ಬೆಳಗಾವಿ: ಹಿಂದು ಪದಕ್ಕೆ ಪರ್ಷಿಯನ್ ಡಿಕ್ಷ್‌ನರಿಯಲ್ಲಿ ನೀಡಿರುವ ಕೀಳು ಅರ್ಥವನ್ನು ಹೊಂದಿದೆ ಎನ್ನುವ ತಮ್ಮ ಮಾತನ್ನು ಬಲವಾಗಿ ಸಮರ್ಥನೆ ಮಾಡಿಕೊಂಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಹಿಂದು ಪದದ ಕುರಿತು ಭಾಷಣದ ವಿಡಿಯೋ ಎಲ್ಲೆಡೆ ಹರಿದಾಡಿದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಡಿಕ್ಷ್‌ನರಿಯಲ್ಲಿ ಹಿಂದು ಪದಕ್ಕೆ ಏನು ಬಳಕೆ ಮಾಡಿದ್ದಾರೆ ಎಂದು ತೆಗೆದುನೋಡಿ. ಹಿಂದು ಪದಕ್ಕೆ ಕೆಟ್ಟ ಶಬ್ದ ಬಳಸಿದ್ದಾರೆ ನೋಡಿ ಎಂದಿದ್ದೇನೆ. ಡಿಕ್ಷ್‌ನರಿಯಲ್ಲಿ ಹಿಂದು ಪದಕ್ಕೆ ಅಶ್ಲೀಲ ಅರ್ಥ ಇದೆ. ಇದರ ಬಗ್ಗೆ ವಾಜಪೇಯಿ ಅವರೂ ಸೇರಿ ಅನೇಕರು ಮಾತನಾಡಿದ್ದಾರೆ. ನಾನು ಯಾರ ಪರವಾಗಿಯೂ ವಿರೋಧವಾಗಿಯೂ ಇಲ್ಲ. ನಾವು ಮನುಷ್ಯರ ಪರವಾಗಿದ್ದೇವೆ, ಅದರ ನ್ಯೂನತೆಗಳನ್ನು ನಾನು ಹೇಳಿದ್ದೇನೆ ಎಂದು ತಮ್ಮ ಮಾತನ್ನು ಸಮರ್ಥನೆ ಮಾಡಿಕೊಂಡರು.
ಇದನ್ನೂ ಓದಿ | Satish Jarakiholi | ʼಕೀಳುʼ ಅರ್ಥವನ್ನು ಹುಡುಕಿಕೊಟ್ಟಿದ್ದಕ್ಕೆ BJPಯವರು ನನಗೆ ಕೃತಜ್ಞರಾಗಿರಬೇಕು ಎಂದ ಜಾರಕಿಹೊಳಿ
ಕಾಂಗ್ರೆಸ್ ಪಕ್ಷದ ವೇದಿಕೆಯಲ್ಲಿ ನಾನು ಮಾತನಾಡಿಲ್ಲ. ಕಾಂಗ್ರೆಸ್‌ಗೂ ಇದಕ್ಕೂ ಸಂಬಂಧ ಇಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದೆ, ಬೇಕಿದ್ದರೆ ತನಿಖೆ ನಡೆಸಲಿ. ಇದರ ಕುರಿತು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಬೇಕಿದ್ದರೆ ಸಮಿತಿ ರಚಿಸಿ ತನಿಖೆ ನಡೆಸಲಿ. ತಪ್ಪು ಎಂದು ಸಾಬೀತಾದರೆ ರಾಜೀನಾಮೆ ನೀಡುತ್ತೇನೆ. ಕ್ಷಮೆಯ ಪ್ರಶ್ನೆಯೇ ಇಲ್ಲ ಎಂದರು.
ಇದನ್ನೂ ಓದಿ | Swabhimani hindu | ಸತೀಶ್ ಜಾರಕಿಹೊಳಿ ಹೇಳಿಕೆಗೆ ರಾಹುಲ್, ಸಿದ್ದರಾಮಯ್ಯ ಸಮ್ಮತಿಯೇ?: ಬೊಮ್ಮಾಯಿ ಪ್ರಶ್ನೆ