Site icon Vistara News

ಚನ್ನಗಿರಿ: ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಸ್ಕೂಲ್‌ ಬಸ್‌, ಮಕ್ಕಳು ಪಾರು

davanagere accident

ದಾವಣಗೆರೆ: ಚನ್ನಗಿರಿ ತಾಲೂಕಿನ ತ್ಯಾವಣಗಿ ಗ್ರಾಮದ ಸಮೀಪ ಕವಳಿ ತಾಂಡದ ಬಳಿ ಶಾಲಾ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಬಿದ್ದಿದೆ. ಅದೃಷ್ಟವಶಾತ್‌ ಅದರಲ್ಲಿದ್ದ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೂಲಂಬಿ ಗ್ರಾಮದ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಶಾಲಾ ಬಸ್‌ ಇದಾಗಿದ್ದು, ಮಕ್ಕಳನ್ನು ಕೂರಿಸಿಕೊಂಡು ಹೊರಟಿತ್ತು. ಈ ಸಂದರ್ಭದಲ್ಲಿ ಜಿಟಿಜಿಟಿ ಮಳೆಯೂ ಸುರಿಯುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್‌ ರಸ್ತೆ ಬದಿಯ ಬತ್ತದ ಗದ್ದೆಗೆ ಬಿದ್ದಿದೆ. ಬಸ್‌ನಲ್ಲಿದ್ದ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯರು ಮಕ್ಕಳ ರಕ್ಷಣೆಗೆ ಧಾವಿಸಿ ಬಂದಿದ್ದರು.

ಈ ಭಾಗದಲ್ಲಿ ಕಳೆದ 3 ದಿನಗಳಿಂದಲೂ ಸತತವಾಗಿ ಮಳೆಯಾಗುತ್ತಿರುವುದು ಕೂಡಾ ವಾಹನ ದಿಕ್ಕು ತಪ್ಪಿ ಗದ್ದೆ ಉರುಳಲು ಕಾರಣ ಎಂದು ಹೇಳಲಾಗುತ್ತಿದೆ.

ಬಿರುಕು ಬಿಟ್ಟ ಹದಡಿ ಕೆರೆ ಏರಿ.

ಮಳೆಯಿಂದ‌ ಬಿರುಕು ಬಿಟ್ಟ ಕೆರೆ ಏರಿ

ನಿರಂತರ ಮಳೆಯಿಂದಾಗಿ ದಾವಣಗೆರೆಯ ಹದಡಿಕೆರೆ ತುಂಬಿದ್ದು, ಕೆರೆ ಏರಿ ನಾಲ್ಕೈದು ಅಡಿಗಳಷ್ಟು ಕುಸಿದಿದೆ. ಆದರೆ, ಅದೇ ಏರಿ ಮೇಲೆ ಸಾವಿರಾರು ವಾಹನಗಳು ಓಡಾಡುತ್ತಿರುವುದು ಆತಂಕ ಮೂಡಿಸಿದೆ.

ದಾವಣಗೆರೆಯಿಂದ ಚನ್ನಗಿರಿ ಚಿಕ್ಕಮಗಳೂರು ಸೇರಿದಂತೆ ಹಲವು ಕಡೆ ಸಂಪರ್ಕ ಕಲ್ಪಿಸುವ ಕೆರೆ ಏರಿ ಇದಾಗಿದ್ದು, ಅಪಾಯದ ಸ್ಥಿತಿ ತಲುಪಿದೆ. ಇದರಲ್ಲಿ ಶಾಲಾ ವಾಹನಗಳು ಕೂಡಾ ಚಲಿಸುತ್ತಿವೆ. ಏನಾದರೂ ಅಪಾಯ ಉಂಟಾದರೆ ಕೊಚ್ಚಿ ಹೋಗುವ ಆತಂಕ ಎದುರಾಗಿದೆ. ಕೆರೆ ಏರಿಯನ್ನು ಭದ್ರಪಡಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

ಇದನ್ನೂ ಓದಿ| ACCIDENT | ಯಾದಗಿರಿಯಲ್ಲಿ ಭೀಕರ ಅಪಘಾತ, ಒಂದೇ ಕುಟುಂಬದ ಆರು ಮಂದಿ ಸಾವು

Exit mobile version