ವಿಜಯಪುರ: ಜಿಲ್ಲೆಯ ಭೀಮಾತೀರದ ಇಂಡಿ ಪಟ್ಟಣದ ಅಂಜುಮನ್ ಕಾಲೇಜು ರಸ್ತೆಯಲ್ಲಿ ಹಾಡಹಗಲೇ ಶಿಕ್ಷಕಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಘಟನೆಯಲ್ಲಿ (Murder Case) ಶಿಕ್ಷಕಿ ಮಗ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ.
ದಿಲಶಾದ್ ಹವಾಲ್ದಾರ್ (31) ಮೃತ ಶಿಕ್ಷಕಿ. ಇವರ ಮಗನ ಮೇಲೆಯೂ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಆತನಿಗೆ ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ಇಂಡಿ ಶಹರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಷ್ಟೊಂದು ಭೀಕರವಾಗಿ ಕೊಲೆ ಮಾಡಿದ ಕಾರಣ ಇನ್ನಷ್ಟೇ ತಿಳಿಯಬೇಕಾಗಿದೆ.
ಇದನ್ನೂ ಓದಿ | Family Dispute: ಪ್ರೀತಿಸಿ ಮದುವೆಯಾದ ಪತ್ನಿಯಿಂದಲೇ ಪ್ರಾಣ ಬಿಟ್ಟನಾ ಪತಿ?; ಕುಟುಂಬಸ್ಥರ ಆರೋಪವೇನು?