Site icon Vistara News

Karnataka CM: 2028ಕ್ಕೆ ಕಾಂಗ್ರೆಸ್‌ನಿಂದ ಸತೀಶ್‌ ಜಾರಕಿಹೊಳಿ CM: ಈಗಲೇ ಟವೆಲ್‌ ಹಾಕಿದ ಸಚಿವ

Satish Jarkiholi

#image_title

ತುಮಕೂರು: ಕಾಂಗ್ರೆಸ್‌ ಸರ್ಕಾರದಲ್ಲಿ ಸಿಎಂ (Karnataka CM) ಸಿದ್ದರಾಮಯ್ಯ ಪೂರ್ಣ ಅವಧಿ ಪೂರ್ಣಗೊಳಿಸುತ್ತಾರೆಯೇ? ದ್ವಿತೀಯಾರ್ಧದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಸಿಎಂ ಆಗುತ್ತಾರೆಯೇ? ದಲಿತ ಸಿಎಂ ಕಥೆ ಏನು? ಎಂಬ ಪ್ರಶನೆಗಳ ನಡುವೆಯೇ ಸಿಎಂ ಹುದ್ದೆಗೆ ಮತ್ತೊಬ್ಬರು ಪ್ರತಿಸ್ಪರ್ಧಿ ಹೊರಹೊಮ್ಮಿದ್ದಾರೆ. ಎಸ್‌ಟಿ ಸಮುದಾಯದಿಂದ ಸತೀಶ್‌ ಜಾರಕಿಹೊಳಿ ಅವರು ತಾವು 2028ರ ವೇಳೆಗೆ ಸಿಎಂ ಗಾದಿಗೆ ಅಪೇಕ್ಷೆಪಡುವುದಾಗಿ ತಿಳಿಸಿದ್ದಾರೆ.

ತುಮಕೂರಿನಲ್ಲಿ ನಡೆದ ವಾಲ್ಮೀಕಿ ಸಮುದಾಯದ ಅಭಿನಂದನಾ ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಮಾತಿಗೆ ಸತೀಶ್‌ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಮೊದಲು ಮಾತನಾಡಿದ ಕೆ.ಎನ್‌. ರಾಜಣ್ಣ, ನಮ್ಮ ಸಮಾಜಕ್ಕೆ ಮುಖ್ಯಮಂತ್ರಿ ಸ್ಥಾನ ದೊರಕಬೇಕು ಅನ್ನೋದು ನಮ್ಮೆಲ್ಲರ ಅಭಿಲಾಷೆ. ನನಗೆ ಮುಖ್ಯಮಂತ್ರಿ ಆಗೋ ಅಭಿಲಾಷೆ ಇಲ್ಲ. ಆದ್ರೆ ನಮ್ಮ ಸಮಾಜದಿಂದ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗಲಿ ಅನ್ನೋದು ನಮ್ಮ ಆಸೆ.

ಕೆಲವರು ಬಂದಿಲ್ಲ ಅಂದ್ರೆ ಅವರು ನಮ್ಮ ಸಮಾಜದ ಪರವಾಗಿಲ್ಲ ಅಂತಲ್ಲ. ಅವರು ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಇದ್ದಾರೆ. ಪೂಜ್ಯ ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಸಮುದಾಯದ ಬೇಡಿಕೆಗಳನ್ನು ತಿಳಿಸಿದ್ದಾರೆ. ಆ ಅನಿಸಿಕೆಗಳನ್ನ ಈಡೇರಿಸುವ ಬಗ್ಗೆ ಸತೀಶ್ ಜಾರಕಿಹೊಳಿ ಮಾತನಾಡಿದ್ದಾರೆ. ಮುಖ್ಯಮಂತ್ರಿಯವರನ್ನ ಭೇಟಿ ಮಾಡಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಮಾಡ್ತೀವಿ ಅನ್ನೋ ಭರವಸೆಯಿದೆ.

2008ರ ವಿಧೇಯಕದಿಂದ ಹೆಚ್ಚಿನ ಶಾಸಕರು ಆಯ್ಕೆಯಾಗಲು ಸಾಧ್ಯವಾಗಿದೆ. 1998ರಲ್ಲಿ ನಾನು ಒಳ್ಳೆ ರೀತಿಯಲ್ಲೋ, ಕೆಟ್ಟ ರೀತಿಯಲ್ಲೋ ವಿಧಾನ ಪರಿಷತ್ ಸದಸ್ಯನಾದೆ. ನಮ್ಮ ಜಿಲ್ಲೆಯಲ್ಲಿರುವ ಅಸಹಾಯಕ ಸಮುದಾಯಗಳು ನನಗೆ ಈ ಸ್ಥಾನಮಾನ ನೀಡಿದ್ದಾರೆ. ಎಲ್ಲ ಜಾತಿಯವರು ನನಗೆ 80ರಿಂದ 90% ಮತ ನನಗೆ ನೀಡಿ ನನ್ನನ್ನ ಗೆಲ್ಲಿಸಿದ್ದಾರೆ. ಸಿದ್ದರಾಮಯ್ಯನವ್ರು ಮೂರು ಜನ ಎಸ್‌ಟಿ ಸಮುದಾಯದವ್ರನ್ನ ಮಂತ್ರಿ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಅಹಿಂದ ಸಮುದಾಯದವರು ಎಲ್ಲಾ ಒಟ್ಟಾದಾಗ ಮಾತ್ರ ರಾಜಕೀಯ ಪ್ರಾತಿನಿಧ್ಯ ಸಿಗೋಕೆ ಸಾಧ್ಯ.

ಇದನ್ನೂ ಓದಿ: Viral News: ಮುಖ್ಯಮಂತ್ರಿಗಳೇ ಎಣ್ಣೆ ರೇಟ್‌ ಜಾಸ್ತಿ ಮಾಡ್ಬೇಡಿ; BPL ಕಾರ್ಡ್‌ದಾರನ ವಾರ್ಷಿಕ ಲೆಕ್ಕ ಮುಂದಿಟ್ಟ ಕುಡುಕರ ಸಂಘ!

ನಮ್ಮ ಜಿಲ್ಲೆಯಲ್ಲಿ ಬಲಾಡ್ಯರು ಹೆಚ್ಚಿದ್ದಾರೆ. ಮೊದಲೆಲ್ಲ ನಮ್ಮ ಸಮುದಾಯದಲ್ಲಿ ಒಬ್ಬರೋ, ಇಬ್ಬರದ್ದು ಕಾರು ಇರ್ತಿದ್ವು. ಈಗ ಇಲ್ಲಿ ನೋಡಿದ್ರೆ ಜನಗಳಿಗಿಂತ ಜಾಸ್ತಿ ಕಾರುಗಳಿವೆ ಎಂದರು.

ನಂತರ ಮಾತನಾಡಿದ ಸತೀಶ್‌ ಜಾರಕಿಹೊಳಿ, ಅಕ್ಕಿ ಕೊಡಲು ಪ್ರಯತ್ನ ಮಾಡ್ತಾ ಇದ್ದೀವಿ. ಎಲ್ಲ ರಾಜ್ಯಗಳಿಂದ, ಖಾಸಗಿ ಕಡೆಯಿಂದನೂ ಕೂಡ ಸಂಗ್ರಹ ಮಾಡಲಿಕ್ಕೆ ಪ್ರಯತ್ನ ಮಾಡ್ತಾ ಇದ್ದೇವೆ. ಸದನದ ಹೊರಗಡೆ ಹೋರಾಟ ಮಾಡಲು ಎಲ್ಲರಿಗೂ ಅಧಿಕಾರ ಇದೆ. ಬೇಕಾದ ಹಾಗೆ ಮಾಡಬಹುದು. ನಾವು ಚುನಾವಣೆ ವೇಳೆ ಭಾಷಣೆ ಮಾಡಿದ್ದು, ಈಗ ಕೊಡುತ್ತಿರುವ 5 ಕೆಜಿ ಅಕ್ಕಿಗೆ ಇನ್ನೊಂದು 5 ಕೆಜಿ ಸೇರಿಸಿ ಕೊಡುತ್ತೇವೆ. 5 + 5 ಅಂತ ಹೇಳಿದ್ದೇವೆ ಎಂದು ತಿಳಿಸಿದರು.

ಸತೀಶ್ ಜಾರಕಿಹೊಳಿ ಸಿಎಂ ಆಗಬೇಕು ಎಂಬ ಕೆ.ಎನ್.ರಾಜಣ್ಣ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಗಲ್ಲ ಅದು ಮುಂದೆ.. ಮುಂದೆ. ಅದು ಭವಿಷ್ಯತ್‌ನಲ್ಲಿ. ಭವಿಷ್ಯತ್ ನಲ್ಲಿ ನಾನು ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇದೆ. ಮುಂದಿನ ಅವಧಿಗೆ ನಾನು ಟ್ರೈ ಮಾಡ್ತೀನಿ ಎಂದರು.

Exit mobile version