ರಾಯಚೂರು: ನಗರದ ಆರ್‌ಟಿಒ ಸರ್ಕಲ್ ಬಳಿ ಸ್ಕಾರ್ಪಿಯೊ (Scorpio) ಹಾಗೂ ಬೈಕ್ (Bike) ಮಧ್ಯೆ ರಸ್ತೆ ಅಪಘಾತ (Road Accident) ಸಂಭವಿಸಿದ್ದು, ಬೈಕ್ ಸವಾರ ಸಿಬ್ಬಂದಿ ಮೃತಪಟ್ಟಿದ್ದಾರೆ ಹಿಂಬದಿ ಸವಾರನಿಗೆ ತೀವ್ರ ಗಾಯಗಳಾಗಿವೆ.
ಚಂದ್ರಕಾಂತ್ (34) ಮೃತ ಆರ್‌ಟಿಒ ಸಿಬ್ಬಂದಿ. ಇವರ ಜತೆ ಬೈಕ್‌ನಲ್ಲಿದ್ದ ನಿಲೇಶ್‌ಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನಗರದ ಆರ್‌ಟಿಒ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದ ಚಂದ್ರಕಾಂತ್ ಅವರು ಬೈಕ್‌ನಲ್ಲಿ ಆರ್‌ಟಿಒ ಸರ್ಕಲ್‌ನಿಂದ ಬಿಆರ್‌ಬಿ ಸರ್ಕಲ್ ಕಡೆ ಹೊರಟಿದ್ದರು. ಈ ವೇಳೆ ವಿರುದ್ಧ ದಿಕ್ಕಿನಲ್ಲಿ ಅದೇ ಕಡೆ ಬರುತ್ತಿದ್ದ ಸ್ಕಾರ್ಪಿಯೊ
ಚಾಲಕನ ನಿಯಂತ್ರಣ ತಪ್ಪಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಚಂದ್ರಕಾಂತ್‌ಗೆ ತೀವ್ರ ಗಾಯಗಳಾಗಿದ್ದು, ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ: RBI MPC Meet : ಆರ್‌ಬಿಐ ರೆಪೊ ದರ 0.25% ಏರಿಕೆ ಸಾಧ್ಯತೆ, ಸಾಲದ ಇಎಂಐ, ಠೇವಣಿ ದರ ಹೆಚ್ಚಳ ನಿರೀಕ್ಷೆ
ಸ್ಕಾರ್ಪಿಯೊ ವಾಹನ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಯಚೂರು ನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.