ಬೆಂಗಳೂರು: ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಕೈ ಅಭ್ಯರ್ಥಿ ವಿಶ್ವಾಸ್ ವೈದ್ಯ ಅವರು 71224 ಮತಗಳನ್ನು ಪಡೆದುಕೊಂಡು ಬಿಜೆಪಿಯ ರತ್ನಾ ಮಾಮನಿ ವಿರುದ್ಧ 14,695 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಬಿಜೆಪಿ ಅಭ್ಯರ್ಥಿ ರತ್ನಾ ಅವರು 65,529 ಮತಗಳನ್ನು ಪಡೆದುಕೊಂಡರೆ, ಜೆಡಿಎಸ್ ಅಭ್ಯರ್ಥಿ ಸೌರಭ್ ಚೋಪ್ರಾ ಅವರು 14,695 ಮತಗಳನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ(Saundatti Yellamma Election Results).
2023ರ ಚುನಾವಣಾ ಅಭ್ಯರ್ಥಿಗಳು: ಬಿಜೆಪಿಯಿಂದ ರತ್ನಾ ವಿಶ್ವನಾಥ್ ಮಾಮನಿ ಅವರು ಕಣದಲ್ಲಿದ್ದರು. ಕಳೆದ ಬಾರಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದ ವಿಶ್ವಾಸ್ ವೈದ್ಯ ಅವರಿಗೆ ಮತ್ತೆ ಕಾಂಗ್ರೆಸ್ ಟಿಕೆಟ್ ನೀಡಿತ್ತು.
ಇದನ್ನೂ ಓದಿ: Karnataka Election Results Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ; ಡಬಲ್ ಎಂಜಿನ್ನ ಕೊಂಡಿ ಕಳಚಿದ ‘ಕೈ’
ಇದನ್ನೂ ಓದಿ: Karnataka Election Results Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ; ಡಬಲ್ ಎಂಜಿನ್ನ ಕೊಂಡಿ ಕಳಚಿದ ‘ಕೈ’
2018ರ ಚುನಾವಣೆಯ ಫಲಿತಾಂಶ ಏನಾಗಿತ್ತು?
2008ರ ಮುಂಚೆ ಸವದತ್ತಿ ಯಲ್ಲಮ್ಮ ಕ್ಷೇತ್ರವನ್ನು ಪರಸಗಡ ಎಂದು ಗುರುತಿಸಲಾಗಿತ್ತು. ಕ್ಷೇತ್ರಮರು ವಿಂಗಡಣೆಯಲ್ಲಿ ಸವದತ್ತಿ ಯಲ್ಲಮ್ಮ ಎಂದು ಬದಲಾಯಿತು. 1951ರಿಂದಲೂ ಈ ಕ್ಷೇತ್ರವು(ಪರಸಗಡ) ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಒಂದೆರಡು ಬಾರಿ ಪಕ್ಷೇತರರು ಕೂಡ ಇಲ್ಲಿಂದ ಗೆದ್ದಿದ್ದಾರೆ. 2018ರಲ್ಲಿ ಈ ಬಿಜೆಪಿಯ ಆನಂದ್ ಮಾಮನಿ ಅವರು ಈ ಕ್ಷೇತ್ರವನ್ನು ಗೆದ್ದುಕೊಂಡಿದ್ದರು. ಅವರಿಗೆ 62480 ಮತಗಳು ಬಂದಿದ್ದವು. ಪಕ್ಷೇತರರಾಗಿ ಸ್ಪರ್ಧಿಸಿದ್ದ 56189 ಮತಗಳನ್ನು ಪಡೆದುಕೊಂಡರೆ, ಕಾಂಗ್ರೆಸ್‌ನ ವಿಶ್ವಾಸ್ ವೈದ್ಯ ಅವರು 30018 ಮತಗಳನ್ನು ಪಡೆದುಕೊಂಡು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.