ಗೌರಿಬಿದನೂರು: ಎಸ್‌ಸಿ ಎಸ್‌ಟಿ ಮೀಸಲು ಪ್ರಮಾಣ ಹೆಚ್ಚಳದ ಬೆನ್ನಲ್ಲೇ ಇನ್ನೊಂದು ಸಮುದಾಯ ಇದೀಗ ಹೆಚ್ಚಿನ ಮೀಸಲಿಗೆ, ಮೀಸಲು ಬದಲಾವಣೆಗೆ ಒತ್ತಾಯಿಸಲು ಮುಂದಾಗಿದೆ.
ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಒತ್ತಾಯ ಕೇಳಿಬಂದಿದೆ ಎಂದು ಸಚಿವ ಎಂ.ಟಿ.ಬಿ. ನಾಗರಾಜ್ ಗೌರಿಬಿದನೂರಿನಲ್ಲಿ ಹೇಳಿದರು. ಒಕ್ಕಲಿಗ ಸಮುದಾಯಕ್ಕಿರುವ ಮೀಸಲಾತಿಯನ್ನು ಶೇಕಡಾ ೪ರಿಂದ ೮ಕ್ಕೇರಿಸಬೇಕು ಎಂದು ಆದಿಚುಂಚನಗಿರಿ ಮಠ ಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಆಗ್ರಹಿಸಿದ ಬೆನ್ನಿಗೇ ಎಂ.ಟಿ.ಬಿ ಹೇಳಿಕೆ ಕೇಳಿಬಂದಿದೆ.
ʻʻಕುರುಬ ಸಮುದಾಯವನ್ನು ಸಹ ಎಸ್ಟಿ ಗೆ ಸೇರಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ. ಬೇರೆ ಬೇರೆ ಸಣ್ಣ ಸಮುದಾಯಗಳೂ ಮೀಸಲಾತಿ ಕೇಳಿವೆ. ಮುಂದಿನ ದಿನಗಳಲ್ಲಿ ಸರ್ಕಾರ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕೊಡುತ್ತೇವೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲು ಕ್ರಮ ವಹಿಸುತ್ತೇವೆʼʼ ಎಂದು ಹೇಳಿದರು.
ಈಗಾಗಲೇ ವಾಲ್ಮೀಕಿ ಸಮುದಾಯ ಪರಿಶಿಷ್ಟ ಪಂಗಡದ ಮೀಸಲು ಪ್ರಮಾಣವನ್ನು ಹೆಚ್ಚಿಸಬೇಕೆಂಬ ಬೇಡಿಕೆ ಇಟ್ಟು ಪ್ರತಿಭಟನೆ ನಡೆಸಿತ್ತು. ಅದರಂತೆ ಹೆಚ್ಚಳವೂ ಆಗಿದೆ. ಈಗ ಹೆಚ್ಚಾದ ಮೀಸಲಿನಲ್ಲಿ ಕುರುಬ ಸಮುದಾಯವೂ ಪಾಲು ಕೇಳುವಂತಿದೆ. ಈ ಬೇಡಿಕೆ ಹೋರಾಟದ ರೂಪ ಪಡೆಯಲಿದೆಯೇ ಎಂದು ಕಾದು ನೋಡಬೇಕಾಗಿದೆ.
ಇದನ್ನೂ ಓದಿ | SCST ಮೀಸಲು| ಒಕ್ಕಲಿಗರಿಂದಲೂ ಮೀಸಲು ಹೆಚ್ಚಳ ಬೇಡಿಕೆ: 4%ನಿಂದ 12ಕ್ಕೆ ಏರಿಸಿ ಎಂದ ನಿರ್ಮಲಾನಂದನಾಥ ಶ್ರೀ