ಬೆಂಗಳೂರು: 5, 8 ಮತ್ತು 9ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ (Board exams) ಶಾಲಾ ಶಿಕ್ಷಣ (School Education) ಇಲಾಖೆ ಪರಿಷ್ಕೃತ ಸುತ್ತೋಲೆ ಹೊರಡಿಸಿದೆ.
5 ಮತ್ತು 8ನೇ ತರಗತಿಗೆ ಮಧ್ಯವಾರ್ಷಿಕ ಪರೀಕ್ಷೆ (SA-1) ಮತ್ತು ಮೌಲ್ಯಾಂಕನ ಸೇರಿ ಫಲಿತಾಂಶ ನೀಡಬೇಕು ಎಂದು ಹೇಳಲಾಗಿದೆ. 9ನೇ ತರಗತಿಗೆ ಅಂತಿಮ ವಾರ್ಷಿಕ ಪರೀಕ್ಷೆಯಲ್ಲಿನ ಅಂಕಗಳ ಆಧಾರದ ಮೇಲೆ ಫಲಿತಾಂಶ ಪ್ರಕಟಿಸಬೇಕು ಎಂದು ಸೂಚಿಸಲಾಗಿದೆ.
5ನೇ ತರಗತಿ ಬೋರ್ಡ್ ಪರೀಕ್ಷೆಗೆ 2023 -24ನೇ ಸಾಲಿನ ಶೈಕ್ಷಣಿಕ ಮಾರ್ಗಸೂಚಿಯಲ್ಲಿನ ನವೆಂಬರ್‌ನಿಂದ ಫೆಬ್ರವರಿ 2024ರವರೆಗಿನ ಪಠ್ಯ ವಸ್ತು ಹಾಗೂ ಎಂಟನೇ ತರಗತಿಗೆ 2023ರ ಜೂನ್‌ನಿಂದ ಫೆಬ್ರವರಿ 2024ರ ವರೆಗಿನ ಪಠ್ಯ ವಸ್ತು ಪರಿಗಣಿಸಬೇಕೆಂದು ಸೂಚಿಸಲಾಗಿದೆ.
9ನೇ ತರಗತಿಗೆ ಮೌಲ್ಯಾಂಕನದಲ್ಲಿ ಪ್ರಥಮ ಭಾಷೆ 100 ಅಂಕ, ದ್ವಿತೀಯ, ತೃತೀಯ ಭಾಷೆ, ಕೋರ್ ವಿಷಯಗಳಿಗೆ 80 ಅಂಕಗಳಂತೆ 500 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಬೇಕು. ಅಂತಿಮವಾಗಿ ಆಂತರಿಕ ಮೌಲ್ಯ ಮಾಪನದ ಅಂಕ, ಎಸ್ಎ-2 ಬದಲಾಗಿ ನಡೆಸುವ ಮೌಲ್ಯಾಂಕನ ಲಿಖಿತ ಪರೀಕ್ಷೆಯ ಅಂಕಗಳನ್ನು ಪರಿಗಣಿಸಬೇಕೆಂದು ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಸರ್ಕಾರಿ ಶಾಲೆಗಳಲ್ಲಿ ಸ್ವಚ್ಛತಾ ಸಿಬ್ಬಂದಿ ನೇಮಿಸಿ; ಸಿಎಂಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ