ಬೆಂಗಳೂರು: ಕಾಂಗ್ರೆಸ್ ಪಕ್ಷದ ಭದ್ರ ಕೋಟೆಯಾಗಿರುವ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ.. ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿಯಾಗಿರುವ ಬಿಜೆಪಿಯ ಪದ್ಮನಾಭ ರೆಡ್ಡಿ (18127) ವಿರುದ್ಧ 47382 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 2018ರ ಕಳೆದ ಚುನಾವಣೆಯಲ್ಲಿ ಮಾಜಿ ಸಚಿವರಾಗಿರುವ ಕಾಂಗ್ರೆಸ್ ಪಕ್ಷದ ಕೆ.ಜೆ ಜಾರ್ಜ್ ಗೆಲುವು ಸಾಧಿಸಿದ್ದರು.1,09,955 ಮತ ಪಡೆದಿದ್ದ ಅವರು ಬಿಜೆಪಿಯ ಎನ್ ಎಮ್ ರೆಡ್ಡಿ ವಿರುದ್ಧ 53,304 ಮತಗಳ ಅಂತರದಿಂದ ವಿಜಯ ಸಾಧಿಸಿದ್ದರು.
ಬಿಬಿಎಂಪಿಯ ನಾಗವಾರ, ಎಚ್‌ಬಿಆರ್ ಬಡಾವಣೆ, ಬಾಣಸವಾಡಿ, ಕಮ್ಮನಹಳ್ಳಿ, ಕಾಚರಕನಹಳಿ, ಕಾಡುಗೊಂಡನಹಳ್ಳಿ, ಲಿಂಗರಾಜಪುರ ಹಾಗೂ ಮಾರುತಿ ಸೇವಾನಗರ ಸೇರಿ ಎಂಟು ವಾರ್ಡ್‌ಗಳು ಈ ಕ್ಷೇತ್ರ ವ್ಯಾಪ್ತಿಯಲ್ಲಿವೆ.
ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದಲ್ಲಿ 3.34 ಲಕ್ಷಕ್ಕೂ ಹೆಚ್ಚು ಮತದಾರರಿದ್ದು, ಮುಸ್ಲಿಂ ಹಾಗೂ ಇತರೇ ಸಮುದಾಯದ ಮತಗಳೇ ಇಲ್ಲಿ ನಿರ್ಣಾಯಕವಾಗಿತ್ತು. ಸದ್ಯ ಇಲ್ಲಿ ಮುಸ್ಲಿಂ ಮತದಾರರು 1.20.000 ಇದ್ದು, ಇತರೆ ಸಮುದಾಯದ ಮತಗಳು 56,420 ರಷ್ಟಿವೆ. ಎಸ್‌ಸಿ, ಎಸ್‌ಟಿ 50,000, ಕ್ರಿಶ್ಚಿಯನ್ 40,000, ಕುರುಬ 30,000, ಒಕ್ಕಲಿಗ 20,000 ಮತಗಳಿವೆ. ಇನ್ನು ರೆಡ್ಡಿ ಸಮುದಾಯದ 10,000 ಮತಗಳು ಇದ್ದರೆ, ಲಿಂಗಾಯತರ ಮತ ಸಂಖ್ಯೆ ಕೇವಲ 8,000 ಮಾತ್ರ.
2008ರಲ್ಲಿ ರಚನೆಯಾದ ಈ ಕ್ಷೇತ್ರವನ್ನು ಕಾಂಗ್ರೆಸ್ನ. ಕೆ. ಜೆ ಜಾರ್ಜ್ ಕಳೆದ ಚುನಾವಣೆ ತನಕ ಯಾರಿಗೂ ಬಿಟ್ಟುಕೊಟ್ಟಿರಲಿಲ್ಲ.