to cast her vote
ಪ್ರಮುಖ ಸುದ್ದಿ43 mins ago

Lok Sabha Election 2024: ಮತ ಹಾಕಿಸಿಕೊಳ್ಳಲು ಚುನಾವಣಾಧಿಕಾರಿಗಳು ಮನೆಗೆ ಬಂದಾಗಲೇ 98ರ ವೃದ್ಧೆ ಸಾವು!

Horlicks Label
ದೇಶ46 mins ago

Horlicks Label: ಹಾರ್ಲಿಕ್ಸ್‌ ಇನ್ನು ಹೆಲ್ತ್‌ ಡ್ರಿಂಕ್ಸ್‌ ಅಲ್ಲ ಎಂದ ಹಿಂದುಸ್ತಾನ್‌ ಯುನಿಲಿವರ್;‌ ಕಾರಣ ಏನು?

Salaar Movie In star suvarna
ಕಿರುತೆರೆ47 mins ago

Salaar Movie: ಕಿರುತೆರೆಗೆ ಬಂದೇ ಬಿಡ್ತು ಬ್ಲಾಕ್ ಬಸ್ಟರ್ ಸಿನಿಮಾ ‘ಸಲಾರ್’!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder case CID Officer
ಹುಬ್ಬಳ್ಳಿ34 seconds ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20242 hours ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು3 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ3 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ4 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

ಟ್ರೆಂಡಿಂಗ್‌