Site icon Vistara News

ತೇಜಸ್ವಿ ವೈರಲ್‌ ಆಡಿಯೊ ಫಾಲೋಅಪ್‌: ಚಿಕ್ಕಮಗಳೂರು ಯುವ ಮೋರ್ಚಾ ನೂತನ ಅಧ್ಯಕ್ಷರಾಗಿ ಸಂತೋಷ್‌ ಕೋಟ್ಯಾನ್‌

santhosh BJP chikkamagaluru

ಚಿಕ್ಕಮಗಳೂರು: ʻಕಾಂಗ್ರೆಸ್‌ ಸರಕಾರ ಇದ್ದಿದ್ರೆ ಕಲ್ಲು ಹೊಡೆಯಬಹುದಿತ್ತುʼ ಎಂಬ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಅವರ ಆಡಿಯೊ ವೈರಲ್‌ ಆದ ಬೆನ್ನಿಗೇ ಚಿಕ್ಕಮಗಳೂರು ಬಿಜೆಪಿ ಯುವ ಮೋರ್ಚಾದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ.

ಯುವಮೋರ್ಚಾ ಜಿಲ್ಲಾಧ್ಯಕ್ಷರಾಗಿದ್ದ ಸಂದೀಪ್‌ ಅರಳಗುಂಡಿ ಅವರನ್ನು ಬದಲಾಯಿಸಿ ಅವರ ಸ್ಥಾನಕ್ಕೆ ಈಗ ಸಂತೋಷ್‌ ಕೋಟ್ಯಾನ್‌ ಅವರನ್ನು ನೇಮಿಸಲಾಗಿದೆ.

ಪ್ರವೀಣ್‌ ನೆಟ್ಟಾರ್‌ ಅವರ ಹತ್ಯೆಯಾದ ಸಂದರ್ಭದಲ್ಲಿ ಯುವ ಮೋರ್ಚಾ ಪದಾಧಿಕಾರಿಗಳು ರಾಜೀನಾಮೆ ನೀಡುವ ಪರ್ವ ಆರಂಭಗೊಂಡಿತ್ತು. ಆ ಸಂದರ್ಭದಲ್ಲಿ ಚಿಕ್ಕಮಗಳೂರಿನಲ್ಲೂ ಹಲವು ರಾಜೀನಾಮೆ ನೀಡಿದ್ದರು. ಆಗ ತೇಜಸ್ವಿ ಸೂರ್ಯ ಅವರು ಚಿಕ್ಕಮಗಳೂರು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂದೀಪ್‌ಗೆ ಕರೆ ಮಾಡಿ ರಾಜೀನಾಮೆ ಹಿಂಪಡೆಯುವಂತೆ ಮನವಿ ಮಾಡಿದ್ದರು. ಆದರೆ, ಸಂದೀಪ್‌ ಜನರ ಮನೋಸ್ಥಿತಿಯನ್ನು ಮೀರುವುದು ಕಷ್ಟ ಎಂದಿದ್ದರು. ಆಗ ಅವರನ್ನು ಸಮಾಧಾನ ಮಾಡುತ್ತಾ ತೇಜಸ್ವಿ ಸೂರ್ಯ ಅವರು ʻʻಕಾಂಗ್ರೆಸ್‌ ಸರಕಾರ ಇದ್ದಿದ್ದರೆ ಕಲ್ಲಾದರೂ ಹೊಡೆಯಬಹುದಿತ್ತುʼʼ ಎಂದು ಹೇಳಿದ್ದರು. ತೇಜಸ್ವಿ ಮತ್ತು ಸಂದೀಪ್‌ ನಡುವಿನ ಈ ಖಾಸಗಿ ಸಂವಾದ ಒಂದೇ ದಿನದಲ್ಲಿ ವೈರಲ್‌ ಆಗಿತ್ತು.

ಈ ಆಡಿಯೊ ತೇಜಸ್ವಿ ಅವರಿಗೆ ಮತ್ತು ಬಿಜೆಪಿಗೆ ಭಾರಿ ಮುಖಭಂಗ ಉಂಟು ಮಾಡಿತ್ತು. ಇದಕ್ಕೊಂದು ತಾರ್ತಿಕ ಅಂತ್ಯ ನೀಡುವುದಕ್ಕಾಗಿ ಸಂದೀಪ್‌ ಅರಳಗುಂಡಿ ಅವರನ್ನು ಹುದ್ದೆಯಿಂದ ತೆಗೆದು ಹಾಕಲಾಗಿದೆ. ಅವರ ಸ್ಥಾನಕ್ಕೆ ಸಂತೋಷ್‌ ಕೋಟ್ಯಾನ್‌ ಅವರನ್ನು ನೇಮಿಸಲಾಗಿದೆ.

ಇದನ್ನೂ ಓದಿ| Audio Leak | ಕಾಂಗ್ರೆಸ್ ಸರ್ಕಾರ ಆಗಿದ್ರೆ ಕಲ್ಲು ಹೊಡೆಯಬಹುದಿತ್ತು ಎಂದ ತೇಜಸ್ವಿ!

Exit mobile version