ಗದಗ: ಬಿಜೆಪಿ ಸಂಘ ಪರಿವಾರದ (Sangh Parivar) ಎಬಿವಿಪಿ (ABVP), ಬಜರಂಗ ದಳ (Bajrang Dal), ಬಿಜೆಪಿ ಯುವ ಮೋರ್ಚಾ ಎಲ್ಲ ಸುಳ್ಳಿನ ಕಾರ್ಖಾನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಕಿಡಿಕಾರಿದರು.
ಭಾರತ ಉಳಿಯಬೇಕೆಂದರೆ ಹಿಂದು ರಾಷ್ಟ್ರವಾಗಬೇಕು ಎಂದು ಪೇಜಾವರ ಶ್ರೀಗಳ (Pejawar Sri) ಹೇಳಿಕೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಹಿಂದು ರಾಷ್ಟ್ರ ಬಿಜೆಪಿ ಸಿದ್ಧಾಂತವಾಗಿದೆ. ಭಾರತ ಉಳಿಯಬೇಕೆಂದರೆ ಹಿಂದು ರಾಷ್ಟ್ರವಾಗಬೇಕು ಎಂಬುದು ಬಿಜೆಪಿಯ ಘೋಷವಾಕ್ಯವಾಗಿದೆ. ಹಿಂದು ರಾಷ್ಟ್ರವಾಗಬೇಕೆಂದು ಜನಸಂಘ 1950ರಲ್ಲಿ ಪ್ರಾರಂಭವಾದಾಗಲೇ ಹೇಳಲಾಗಿತ್ತು ಎಂದು ಹೇಳಿದರು.
ಇದನ್ನೂ ಓದಿ: Lok Sabha Election 2024: ಸಿಎಂ ಸಿದ್ದರಾಮಯ್ಯ- ಶೆಟ್ಟರ್ ರಹಸ್ಯ ಮಾತುಕತೆ; ಲೋಕಸಭೆಗೆ ಮಾಜಿ ಸಿಎಂ?
ನಮ್ಮ ದೇಶದಲ್ಲಿ ಬರೀ ಹಿಂದುಗಳು ಮಾತ್ರ ನೆಲೆಸಿಲ್ಲ. ಕ್ರಿಶ್ಚಿಯನ್, ಮುಸ್ಲಿಂ, ಜೈನರು, ಭೌದ್ಧರು ಇದ್ದಾರೆ. ನಮ್ಮ ದೇಶ ಬಹುತ್ವದ ದೇಶ. ಬರೀ ಹಿಂದುಗಳ ರಾಷ್ಟ್ರವನ್ನಾಗಿ ಮಾಡಿದರೆ ಆಗುವುದಿಲ್ಲ. ಅದು ಬಿಜೆಪಿಯ ಸಿದ್ಧಾಂತವಾಗಿದೆ. ದೇಶವನ್ನು ಹಿಂದುಗಳ ರಾಷ್ಟ್ರ ಮಾಡುವುದಕ್ಕೆ ಆಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
1925 ರಲ್ಲಿ ಆರ್‌ಎಸ್‌ಎಸ್ ಅನ್ನು ಹೆಗಡೆ ವಾರ್ ಸ್ಥಾಪನೆ ಮಾಡಿದ್ದರು. ಬಿಜೆಪಿಯವರಿಗೆ ಕೂಡ ಇದು ತಿಳಿದಿಲ್ಲ. ಸುಮ್ಮನೆ ಬುರುಡೆ ಹೊಡೆಯುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಎಬಿವಿಪಿಗೆ ಸುಳ್ಳು ಹೇಳುವುದೇ ಕೆಲಸ
ವಿದ್ಯಾರ್ಥಿಗಳಿಗೆ ಶಕ್ತಿ ಯೋಜನೆಯಿಂದ ತೊಂದರೆಯಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಎಬಿವಿಪಿ ಬಿಜೆಪಿಯ ವಿದ್ಯಾರ್ಥಿ ಸಂಘಟನೆಯಾಗಿದ್ದು, ಸುಳ್ಳು ಹೇಳುವುದೇ ಅವರ ಕೆಲಸ ಎಂದು ಹೇಳಿದರು.
ಘೋಷಿಸಿರುವ ಯೋಜನೆಗಳಿಗೆ ಅನುದಾನದ ಕೊರತೆ ಇಲ್ಲ
ಕಾಂಗ್ರೆಸ್ ಪ್ರಮುಖ 5 ಗ್ಯಾರಂಟಿ ಯೋಜನೆಯಲ್ಲೊಂದಾದ ಶಕ್ತಿ ಯೋಜನೆಗೆ ಸರ್ಕಾರ ಮೀಸಲಿಟ್ಟ ಹಣ ಪೂರ್ಣಗೊಂಡಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಯೋಜನೆಗೆ ಎಷ್ಟು ಹಣ ಖರ್ಚಾಗುತ್ತದೆಯೋ ಅಷ್ಟು ಹಣ ಒದಗಿಸಲಾಗುವುದು. ಶಕ್ತಿ ಯೋಜನೆಗೆ ಪ್ರತಿ ವರ್ಷ ವೆಚ್ಚವಾಗುವ ಹಣವನ್ನು ಕೆಎಸ್‌ಆರ್‌ಟಿಸಿಗೆ ಸರ್ಕಾರ ಭರಿಸಲಿದೆ. ಬಸ್ಸುಗಳ ದುರಸ್ತಿ ಹಾಗೂ ಹೊಸ ಬಸ್ಸುಗಳ ಖರೀದಿಯೂ ಆಗಲಿದೆ ಎಂದರು.
ರಿಪೇರಿಗೆ ಅನುದಾನವನ್ನು ಒದಗಿಸಲಾಗಿದೆ. ಅನುದಾನವಿಲ್ಲ ಎಂದಿರುವ ಅಧಿಕಾರಿಗಳ ಹೆಸರು ನೀಡಿದರೆ ಪರಿಶೀಲನೆ ನಡೆಸಲಾಗುವುದು. ನಮ್ಮ ಸರ್ಕಾರದಲ್ಲಿ ಘೋಷಿಸಿರುವ ಯೋಜನೆಗಳಿಗೆ ಅನುದಾನದ ಕೊರತೆ ಇಲ್ಲ .
ಅಭಿವೃದ್ಧಿ ಕೆಲಸಗಳು ನಿಂತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: School Teacher: ಹೆಣ್ಣು ಮಕ್ಕಳು ಬಟ್ಟೆ ಬದಲಿಸುವಾಗ ವಿಡಿಯೊ; ಯಲವಳ್ಳಿ ವಸತಿ ಶಾಲೇಲಿ ಮತ್ತೊಂದು ಹೀನ ಕೃತ್ಯ
ಕೊಟ್ಟ ಮಾತಿನಂತೆ ನಡೆದಿದ್ದೇವೆ
ನವೆಂಬರ್ ಅಂತ್ಯದವರೆಗೆ ಹಿಂದಿನ ಸರ್ಕಾರ 70,814 ಕೋಟಿ ರೂ.ಗಳನ್ನು ಅಭಿವೃದ್ಧಿಗೆ ಖರ್ಚು ಮಾಡಿತ್ತು. ನಮ್ಮ ಸರ್ಕಾರ 73,928 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ. ಹಣವನ್ನು ಖರ್ಚು ಮಾಡಿಲ್ಲ ಎನ್ನುವುದು ಸುಳ್ಳು. 3000 ಕೋಟಿ ರೂ.ಗಳಷ್ಟು ಮೊತ್ತವನ್ನು ಹೆಚ್ಚು ವೆಚ್ಚ ಮಾಡಿದ್ದೇವೆ. ಮೇ 20ಕ್ಕೆ ನಾವು ಸರ್ಕಾರ ರೂಪಿಸಿದ್ದೆವು. ಬಜೆಟ್ ಮಂಡಿಸಿದ್ದು ಜುಲೈನಲ್ಲಾಗಿತ್ತು. ಆಗಸ್ಟ್ 1 ರಿಂದ ಯೋಜನೆ ಜಾರಿಯಾಗಿವೆ. 4 ಗ್ಯಾರಂಟಿಗಳನ್ನು ಜಾರಿ ಮಾಡಿದ್ದು, 5ನೇ ಗ್ಯಾರಂಟಿಯನ್ನು ಜನವರಿಯಲ್ಲಿ ಪ್ರಾರಂಭವಾಗಲಿದೆ. ಕೊಟ್ಟ ಮಾತಿನಂತೆ ನಡೆದಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.