ರಾಮನಗರ: ಮಕ್ಕಳನ್ನು ಹೊತ್ತು ಸಾಗುತ್ತಿದ್ದ ಸ್ಕೂಲ್ ಬಸ್ (School Bus) ಒಂದು ನಿಯಂತ್ರಣ ತಪ್ಪಿ ಹಳ್ಳಕ್ಕೆ ನುಗ್ಗಿದ ಘಟನೆ ರಾಮ ನಗರದ ಚನ್ನಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಕೇಂದ್ರೀಯ ವಿದ್ಯಾಲಯದ ಸ್ಕೂಲ್ ಬಸ್ ಇದಾಗಿದೆ.
ಚನ್ನಪಟ್ಟಣ ಕೇಂದ್ರೀಯ ವಿದ್ಯಾಲಯಕ್ಕೆ ಸೇರಿದ ಈ ಬಸ್‌ನಲ್ಲಿ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಬಸ್ಸು ಏಕಾಏಕಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳದ ಕಡೆಗೆ ಧಾವಿಸಿತು. ಅಂತಿಮ ಕ್ಷಣದಲ್ಲಿ ನಿಯಂತ್ರಣ ಮಾಡಿಕೊಂಡಿದ್ದರಿಂದ ನೇರವಾಗಿ ಹಳ್ಳಕ್ಕೆ ಬೀಳುವುದು ತಪ್ಪಿತು. ಇದರಿಂದ ದೊಡ್ಡ ಮಟ್ಟದ ಜೀವಾಪಾಯ ತಪ್ಪಿತು.
ಬಸ್ ಆ ಕಡೆ ಮೇಲೂ ಅಲ್ಲ, ಈ ಕಡೆ ಕೆಳಗೂ ಅಲ್ಲ ಎಂಬ ಅತಂತ್ರ ಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡಿದ್ದು, ಬಳಿಕ ಅದನ್ನ ಮೇಲಕ್ಕೆ ಎತ್ತಲಾಯಿತು. ಬಿದ್ದ ರಭಸಕ್ಕೆ ಇಬ್ಬರು ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್ಸಿನಲ್ಲಿದ್ದ ವಿದ್ಯಾರ್ಥಿಯೊಬ್ಬ ಕುತೂಹಲದಿಂದ ಗೇರ್ ಹಾಕಿದ ಹಿನ್ನೆಲೆಯಲ್ಲಿ ಬಸ್‌ಗಳು ನಿಯಂತ್ರಣ ಕಳೆದುಕೊಂಡು ಈ ರೀತಿ ಅವಘಡಕ್ಕೆ ಕಾರಣವಾಯಿತು ಎಂದು ಹೇಳಲಾಗುತ್ತಿದೆ. ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ | Road Accident : ಏರು ಹತ್ತಲಾಗದೇ ಹಿಂದಕ್ಕೆ ಬಂದು ಕಾರಿನ ಮೇಲೆ ಬಿದ್ದ ಲಾರಿ; ಒಬ್ಬನ ಕಾಲು ನಜ್ಜುಗುಜ್ಜು